Home » ಜಸ್ಟ್ 30 ನಿಮಿಷದ ವಾಕಿಂಗ್‌ನಿಂದ ಟಾಪ್ 14 ಆರೋಗ್ಯಕರ ಅನುಕೂಲಗಳು..!

ಜಸ್ಟ್ 30 ನಿಮಿಷದ ವಾಕಿಂಗ್‌ನಿಂದ ಟಾಪ್ 14 ಆರೋಗ್ಯಕರ ಅನುಕೂಲಗಳು..!

by manager manager

ನಡಿಗೆಯು(Walking) ಒಂದು ವ್ಯಾಯಾಮ. ಇದರ ಸಹಾಯದಿಂದ ದೇಹದಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು. ಇಂದು ಹಲವರಲ್ಲಿ ಸಣ್ಣ ಪುಟ್ಟ ವ್ಯಾಯಾಮವೂ ಇಲ್ಲದೆ ದೇಹದ ಹಲವು ಭಾಗಗಳು ನಿಷ್ಕ್ರಿಯಗೊಂಡಂತೆ ಕಾಣುತ್ತಿವೆ. ನಾವು ಎದುರಿಸುತ್ತಿರುವ ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಈ ನಿಷ್ಕ್ರಿಯತೆಯೇ ಕಾರಣವಾಗಿದೆ.

ಹೀಗಾಗಿ ಬೆಳಿಗ್ಗೆ ಅಥವಾ ಸಂಜೆಯ ವೇಳೆಯಲ್ಲಿ ಜಸ್ಟ್ 30 ನಿಮಿಷ ನಡಿಗೆಯಲ್ಲಿ ತೊಡಗಿಕೊಂಡರೆ ಉತ್ತಮ. ವಾಕಿಂಗ್ ಮಾಡದಿದ್ದಲ್ಲಿ ಕೊಬ್ಬು, ಸ್ತೂಲಕಾಯತೆ, ಸ್ನಾಯು ಸಂಬಂಧಿ ರೋಗಗಳು,. ಆಸಿಡಿಟಿ ಮನುಷ್ಯನನ್ನು ಬಹುಬೇಗ ಕಾಡತೊಡಗುತ್ತದೆ. ಇಂತಹ ಸಮಸ್ಯೆಗಳಿಂದ ದೂರವಿರಲು ಯಾರು ತಾನೆ ಬಯಸುವುದಿಲ್ಲ ಹೇಳಿ?… ಆದ್ಧರಿಂದ ಇಂದು ಕನ್ನಡ ಅಡ್ವೈಜರ್ ನಡಿಗೆಯಿಂದಾಗುವ(Walking) ಬಹುಮುಖ್ಯವಾದ ಆರೋಗ್ಯಕರ ಪ್ರಯೋಜನಗಳನ್ನು ತಿಳಿಸಿಕೊಡುತ್ತಿದೆ. ಮುಂದೆ ಓದಿರಿ.

 

ಮುಂಜಾನೆಯ ವಾಕಿಂಗ್(Morning Walking)

ಬೆಳಗಿನ ಹೊತ್ತಿನಲ್ಲಿನ ನಡಿಗೆಯು ನೇರವಾಗಿ ಅವಯವಗಳಿಗೆ(ಅಂಗಾಂಗಗಳಿಗೆ) ಅನುಕೂಲ ಮಾಡಿಕೊಡುತ್ತದೆ. ಕರಗಿಸಲು ಕ್ಯಾಲರಿಯೇ ಬಹಳ ಕಡಿಮೆಯಿರುವುದರಿಂದ ಹೃದಯ, ಮೆದುಳು, ಮೂತ್ರಪಿಂಡ, ಶ್ವಾಸಕೋಶ, ಯಕೃತ್, ಮೇದೋಜೀರಕಾಂಗ, ಜಠರ ಮೊದಲಾದವುಗಳ ಮೇಲೆ ಧನಾತ್ಮಕ ನೇರಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಮೂತ್ರಪಿಂಡ ವೈಫಲ್ಯ, ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಬೆಳಗಿನ ನಡಿಗೆ ಹೆಚ್ಚು ಪ್ರಯೋಜನಕಾರಿ.

