ಮಂಡ್ಯ: ಫೋಟೋದಲ್ಲಿರುವ ನಾನು ಮಂಡ್ಯ ಜಿಲ್ಲೆ ಪಾಂಡವಪುರ ತಾ., ಚಿನಕುರಳಿ ಹೋ., ರಾಗಿಮುದ್ದನಹಳ್ಳಿ ನಿವಾಸಿ ಲಕ್ಷ್ಮಯ್ಯನವರ ಮಗ ರಾಜೇಶ್ ಆರ್ ಎಲ್. ನನಗೆ ಈಗ 30 ವರ್ಷ. ಎರಡು ಕಿಡ್ನಿಗಳು ಫೇಲ್ ಆಗಿದ್ದು, 3 ವರ್ಷಗಳಿಂದ ಡಯಾಲಿಸಿಸ್ ನಡೆಯುತ್ತಿದ್ದು, ಸದರಿ ನನ್ನ ತಂದೆಗೆ ಇದ್ದ 20 ಗುಂಟೆ ಜಮೀನನ್ನು ಸಹ ಮಾರಾಟ ಮಾಡಿ ನನಗೆ ಖರ್ಚು ಮಾಡಿರುತ್ತಾರೆ.
ಕಡು ಬಡವರಾದ ನನ್ನ ಕುಟುಂಬಕ್ಕೆ ಇನ್ನು ಖರ್ಚು ಮಾಡಲು ಸಂಪಾದನೆಯೂ ಇಲ್ಲ, ಸಂಪತ್ತು ಇಲ್ಲ. ಕಾರಣ ನಾನು ಇನ್ನೂ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದೇನೆ.
ಪ್ರಸ್ತುತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದು, ಸದರಿ ನನಗೆ ವಾರದಲ್ಲಿ 3 ದಿನ ಡಯಾಲಿಸಿಸ್ ಆಗಬೇಕಾಗಿದೆ. ಇದಕ್ಕೆ ಹಣ ಕಟ್ಟಬೇಕು. ಒಂದು ಟೈಮ್ ಊಟಕ್ಕೂ ಬಿಕ್ಷೆ ಬೇಡುವಂತಾಗಿದೆ ನಮ್ಮ ಕುಟುಂಬದ ಪರಿಸ್ಥಿತಿ. ನನ್ನ ಹೆತ್ತತಾಯಿಯೇ ನನಗೆ ಈಗ 1 ಕಿಡ್ನಿ ಕೊಡಲು ಮುಂದಾಗಿದ್ದು, ಈಗ ಡಯಾಲಿಸಿಸ್ ಗೆ ಮತ್ತು ಶಸ್ತ್ರಚಿಕಿತ್ಸೆಗೆ, ಪರೀಕ್ಷೆಗಳಿಗೆಂದು ಸುಮಾರು 7 ಲಕ್ಷಕ್ಕಿಂತ ಹೆಚ್ಚು ಹಣ ಬೇಕಾಗಿದೆ ಎಂದಿದ್ದಾರೆ ವೈದ್ಯರು.
ನನ್ನನ್ನು ನಿಮ್ಮ ಸಹೋದರ ಎಂದುಕೊಂಡು ನಿಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ, ನನ್ನನ್ನು ಬದುಕಿಸಿ ಎಂದು ಜೀವ ಬಿಕ್ಷೆ ಬೇಡುತ್ತೇನೆ.
ರಾಗಿಮುದ್ದನಹಳ್ಳಿ ಬ್ರ್ಯಾಂಚ್ ಬ್ಯಾಂಕ್ ಆಫ್ ಬರೋಡಾ’ದ ನನ್ನ ಬ್ಯಾಂಕ್ ಖಾತೆ ಸಂಖ್ಯೆ 72640100000745, IFSC- BARBOVJRAMU,
Phone Pay, Google Pay Number – 9845936300