Home » ಕಣ್ಣಿನ ಕಪ್ಪು ವರ್ತುಲಕ್ಕೆ ಪರಿಹಾರ

ಕಣ್ಣಿನ ಕಪ್ಪು ವರ್ತುಲಕ್ಕೆ ಪರಿಹಾರ

by manager manager

ಕಣ್ಣು ಸೌಂದರ್ಯದ ಪ್ರತೀಕ. ಹೊಳೆಯುವ ಕಣ್ಣುಗಳು ನಮ್ಮ ಮುಖಕ್ಕೆ ಶೋಭೆ. ಆದರೆ ಇತ್ತೀಚಿನ ಯಾಂತ್ರಿಕ ಜೀವನ, ಒತ್ತಡ, ಸರಿಯಾದ ಸಮಯಕ್ಕೆ ನಿದ್ರೆ ಮಾಡದಿರುವುದು ಹಾಗೂ ವಿಶ್ರಾಂತಿ ಇಲ್ಲದೇ ಕಣ್ಣಿನ ಸುತ್ತಲೂ ಕಪ್ಪು ವರ್ತುಲ (dark circle) ನಿರ್ಮಾಣವಾಗಿ ಮುಖದ ಸೌದರ್ಯಕ್ಕೆ ಹಾಳಾಗುತ್ತಿದೆ.

ಇಂತಹ ಸುಂದರ ಕಣ್ಣುಗಳಿಗೆ ಕಾಡುವ ಕಪ್ಪು ವರ್ತುಲದ ನಿಯಂತ್ರಣಕ್ಕೆ ಕನ್ನಡ ಅಡ್ವೈಜರ್ ಸಲಹೆ ನೀಡುತ್ತಿದೆ

ಕಪ್ಪು ವರ್ತುಲಕ್ಕೆ ಕಾರಣ:

ರಾತ್ರಿ ಪಾಳಿ ಕೆಲಸ, ತಡವಾಗಿ ಮಲಗುವುದು, ದೈಹಿಕ ಹಾಗೂ ಮಾನಸಿಕ ಸಮಸ್ಯೆ, ಅನುವಂಶೀಯತೆ, ಸೂರ್ಯನ ಬಿಸಿಲಿಗೆ ಅತಿಯಾಗಿ ನಿಮ್ಮನ್ನು ನೀವು ಒಡ್ಡಿಕೊಳ್ಳುವುದು, ಪೌಷ್ಟಿಕಾಂಶ ಕೊರತೆ ಹಾಗೂ
ವಯಸ್ಸಾಗುತ್ತಿದ್ದಂತೆ ಚರ್ಮದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಅದರಲ್ಲೂ ಚರ್ಮದ ಬಣ್ಣದಲ್ಲಿ ಮಹತ್ತರ ಬದಲಾವಣೆಯಾಗುತ್ತದೆ. ಆಗ ಈ ಕಪ್ಪು ವರ್ತುಲ ಹೆಚ್ಚಾಗುತ್ತದೆ.

 

ಕಪ್ಪು ವರ್ತುಲಕ್ಕೆ ಪರಿಹಾರ:

ನಿದ್ರೆ:

ನಿದ್ರೆ ಅನೇಕ ಶಾರೀರಿಕ ಸಮಸ್ಯೆಗೆ ಪರಿಹಾರ. ಮೊದಲನೆಯದಾಗಿ ಕಪ್ಪು ವರ್ತುಲ ನಿವಾರಣೆಗೆ ಸಾಕಷ್ಟು ನಿದ್ರೆ ಮಾಡೋದನ್ನ ಮೈಗೂಡಿಸಿಕೊಳ್ಳುವುದು ಒಳಿತು. ಒಬ್ಬ ಆರೋಗ್ಯಯುತ ಮಾನವ ದಿನಕ್ಕೆ ೬ ರಿಂದ ೮ ಗಂಟೆ ನಿದ್ದೆ ಮಾಡಬೇಕು.

