ಕರ್ನಾಟಕದಲ್ಲಿ ಮಲೆನಾಡಿನ ಭಾಗದ ಜನರ ನಿತ್ಯ ಆಹಾರದಲ್ಲಿ ತನ್ನದೇ ಆದ ಸ್ಥಾನವನ್ನು ಈ ಬೇರು ಹಲಸು (Breadfruit) ಪಡೆದಿದೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು ಪ್ರದೇಶಗಳಲ್ಲಿಯೂ ಬೆಳೆಯುತ್ತಾರೆ. ಬೇರು ಹಲಸನ್ನು ಜೀಹುಜೆ ಅಥವಾ ಬ್ರೆಡ್ಫ್ರೂಟ್ ಎಂದು ಸಹ ಈ ತರಕಾರಿಯನ್ನು ಕರೆಯುತ್ತಾರೆ.
ಹಲಸಿಗಿಂತ ಸಣ್ಣದಾದರು ಬೇರು ಹಲಸು (Breadfruit) ಹಳ್ಳಿ ಮಕ್ಕಳಿಗೆ ಬಲು ಅಚ್ಚುಮೆಚ್ಚು. ಹಲವು ಬಗೆಯ ಖಾದ್ಯಗಳನ್ನು ತಯಾರಿಸಲು ಉಪಯೋಗಿಸುವ ಈ ಬೇರು ಹಲಸು ಪೌಷ್ಠಿಕಾಂಶಗಳ ಆಗರವನ್ನೇ ಹೊಂದಿದೆ. ಆದರೆ ಬಹುಸಂಖ್ಯಾತರಿಗೆ ಬೇರು ಹಲಸಿನ ಆರೋಗ್ಯಕರ ಅನುಕೂಲಗಳ ಬಗ್ಗೆ ಗೊತ್ತೇ ಇಲ್ಲ.
ಈ ಲೇಖನದಲ್ಲಿ ಬೇರು ಹಲಸಿನ (Breadfruit) ಅನುಕೂಲಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ.
ಮುಪ್ಪಿನಿಂದ ಮುಕ್ತಿ : ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೇಹಕ್ಕಾಗುವ ಇನ್ಫೆಕ್ಷನ್ಗಳ ವಿರುದ್ಧ ಹೋರಾಡುತ್ತದೆ. ಇದರ ಸೇವನೆಯಿಂದ ಬೇಗನೇ ದೇಹಕ್ಕೆ ವಯಸ್ಸಾಗುವುದನ್ನು ತಪ್ಪಿಸುತ್ತದೆ. ಮುಪ್ಪಿನ ತೊಂದರೆಗಳಿಂದಲೂ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.
ಲೈಂಗಿಕ ನಿರಾಸಕ್ತಿಯನ್ನು ಕಡಿಮೆ ಗೊಳಿಸುತ್ತದೆ: ಬೇರು ಹಲಸುವಿನಲ್ಲಿ ಹೇರಳವಾಗಿರುವ ಹಿಸ್ಟಿಡೈನ್ ಎಂಬ ಒಂದು ಅಮೈನೋ ಆಮ್ಲವು ಲೈಂಗಿಕ ನಿರಾಸಕ್ತಿಯನ್ನು ಕಡಿಮೆಗೊಳಿಸುತ್ತದೆ.
ಕೂದಲಿನ ಆರೋಗ್ಯಕ್ಕೆ ರಾಮಬಾಣ – ಬೇರು ಹಲಸಿನಲ್ಲಿ(Breadfruit) ಒಮೆಗಾ 3 ಫ್ಯಾಟಿ ಆಸಿಡ್ ಉತ್ತಮ ಪ್ರಮಾಣದಲ್ಲಿ ಇರುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡುತ್ತವೆ. ಡ್ಯಾಂಡ್ರಫ್, ಕೂದಲು ಉದುರುವ ಸಮಸ್ಯೆಗೆ ಬೇರು ಹಲಸಿನ ಕಾಯಿ ಉತ್ತಮ ಪರಿಹಾರ.
ಹೃದಯ ಆರೋಗ್ಯ ಕಾಪಾಡುತ್ತದೆ – ಬೇರು ಹಲಸಿನಲ್ಲಿ ಪೊಟ್ಯಾಷಿಯಂ, ಫೈಬರ್ ಅಂಶಗಳು ರಕ್ತ ಸಂಚಾರವನ್ನು ಉತ್ತಮವಾಗಿಸಿ ಹೃದಯವನ್ನು ಆರೋಗ್ಯವಾಗಿಡುತ್ತದೆ.
ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ : ಬೇರು ಹಲಸಿನ ಕಾಯಿಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕೂಡ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿ, ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿಡಲು ಬೇರು ಹಲಸಿನ ಕಾಯಿ ಉತ್ತಮ.
– ಗ್ಯಾಸ್ಟ್ರಿಕ್, ಜ್ಯೂಸ್ ಉತ್ಪತ್ತಿಯನ್ನು ಹೆಚ್ಚಿಸುವುದರಿಂದ ಆಹಾರ ಜೀರ್ಣವಾಗಲು ಸಹಾಯವಾಗುತ್ತದೆ. ಮಲಬದ್ಧತೆ ಸಮಸ್ಯೆಯನ್ನು ನೀಗಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ.
– ರಕ್ತದೊತ್ತಡವನ್ನು ನಿಯಂತ್ರಿಸಲು ಬೇಕಾದ ಪೊಟ್ಯಾಶಿಯಂ ಅಂಶ ಬೇರು ಹಲಸಿನಕಾಯಿಯಲ್ಲಿದೆ.
– ಈ ಗಿಡದ ಎಲೆ ಹೈಪರ್ ಟೆನ್ಶನ್ ದೂರ ಮಾಡಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
– ದೇಹದ ತೂಕ ನಿಯಂತ್ರಣದಲ್ಲಿಡಲು ಬೇರು ಹಲಸು ಉತ್ತಮ ಆಹಾರ ಎನ್ನುತ್ತಾರೆ ತಜ್ಞರು.
– ವಿಟಮಿನ್ ಎ, ಬಿ ಮತ್ತು ಕ್ಯಾಲ್ಸಿಯಂ ಅನ್ನು ಸಮಪ್ರಮಾಣದಲ್ಲಿ ಹೊಂದಿದೆ.
-ಝಿಂಕ್ ಕೊರತೆಯಿಂದ ಹೊರಬರಲು Breadfruit ಸೇವನೆ ಸಹಕಾರಿ.
Breadfruit is special vegetable of the Karnataka. Special it grow up in Malenaadu, Dakshina Kannada, Kodagu, Mysuru. Breadfruit has more nutrisions than Jackfruits.