ಗಾಸಿಪ್ ಕನ್ನಡ ಅರ್ಥ – ಸುಲಭವಾಗಿ ಹೇಳುವುದಾದರೆ ಗಾಳಿಸುದ್ದಿ, ಸುಳ್ಳುಸುದ್ದಿ ಎಂದು ಕರೆಯಬಹುದು.
ಗಾಸಿಪ್ ನಾಮಪದ ಅರ್ಥ
1) ವದಂತಿ
2) ಗಾಸಿಪ್
3) ವಟಗುಟ್ಟುವವನು
4) ಸುಳ್ಳು ಗಡಿಬಿಡಿ ಮಾಡುವವನು
5) ವಿನುರಾಯತು
6) ಮೌಲ್ಯವಿಲ್ಲದ ಮಾತು
7) ಸತ್ಯವಲ್ಲದ ಮಾತು
8) ಸುಳ್ಳು, ಗಾಳಿಸುದ್ದಿ ಸಂದೇಶ ಹರಡುವವನು
9) ಪಾಲಿಮೋಲಿ
10) ಸುಳ್ಳು
11) ಸುಳ್ಳುಸುದ್ದಿ
ಗಾಸಿಪ್ ಕ್ರಿಯಾಪದ ಅರ್ಥ
1) ತಂಟೆಹೊಡೆ
2) ಹರಟೆಹೊಡೆ
3) ಹರಟೆ ಹಚ್ಚು
4) ಗಾಳಿಸುದ್ದಿ ಹಬ್ಬಿಸು
5) ಸುಳ್ಳುಸುದ್ದಿ ಹಬ್ಬಿಸು
6) ಅಪವಾದ ಮಾಡುವುದು
7) ವ್ಯಜವರ್ತ ಚಪ್ಪಟೆ
8) ಕಲ್ಪನೆ ಸುದ್ದಿ
ಗಾಸಿಪ್ ಪದ ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆ? ಹೇಗೆ ಬಳಕೆ ಮಾಡಲಾಗುತ್ತದೆ?
ಸಾಮಾನ್ಯವಾಗಿ ಯಾವುದೇ ವಿಷಯದ ಖಚಿತತೆ ಇಲ್ಲದೆ ಯಾರಾದರೂ ಇನ್ನೊಬ್ಬರ ಬಗ್ಗೆ, ಯಾವುದೇ ವಿಷಯದ ಬಗ್ಗೆ ಅನಿಖರ ಮಾತುಗಳನ್ನು ಆಡುವಾಗ ಸುಮ್ಮನಿರಿ ಗಾಸಿಪ್ ಹಬ್ಬಿಸಬೇಡಿ ಎಂದು ಹೇಳಲಾಗುತ್ತದೆ. ಇದರರ್ಥ ಸುಳ್ಳುಸುದ್ದಿ ಹಬ್ಬಿಸಬೇಡಿ, ವದಂತಿ ಹಬ್ಬಿಸಬೇಡಿ ಎಂದು.
ಗಾಸಿಪ್ ಪದವನ್ನು ಮಾಧ್ಯಮದವರು ಹೆಚ್ಚಾಗಿ ಬಳಸುತ್ತಾರೆ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಅನಿಖರ ಸುದ್ದಿ ಹೇಳುವಾಗ ಗಾಸಿಪ್ ಹರಡಿದೆ ಎಂದು ಬಳಕೆ ಮಾಡುತ್ತಾರೆ. ಪ್ರೇಮ ವದಂತಿಗಳನ್ನು ವರದಿ ಮಾಡುವಾಗ ಗಾಸಿಪ್ ಹರಡಿದೆ ಎಂದು ಬಳಕೆ ಮಾಡುತ್ತಾರೆ.