ಮೈಸೂರು: ಮೈಸೂರಿನ ಜನತೆಗೆ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಮೈಸೂರಿನಿಂದ ತಿರುಪತಿಗೆ ತೆರಳುವವರಿಗಾಗಿ ತಿರುಪತಿ ಸಮೀಪ ರೇನುಗುಂಟವರೆಗಿನ ಮಾರ್ಗದಲ್ಲಿ ನೂತನ ರೈಲು ಆರಂಭಿಸಲಾಗಿದೆ. ಮೈಸೂರು-ರೆಣಿಗುಂಟ ನಡುವೆ ವಾರಕ್ಕೊಮ್ಮೆ ಹೊಸ ರೈಲು ಸಂಚಾರ ಜೂ.1ರಿಂದ ಅಂದರೆ ನಾಳೆಯಿಂದ ಆರಂಭವಾಗಲಿದೆ.
ತಿರುಪತಿಗೆ ತೆರಳುವವರಿಗೆ ಅನುಕುಲವಾಗಲೆಂದು ಈ ರೈಲು ಸೇವೆ ಆರಂಭಿಸಲಾಗಿದ್ದು ಪ್ರತಿ ಶುಕ್ರವಾರ ಮೈಸೂರಿನಿಂದ ರಾತ್ರಿ 10:55 ಗಂಟೆಗೆ ರೈಲು ಹೊರಡಲಿದೆ. 11:33ಕ್ಕೆ ಮಂಡ್ಯ, ಜೂ.2 ರ ಮಧ್ಯರಾತ್ರಿ 1:20ಕ್ಕೆ ಬೆಂಗಳೂರು ನಗರ, 1:35ಕ್ಕೆ ಬೆಂಗಳೂರು ಕಾಂಟೋನ್ಮೆಂಟ್, ಮುಂಜಾನೆ 4:23ಕ್ಕೆ ಜೋಳಾರಪೆಟ್ಟೈ, 5:33ಕ್ಕೆ ಕಟಪಾಡಿ ಹಾಗೂ ಬೆಳಗ್ಗೆ 8:25ಕ್ಕೆ ಆಂಧ್ರಪ್ರದೇಶದ ರೆಣಿಗುಂಟ ತಲುಪಲಿದೆ. ಹಾಗೆಯೆ ಪ್ರತಿ ಶನಿವಾರ ಈ ರೈಲು ರೆಣಿಗುಂಟದಿಂದ ಸಂಜೆ 5:50ಕ್ಕೆ ಹೊರಡಲಿದ್ದು, 7:40ಕ್ಕೆ ಕಟಪಾಡಿ, 9:30ಕ್ಕೆ ಜೋಳರಪೆಟ್ಟೈ, 11:45ಕ್ಕೆ ಬೆಂಗಳೂರು ಕಾಂಟೋನ್ಮೆಂಟ್, ಮಧ್ಯರಾತ್ರಿ 12:30ಕ್ಕೆ ಬೆಂಗಳೂರು ನಗರ, 2 ಗಂಟೆಗೆ ಮಂಡ್ಯ, ಭಾನುವಾರ ಮುಂಜಾನೆ 3:15ಕ್ಕೆ ಮೈಸೂರಿಗೆ ರೈಲು ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿದಲಾಗಿದೆ. ತಿರುಪತಿಗೆ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ವಾರದ ರಜೆ ದಿನಗಳಲ್ಲಿ ಈ ರೈಲು ಓಡಿಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
good news for those traveling from Mysore to Tirupati. The new weekly train service between Mysore-renigunta will commence from June 1.