ಹಣ ಜಾಸ್ತಿ ಆದ್ರು ಪರವಾಗಿಲ್ಲ ಪ್ರೈವೇಟ್ ಆಸ್ಪತ್ರೆಗೆ ಹೋಗ್ತೀನಿ ಯಾಕಂದ್ರೆ ಕೆಲವು ಸರ್ಕಾರಿ ಆಸ್ತತ್ರೆಗಳ ಕಡೆ ಹೋದ್ರೆ ನಮಗಿರೋ ರೋಗಗಳ ಜೊತೆಗೆ ಇನ್ನೂ ಕೆಲವು ರೋಗಗಳ ಬರುತ್ತವೆ ಅನ್ನೋರೆ ಹೆಚ್ಚು. ಯಾಕ್ರಿ ಹಾಗಂತಿರಾ… ಅಂದ್ರೆ? ಅಲ್ಲಿನ ಸ್ವಚ್ಛತೆ, ಸೌಕರ್ಯಗಳ ಬಗ್ಗೆ ಒಂದೊಂದೆ ಸಂಮಸ್ಯೆಗಳನ್ನ ಕೆಲವು ಮಂದಿ ಹೇಳ್ತಾರೆ. ಆದ್ರೆ ಮೈಸೂರಿನ “ಸರ್ಕಾರಿ ಆಯುರ್ವೇದ ಹೈ-ಟೆಕ್ ಪಂಚಕರ್ಮ ಆಸ್ಪತ್ರೆ’ ಇದಕ್ಕೆಲ್ಲಾ ತದ್ವಿರುದ್ದ ಸರ್ಕಾರಿ ಆಸ್ಪತ್ರೆ. ಅಂದ್ರೆ ಮೂಗು ಮುರಿಯುವವರ ಚಿತ್ತವನ್ನು ತನ್ನತ್ತ ಮಾಡಿಕೊಳ್ಳುವಷ್ಟು ಆಕರ್ಷಣೀಯವಾಗಿ ತಲೆಯೆತ್ತಿ ನಿಂತಿದೆ.
ಹೌದು, ಮೈಸೂರಿನ ಅತ್ಯಂತ ಹಳೆಯ ಮೆಡಿಕಲ್ ಇನ್ಸ್ಟಿಟ್ಯೂಟ್ ಸರ್ಕಾರಿ ಆಯುರ್ವೇದ ಆಸ್ಪತ್ರೆಯ’ 100 ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಬೃಂದಾವನ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಆಯುರ್ವೇದಿಕ್ ಹೈ-ಟೆಕ್ ಪಂಚಕರ್ಮ ಆಸ್ತತ್ರೆಯು ಎಲ್ಲಾ ವಿಷಯದಲ್ಲಿ ಶ್ರೀಮಂತಿಕೆಯನ್ನು ಮೆರೆದಿದೆ. ಸ್ವಚ್ಛತೆ ಕಾಪಾಡುವಿಕೆಯಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ತಾನೇನು ಕಡಿಮೆ ಇಲ್ಲದಂತೆ ಎಲ್ಲಾ ಸೌಕರ್ಯಗಳಲ್ಲಿ ಗುಣಮಟ್ಟ ಹೊಂದಿದೆ. ಇನ್ನು ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೇ ಸದಾ ಈ ಆಸ್ಪತ್ರೆಯ ಅಭಿವೃದ್ದಿ ಮತ್ತು ರೋಗಿಗಳ ಸೇವೆಯಲ್ಲಿ ಯಾವುದೇ ಕುಂದು ಕೊರತೆ ಇಲ್ಲದಂತೆ ಎಚ್ಚರವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಈ ಆಸ್ಪತ್ರೆಯ (ಕಾಯ ಚಿಕಿತ್ಸಾ) ಉಪ-ವೈದ್ಯಕೀಯ ಅಧೀಕ್ಷಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆದ ಡಾ|| ರಾಜೇಂದ್ರ ವಿ ರವರು.
ಅಂದಹಾಗೆ ಈ ಆಸ್ಪತ್ರೆಯ ಇತರೆ ವೈಶಿಷ್ಟಗಳೇನು?, ಯಾವ ಎಲ್ಲಾ ಉಚಿತ ಸಮಸ್ಯೆಗಳು ಇಲ್ಲಿ ಲಭ್ಯ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಸಂಪೂರ್ಣ ಉಚಿತ ಚಿಕಿತ್ಸೆ ಮತ್ತು ಔಷಧಗಳು
ಈ ಆಸ್ಪತ್ರೆಯಲ್ಲಿ ಯಾವುದೇ ಸರ್ಕಾರಿ ಶುಲ್ಕವನ್ನು ಸ್ವೀಕರಿಸದೇ, ಎಲ್ಲಾ ರೀತಿಯ ಚಿಕಿತ್ಸೆ ಮತ್ತು ಔಷಧಿಗಳು ಸಂಪೂರ್ಣ ಉಚಿತವಾಗಿ ದೊರೆಯುತ್ತದೆ.
