ಚಳಿಗಾಲದಲ್ಲಿ ಒಣ ಗಾಳಿಗೆ ತುಟಿ ಒಡೆಯುವುದು, ದೇಹದ ಚರ್ಮ ಒಣಗಿ ಬಿರಿಯುವುದು ಸರ್ವೇಸಾಮಾನ್ಯ. ನಾವು ಎಷ್ಟೇ ಕೇರ್ ಮಾಡಿದರು ಸಹ ಈ ಕಾಲ ಮುಗಿಯುವವರೆಗೂ ಸಹ ಈ ಸಮಸ್ಯೆಗಳಿಗೆ ದಿನನಿತ್ಯ ಪೋಷಣೆ ಅಗತ್ಯ(Home remedies for lip and skin care in winter season).
ಚಳಿಗಾಲದಲ್ಲಿ ಎಲ್ಲರೂ ಹೆಚ್ಚು ಕೇರ್ ಮಾಡಲು ಬಯಸುವುದು ತಮ್ಮ ತುಟಿಗಳನ್ನು. ಈ ವೇಳೆ ಹಲವರು ತಮ್ಮ ತುಟಿಗಳ ಸೌಂದರ್ಯವನನ್ನು ಕಾಪಾಡಿಕೊಳ್ಳಲು ಇಲ್ಲಸಲ್ಲದ ಸರ್ಕಸ್ಗಳನ್ನೆಲ್ಲಾ ಮಾಡುತ್ತಿರುತ್ತಾರೆ. ಅಂದರೆ ಮೆಡಿಕಲ್ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ತರಹದ ಸ್ಕಿನ್ ಕೇರ್ಗಳನ್ನೆಲ್ಲಾ ಪ್ರಯೋಗ ಮಾಡುವುದು ಉಂಟು. ಇವುಗಳಿಂದ ತುಟಿಗಳ ಬಣ್ಣ ನ್ಯಾಚುರಲ್ ಆಗಿರುವುದಕ್ಕಿಂತ ಕೃತಕ ಬಣ್ಣ ಪಡೆಯುತ್ತದೆ.
ಹಾಗಿದ್ರೆ ತುಟಿಗಳ ಬಣ್ಣ ನ್ಯಾಚುರಲ್ ಆಗಿಯೇ ಇರುವಂತೆ ಚಳಿಗಾಲದಲ್ಲಿ ತುಟಿ ಒಡೆಯದಂತೆ ಕಾಪಾಡಿಕೊಳ್ಳುವುದು ಹೇಗೆ? ಎಂಬುದು ನಿಮ್ಮ ಪ್ರಶ್ನೆ ಆಗಿರಬಹುದು. ಅದಕ್ಕೆ ತಮ್ಮ ತಮ್ಮ ಮನೆಯಲ್ಲೇ ಮದ್ದು ಇದೆ.
ಹೌದು.. ತುಟಿಗಳ ರಕ್ಷಣೆಗೆ ಮನೆಗಳಲ್ಲೇ ಉತ್ತಮ ಪರಿಹಾರವಿದೆ. ಅವುಗಳೆಂದರೆ ಅಜ್ಜಿ ಕಾಲದಲ್ಲಿ ಬಳಕೆಯಾಗುತ್ತಿದ್ದ ಅತ್ಯುತ್ತಮ ಮಾಯಶ್ಚರೈಸರ್ಗಳಾದ ಕೊಬ್ಬರಿ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆಗಳು. ಇವುಗಳು ಮಾತ್ರವಲ್ಲದೇ ಹಾಲಿನ ಕೆನೆಯನ್ನು ಸಹ ತುಟಿಗಳ ರಕ್ಷಣೆಗೆ ಬಳಸಬಹುದು. ಹಾಗೂ ಮನೆಯಲ್ಲೇ ಬಳಸಬಹುದಾದ ಇತರೆ ಕೆಲವು ವಿವಿಧ ಎಣ್ಣೆಗಳನ್ನು ಸಹ ಬಳಸಬಹುದು. ಅವುಗಳು ಈ ಕೆಳಗಿನಂತಿವೆ ಓದಿರಿ..
