ಕರ್ನಾಟಕ ಲೋಕ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ (ಸಾಮಾನ್ಯ) ನಿಯಮಗಳು 2006 ಹಾಗೂ 2013 ಮತ್ತು 2015 ರ ತಿದ್ದುಪಡಿ ನಿಯಮಗಳನ್ವಯ ವಿವಿಧ ಗ್ರೂಪ್ ‘ಬಿ’ ತಾಂತ್ರಿಕ ಮತ್ತು ಗ್ರೂಪ್ ‘ಸಿ’ ತಾಂತ್ರೀಕೇತರ ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳು ಅಲ್ಪ ಸಂಖ್ಯಾತರ ಇಲಾಖೆಯ ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ ಅಲ್ಪ ಸಂಖ್ಯಾತರ ಮೌಲಾನಾ ಅಜಾದ್ ಮಾದರಿ ಶಾಲೆಗಳಲ್ಲಿನ ವಿವಿಧ ಹುದ್ದೆಗಳು. ಈ ನೇಮಕಾತಿ ಕುರಿತಂತೆ ಮಾಹಿತಿ ಈ ಕೆಳಗಿನಂತಿದೆ.
ಹೈದರಾಬಾದ್-ಕರ್ನಾಟಕ ವೃಂದದ ಗ್ರೂಪ್ ‘ಬಿ’ ಹುದ್ದೆಗಳಾದ ಮುಖ್ಯೋಪಾಧ್ಯಾಯರ ಹುದ್ದೆಗಳ ಸಂಖ್ಯೆ : 20
ಹೈದರಾಬಾದ್-ಕರ್ನಾಟಕ ವೃಂದದ ಗ್ರೂಪ್ ‘ಸಿ’ ಹುದ್ದೆಗಳಾದ ವಿವಿಧ ವಿಷಯಗಳಿಗೆ ಶಿಕ್ಷಕರ ಹುದ್ದೆಗಳು ಈ ಕೆಳಗಿನಂತಿವೆ
ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳ ಸಂಖ್ಯೆ : 21
ಇಂಗ್ಲೀಷ್ ಭಾಷಾ ಶಿಕ್ಷಕರ ಹುದ್ದೆಗಳ ಸಂಖ್ಯೆ : 21
ಉರ್ದು ಭಾಷಾ ಶಿಕ್ಷಕರ ಹುದ್ದೆಗಳ ಸಂಖ್ಯೆ : 21
ವಿಜ್ಞಾನ ಶಿಕ್ಷಕರ ಹುದ್ದೆಗಳ ಸಂಖ್ಯೆ : 21
ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳ ಸಂಖ್ಯೆ : 21
ಗಣಿತ ಶಿಕ್ಷಕರ ಹುದ್ದೆಗಳ ಸಂಖ್ಯೆ : 21
ಒಟ್ಟು : 146
ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ: 23-11-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22-12-2018
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 24-12-2018
ಈ ಹುದ್ದೆಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗವು 2019 ನೇ ಸಾಲಿನ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಶುಲ್ಕ ಮಾಹಿತಿ ಈ ಕೆಳಗಿನಂತಿದೆ.
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ : 600 ರೂಪಾಯಿಗಳು
ಪ್ರವರ್ಗ 2ಎ/ಬಿ/3ಎ/3ಬಿ : 300 ರೂಪಾಯಿಗಳು
ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 50 ರೂಪಾಯಿಗಳು
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ಅಂಗವಿಕಲ ಅಭ್ಯರ್ಥಿಗಳಿಗೆ : ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.
– ಅರ್ಜಿ ಗಳನ್ನು ಆನ್ಲೈನ್ ಮೂಲಕ ಭರ್ತಿ ಮಾಡಿದ ನಂತರ ಶುಲ್ಕವನ್ನು ಯಾವುದೇ ಕಾಮನ್ ಸರ್ವೀಸ್ ಸೆಂಟರ್ಗಳಲ್ಲಿ(CSC) ಅಥವಾ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ಸಂದಾಯ ಮಾಡಬಹುದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
– ಭಾವಚಿತ್ರ
– ಸಹಿ ಮಾಡಿದ ಸ್ಕ್ಯಾನ್ ಫೋಟೋ
– ವಯೋಮಿತಿ ಆಧಾರ ಪ್ರಮಾಣ ಪತ್ರ(ಎಸ್ಎಸ್ಎಲ್ಸಿ ಪ್ರಮಾಣ ಪತ್ರ ಜೆರಾಕ್ಸ್)
– ವಿದ್ಯಾರ್ಹತೆಗೆ ಸಂಬಂಧ ಪಟ್ಟ ದಾಖಲೆಗಳ ಸ್ಕ್ಯಾನ್ ಫೋಟೋಗಳು
– ಮೀಸಲಾತಿಗೆ ಕೋರಿದ್ದಲ್ಲಿ, ಅದಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳ ಸ್ಕ್ಯಾನ್ ಮಾಡಿದ ಫೋಟೋಗಳು.
hyderabad karnataka cluster Head Masters and Teachers in various Subjects in Moulana Azad Residential Schools (RPC) Recruitment 2018-19 notification. Read more here.