 

ಸಂಜೆಯ ವಾಕಿಂಗ್(Evening Walking)

ಸಂಜೆಯ ಹೊತ್ತಿನಲ್ಲಿ ನಡೆದಾಡಿದಾಗ ದಿನವಿಡೀ ತಿಂದ ಆಹಾರದಿಂದ ಉತ್ಪತ್ತಿಯಾದ ಕ್ಯಾಲೊರಿ ಮೊದಲು ವ್ಯಯವಾಗಿ ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದನ್ನು ತಡೆಯುತ್ತದೆ. 30 ನಿಮಿಷ ಕಾಲ ನಡೆದರೆ ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರುವುದು.

Top health benefits of walking daily just 30 minutes 2

ವಾಕಿಂಗ್ ಮಾಡುವುದರಿಂದ ಆಗುವ ಟಾಪ್ ಪ್ರಯೋಜನಗಳು(Walking benefits)

– ಹಲವರು ನನಗೆ ತುಂಬಾ ಬೇಗ ವಯಸ್ಸಾಗುತ್ತಿದೆ ಎಂದು ಯೋಚಿಸುತ್ತಿರುತ್ತಾರೆ. ಅಂತಹವರ ಹಲವಾರು ಋಣಾತ್ಮಕ ಅಲೋಚನೆಗಳ್ನು ದೂರಮಾಡುವ ಸಾಮರ್ಥ್ಯ ವಾಕಿಂಗ್ ಗೆ ಇದೆ. ಹೌದು ಪ್ರತಿದಿನ ಜಸ್ಟ್ 30 ನಿಮಿಷ ನಡೆಯುವುದರಿಂದ ಪ್ರಾಯವನ್ನು ದೀರ್ಘಕಾಲ ಕಾಪಾಡಿಕೊಳ್ಳಬಹುದು. ಅಲ್ಲದೇ ವಯಸ್ಸಿನ ಎಲ್ಲಾ ಪ್ರಾಬ್ಲಮ್ ಗಳಿಗೆ ಪರಿಹಾರವಿದೆ.

– ಮುಂಜಾನೆ ಪ್ರಶಾಂತತೆ ಇರುವ ವೇಳೆ 30 ನಿಮಿಷವಾದರೂ ವಾಕಿಂಗ್ ಮಾಡಬೇಕು. ವಾಕಿಂಗ್ ಆರಂಭಿಸುವ ಮುನ್ನ ಲಿಂಬೆ ರಸ ಬೆರೆಸಿದ ಬಿಸಿ ನೀರನ್ನು ಕುಡಿದು ನಿಮ್ಮನ್ನು ನೀವು ಆಹ್ಲಾದವಾಗಿರಿಸಿಕೊಳ್ಳಿ,ನಡಿಗೆ ವೇಳೆ ವ್ಯಾಯಾಮ, ಓಟ, ಯೋಗ ಮೊದಲಾದವುಗಳನ್ನು ಮಾಡಿದಲ್ಲಿ ಇನ್ನೂ ಉತ್ತಮ.

– ರಕ್ತದೊತ್ತಡದ ಸಮಸ್ಯೆ ಇರುವವರಿಗೆ ನಡಿಗೆಯೇ ಉತ್ತಮವಾದ ಮದ್ದು. 15 ನಿಮಿಷದ ನಡಿಗೆ ರಕ್ತ ಪರಿಚಲನೆಯನ್ನು ಉತ್ತಮಪಡಿಸಿ ರಕ್ತದೊತ್ತಡ ಕಡಿಮೆ ಮಾಡುವುದು. ನಡೆಯುವುದರಿಂದ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡುವುದು.

– ನಡಿಗೆಯಿಂದ ಸ್ನಾಯುಗಳು ಹಾಗೂ ಮೂಳೆಗಳು ಬಲಗೊಳ್ಳುವುದು. 30 ನಿಮಿಷದ ನಡಿಗೆ ಕಾಲನ್ನೂ ಬಲಶಾಲಿಯಾಗಿಸುತ್ತದೆ.

– ಮುಂಜಾನೆಯ ಸೂರ್ಯೋದಯ ವೇಳೆ 15 ನಿಮಿಷ ಕಾಲ ವಾಕಿಂಗ್ ಮಾಡಿದಲ್ಲಿ ದೇಹದಲ್ಲಿ ವಿಟಮಿನ್ ‘ಡಿ’ ಮಟ್ಟವನ್ನು ಹೆಚ್ಚಿಸುವುದು. ಇದರಿಂದ ಮೂಳೆಗಳು ಹಾಗೂ ಕೀಲುಗಳು ಆರೋಗ್ಯವಂತವಾಗಿ ಇರುತ್ತವೆ.