100 ಒಳರೋಗಿಗಳಿಗೆ ಹಾಸಿಗೆ ವ್ಯವಸ್ಥೆ
ಅಕ್ಟೋಬರ್ 2016 ರಲ್ಲಿ ನಿರ್ಮಾಣಗೊಂಡಿರುವ ಈ ಹೈ-ಟೆಕ್ ಆಸ್ತತ್ರೆಯು 100 ಒಳರೋಗಿಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯ ಉದ್ದೇಶಿತವಾಗಿ ನಿರ್ಮಾಣಗೊಂಡಿದೆ. ಪ್ರಸ್ತುತ 60 ಒಳರೋಗಿಗಳಿಗೆ ಬೆಡ್ ವ್ಯವಸ್ಥೆ ಹೊಂದಿದೆ. ಇನ್ನೂ 40 ಕ್ಕೂ ಹೆಚ್ಚು ಒಳರೋಗಿ ಬೆಡ್ ವ್ಯವಸ್ಥೆ ಸೌಲಭ್ಯವನ್ನು ಅಭಿವೃದ್ಧಿಗೊಳಿಸಲಾಗಿದೆ.
ಹೈಟೆಕ್ ಎಂಬ ಹೆಸರಿಗೆ ತಕ್ಕಂತೆ ಆಯುರ್ವೇದ ಪಂಚಕರ್ಮ ಹಾಸ್ಪಿಟಲ್ನಲ್ಲಿ ಎಲ್ಲಾ ಬಗೆಯ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗುತ್ತೆ. ವಿಶೇಷವಾಗಿ 28-30 ಪ್ರಮುಖ ರೋಗಗಳಿಗೆ ಚಿಕಿತ್ಸೆ ದೊರೆಯಲಿದ್ದು, ಅವುಗಳಲ್ಲಿ ಚರ್ಮ ಕಾಯಿಲೆಗಳು, ನರರೋಗ, ಕೀಲುನೋವು ಮತ್ತು ಮಂಡಿ ನೋವಿನ ಸಮಸ್ಯೆಯುಳ್ಳವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ.
ಹೊರರೋಗಿಗಳ ಚಿಕಿತ್ಸೆ ಕುರಿತು
ದಿನನಿತ್ಯ ಈ ಆಸ್ಪತ್ರೆಯಲ್ಲಿ 150-200 ಹೊರ ರೋಗಿಗಳಿಗೆ(OPD) ಆಯುರ್ವೇದಿಕ್ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ. ಯಾವುದೇ ಟೆಸ್ಟ್ಗಳಿಗೂ ಶುಲ್ಕ ವಿದಿಸಲಾಗುವುದಿಲ್ಲ. ಇಲ್ಲಿ ಪ್ರಸ್ತುತ 4 ಪ್ರಮುಖ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಒಬ್ಬರು ನಿವಾಸಿ ವೈದ್ಯರು ಸಹ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ವಚ್ಛತೆ, ಉದ್ಯಾವನ ವ್ಯವಸ್ಥೆಯಲ್ಲಿ ಕಂಗೊಳಿಸುತ್ತಿದೆ ಪಂಚಕರ್ಮ
ಸರ್ಕಾರಿ ಹಾಸ್ಪಿಟಲ್ ಗಳೆಂದರೆ ಜನರು ಯೋಚಿಸುವುದಕ್ಕೆ ತದ್ವಿರುದ್ಧವಾಗಿರುವ ‘ಆಯುರ್ವೇದಿಕ್ ಪಂಚಕರ್ಮ’ ಸ್ವಚ್ಛತೆ ವಿಷಯದಲ್ಲಿ ಇತರೆ ಆಸ್ಪತ್ರೆಗಳಿಗೆ ಮಾದರಿ ಎಂದರೇ ತಪ್ಪಾಗಲಾರದು. ಇನ್ನೂ ಸರ್ಕಾರಿ ಆಸ್ಪತ್ರೆಗಳ ಮುಂಭಾಗ ವಾಹನ ನಿಲುಗಡೆಗೆ ಸಮಸ್ಯೆ ಎನ್ನುವುದಕ್ಕೂ ವಿರುದ್ಧವಾಗಿ, ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಸಜ್ಜಿತವಾಗಿದೆ. ಅಲ್ಲದೇ ಹಸಿರೇ ನಾಡಿನ ಉಸಿರು ಎಂಬುದನ್ನು ಜನರು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಆಸ್ಪತ್ರೆಯ ಒಳಾಂಗಣ ಮತ್ತು ಹೊರಾಂಗಣ ಎರಡು ಕಡೆ ಸುಂದರವಾದ ಸಸ್ಯ ಮತ್ತು ಹೂವಿನ ಉದ್ಯಾನವನ ಹೊಂದಿದೆ.
ಆಸ್ಪತ್ರೆಯ ವಿಳಾಸ
ಸರ್ಕಾರಿ ಆಯುರ್ವೇದಿಕ್ ಪಂಚಕರ್ಮ ಹೈಟೆಕ್ ಆಸ್ಪತ್ರೆ
ಬೃಂದಾವನ ಬಡಾವಣೆ, ಕೆ.ಆರ್.ಎಸ್. ರಸ್ತೆ ಮೈಸೂರು
Address
Governament Ayurvedik hi-tech Panchakarma Hospital
KRS maim road, Brindavana extension, Mysuru
Governament Ayurvedik hi-tech Panchakarma Hospital of mysuru was very famous for Hemorrhoids and Knee Pain Troubleshooting. Governament Ayurvedik hi-tech Panchakarma Hospital was located at KRS road Brindavana badavane, Mysuru.