ತುಟಿಗಳಿಗೆ ಮಾಡಿ ಅಜ್ಜಿ ಕಾಲದ ಮದ್ದು
ಎಣ್ಣೆ ಮತ್ತು ಬೆಣ್ಣೆಯನ್ನು ತುಟಿಗಳಿಗೆ ಮಸಾಜ್ ಮಾಡುವ ಮೂಲಕ ಒಡೆದ ತುಟಿಗಳಿಗೆ ಪೋಷಣೆ ನೀಡಬಹುದು. ಇದು ಅಜ್ಜಿ ಕಾಲದಲ್ಲಿ ನೀಡುತ್ತಿದ್ದ ಮನೆಯ ಮದ್ದು ಹೌದು. ಯಾವುದೇ ರಾಸಾಯನಿಕ ಪದಾರ್ಥಗಳಿಲ್ಲದ ಇವು ದೇಹದ ಚರ್ಮ ಮತ್ತು ತುಟಿಗಳ ಸೌಂದರ್ಯವನ್ನು ನ್ಯಾಚುರಲ್ ಆಗಿ ಕಾಪಾಡಿಕೊಳ್ಳಲು ಬಳಕೆಯಾಗುತ್ತಿದ್ದವು.
ಎಳ್ಳೆಣ್ಣೆ ಉಪಯೋಗಿಸಿ
ಎಳ್ಣೆಣ್ಣೆಯನ್ನು ನೆತ್ತಿಗೆ ಹಚ್ಚಿದರೆ ಅದರ ಮಜಾನೆ ಬೇರೆ. ಬೇಗ ಸುಖ ನಿದ್ರೆಗೆ ಜಾರಿಸಬಲ್ಲ ಶಕ್ತಿ ಎಳ್ಳೆಣ್ಣೆಗೆ ಇದೆ. ಚರ್ಮ, ತುಟಿ, ತಲೆ ಕೂದಲಿನ ಆರೋಗ್ಯ ಕಾಪಾಡುವ ಶಕ್ತಿ ಎಳ್ಳೆಣ್ಣೆಗೆ ಇದೆ. ಚಳಿಗಾಲದಲ್ಲಿ ಎಳ್ಳೆಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಮೈ ಕೈಗೆ, ತಲೆಗೆ ಮತ್ತು ತುಟಿಗೆ ಹಚ್ಚಿಕೊಳ್ಳುವುದನ್ನು ರೂಢಿಸಿಕೊಳ್ಳಿ. ನಂತರ ಇದರ ಫಲ ನೋಡಿ. ನಿಮಗೆ ಆಶ್ಚರ್ಯವಾಗುವಷ್ಟು ಮೃದುವಾದ ಚರ್ಮ ನಿಮ್ಮದಾಗುತ್ತದೆ.
ಕೊಬ್ಬರಿ ಎಣ್ಣೆ
ಚಳಿಗಾಲಕ್ಕೆ ಕೊಬ್ಬರಿ ಎಣ್ಣೆಯೂ ಸಹ ಉತ್ತಮವಾದ ಒಂದು ಮಾಯಿಶ್ಚರಯಸರ್. ಹಳ್ಳಿಗಳಲ್ಲಿ ಚರ್ಮದ ತೊಚೆಗೆ ಮತ್ತು ತುಟಿಗಳ ರಕ್ಷಣೆಗೆ ಸದಾಕಾಲ ಬಳಸುವ ಮಾಯಿಶ್ಚರೈಸರ್ ಕೊಬ್ಬರಿ ಎಣ್ಣೆ. ಚಳಿಗಾಲದಲ್ಲಿ ತುಟಿಯ ತೇವ ಕಾಪಾಡಿಕೊಳ್ಳಲು ಹಗಳು ಮತ್ತು ರಾತ್ರಿ ಎರಡೂ ವೇಳೆಯಲ್ಲಿಯೂ ಬಳಸಬಹುದು. ರಾಸಾಯನಿಕಗಳನ್ನೊಳಗೊಂಡ ಸ್ಕಿನ್ ಕೇರ್ಗಳ ಬದಲಾಗಿ ಕೊಬ್ಬರಿ ಎಣ್ಣೆಯನ್ನು ಎಲ್ಲಾಕಾಲದಲ್ಲೂ ಮಾಯಿಶ್ಚರೈಸರ್ ಆಗಿ ಬಳಸಬಹುದು.
ಗೋಧಿ ತೌಡಿನ ಎಣ್ಣೆ
ವೀಟ್ ಜೆರ್ಮ್ ಆಯಿಲ್ ಎಂದು ಕರೆಯಲ್ಪಡುವ ಗೋಧಿ ತೌಡಿನ ಎಣ್ಣೆಯಲ್ಲಿ ತುಟಿ ಮತ್ತು ಚರ್ಮದ ಆರೋಗ್ಯ ಕಾಪಾಡುವ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಇವೆ. ಆದ್ದರಿಂದ ಚಳಿಗಾಲಕ್ಕೆ ಇದು ಸಹ ಉತ್ತಮ ಮಾಯಿಶ್ಚರೈಸರ್.
Home remedies for lip and skin care in winter season are here. People can use some types of good oil as lip care.