– ರಕ್ತ ಸಂಚಾರಕ್ಕೆ ಅಡ್ಡಿಯಾದರೆ ಅದರಿಂದ ಸಂಪೂರ್ಣ ದೇಹದ ಮೇಲೆ ಪರಿಣಾಮ ಉಂಟಾಗುವುದು. ನಡಿಗೆಯಿಂದ ರಕ್ತಸಂಚಾರವು ಸುಗಮವಾಗಿ ರಕ್ತ ದೊತ್ತಡವನ್ನು ನಿವಾರಿಸುವುದು.

– ದಿನನಿತ್ಯ ವಾಕಿಂಗ್ ಮಾಡುವುದರಿಂದ ದೇಹದ ತೂಕ ಕಡಿಮೆ ಮಾಡುತ್ತದೆ.

– ಮೂಳೆಗಳಂತೆಯೇ ದೇಹದ ಸ್ನಾಯುಗಳುಗಳಿಗೆ ನಡಿಗೆಯಿಂದ ಶಕ್ತಿ ಹೆಚ್ಚುತ್ತದೆ. ವಯಸ್ಸಾದ ಮೇಲೆ ಉಂಟಾಗುವ ಹಲವು ತೊಂದರೆಗಳಿಂದ ಪಾರಾಗಬಹುದು.

Top health benefits of walking daily just 30 minutes

– ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ದಲ್ಲಿ ಜೀರ್ಣಾಂಗವ್ಯೂಹದ ಅಸ್ವಸ್ಥತೆಗೆ ಕಾರಣವಾಗಬಹುದು. ಹೊಟ್ಟೆ ಉಬ್ಬುವುದು, ಮಲಬದ್ಧತೆ, ಅತಿಸಾರ ಮತ್ತು ಕೊಲೋನ್ ಎಂಬ ಕ್ಯಾನ್ಸರ್‌ಗೆ ಕಾರಣವು ಆಗಬಹುದು. ಈ ತೊಂದರೆಗಳಿಂದ ಪಾರಾಗಲು ವಾಕಿಂಗ್ ಪರಿಹಾರವಾಗುತ್ತದೆ.

– ವಾಕಿಂಗ್ ಶ್ವಾಸಕೋಶದ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಸ್ಥಿರತೆಯಲ್ಲಿರುವ ಸಮಯಕ್ಕಿಂತ ವಾಕಿಂಗ್ ಮಾಡಿದಾಗ ಹೆಚ್ಚು ಆಮ್ಲಜನಕ ಉಸಿರಾಟಕ್ರಿಯೆಯಲ್ಲಿ ಒದಗಿಸುತ್ತದೆ.

– ಡಿಪ್ರೆಶನ್(ಮಾನಸಿಕ ಖಿನ್ನತೆ) ನಿಂದ ದೂರವಿರಬಹುದು. ಹೌದು.. ಕೇವಲ 30 ನಿಮಿಷದ ದಿನನಿತ್ಯದ ವಾಕಿಂಗ್ ಮನುಷ್ಯನ ಹಲವು ಮಾನಸಿಕ ಖಿನ್ನತೆಗಳ್ನು ದೂರ ಮಾಡಿ, ಉತ್ತಮ ಜೀವನಕ್ಕೆ ದಾರಿ ಮಾಡಿಕೊಡುತ್ತವೆ.

– ಜ್ಞಾಪಕ ಶಕ್ತಿ ವಾಕಿಂಗ್ ನಿಂದ ಪರಿಣಾಮಕಾರಿಯಾಗಿ ಹೆಚ್ಚುತ್ತದೆ.

– ಮನುಷ್ಯ ತನ್ನ ಸೃಜನಶೀಲತೆ ಮಟ್ಟವನ್ನು ವಾಕಿಂಗ್ ನಿಂದ ಹೆಚ್ಚಿಸಿಕೊಳ್ಳಬಹುದು.

– ದಿನವಿಡೀ ಹೆಚ್ಚು ಕಾರ್ಯಪ್ರವೃತ್ತರಾಗಿರಲು ವಾಕಿಂಗ್ ಸಹಾಯಕವಾಗುತ್ತದೆ.

In this article Kannadaadvisor giving list of Health benefits of walking just 30 minutes on daily basis. Walking reduces risk of Diabetes, strengthens bones and muscles, improves heart health, it helps to loss body weight and more.

You may also like