 

ಬಾದಾಮಿ ಎಣ್ಣೆ:

ಬೆಳಗ್ಗೆ ಎದ್ದ ಕೂಡಲೆ ಹಾಗೂ ರಾತ್ರಿ ಮಲಗುವ ಮುನ್ನ ಕಣ್ಣುಗಳನ್ನು ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿಕಿಳ್ಳುವುದು ಒಳಿತು. ಬಾದಾಮಿ ಎಣ್ಣೆಯಲ್ಲಿ ವಿಟಮಿನ್-ಇ ಸಮೃದ್ಧವಾಗಿದೆ, ಇದು ಚರ್ಮಕ್ಕೆ ಹೊಳಪು ನೀಡುತ್ತದೆ. ಇದನ್ನು ಕಪ್ಪು ವೃತ್ತಗಳ ಮೇಲೆ ಲೇಪಿಸಿ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೆಯೇ ಬಿಟ್ಟು ಮರುದಿನ ಬೆಳಗ್ಗೆ ತೊಳೆಯಬೇಕು.

 

ವಿಟಮಿನ್:

ವಿಟಮಿನ್ ಎ, ಸಿ, ಇ ಮತ್ತು ಕೆ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿವುದು ಒಳಿತು.

ಹಾಲು ಅಥವಾ ಐಸ್ ನೀರು:

ಹತ್ತಿಯ ಉಂಡೆಯನ್ನು ತಣ್ಣಗಿನ ಹಾಲು ಅಥವಾ ಐಸ್ ನೀರಿನಲ್ಲಿ ಅದ್ದಿ ಕಣ್ಣಿಗೆ ಹಾಗೂ ಬಾಧಿತ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟು ನೀರಿನಲ್ಲಿ ತೊಳೆಯಿರಿ.

 

ಟೊಮ್ಯಾಟೋ ಮತ್ತು ನಿಂಬೆ ರಸ:

ಒಂದು ಚಿಕ್ಕ ಚಮಚ ಟೊಮ್ಯಾಟೋ ಹಾಗೂ ನಿಂಬೆ ರಸವನ್ನು ಬೆರೆಸಿ ಕಪ್ಪು ವರ್ತುಲಗಳ ಮೇಲೆ ಹಚ್ಚಿ. ಹತ್ತು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ದಿನಕ್ಕೆರಡು ಬಾರಿಯಾದರೂ ಈ ನಿಯಮ ಪಾಲಿಸಿ.

 

ಹಸಿ ಆಲೂಗೆಡ್ಡೆ:

ಹಸಿ ಆಲೂಗೆಡ್ಡೆ ಯನ್ನು ತುರಿದು ರಸ ತೆಗೆಯಿರಿ. ಹತ್ತಿ ಉಂಡೆಯನ್ನು ಈ ರಸದಲ್ಲಿ ಅದ್ದಿ, ಕಣ್ಣುಗಳನ್ನು ಮುಚ್ಚಿಕೊಂಡು ಕಪ್ಪು ವರ್ತುಲ,ಕಣ್ಣಿನ ರೆಪ್ಪೆ, ಹುಬ್ಬು ಗಳಿಗೆ ಲೇಪಿಸಿ.

 

ಸೌತೆಕಾಯಿ:

ಸೌತೆಕಾಯಿ ಯನ್ನು ತೊಳೆದು ಗೋಲಾಕಾರದಲ್ಲಿ ಕತ್ತರಿಸಿ ಕಣ್ಣಿನ ಮೇಲೆ ಸ್ವಲ್ಪ ಸಮಯದವರೆಗೆ ಹಾಗೆ ಇರಲಿ ೧೫-೨೦ ನಿಮಿಷ ಬಿಟ್ಟು ಸೌತೆಕಾಯಿಯನ್ನು ತೆಗೆದು ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಇದನ್ನು ನಿರಂತರವಾಗಿ ಮಾಡುತ್ತಿದ್ದರೆ ಕಣ್ಣಿನ ಬಳಿ ಕಪ್ಪು ವರ್ತುಲಗಳು ಬರುವುದಿಲ್ಲ.

 

ಹಸಿರು ಸೊಪ್ಪು:

ಹಸಿರು ಸೊಪ್ಪುಗಳ ಬಳಕೆಯಿಂದ ಈ ತೊಂದರೆ ದೂರವಾಗುತ್ತದೆ. ಪಾಲಕ್ ಸೊಪ್ಪು, ಎಲೆಕೋಸು, ಕ್ಯಾರೆಟ್, ಟೊಮೆಟೊ ಇತ್ಯಾದಿ ತರಕಾರಿ ಹಾಗೂ ಸೊಪ್ಪಿನಲ್ಲಿ ಕಲೆ ಹೋಗಲಾಡಿಸೋ ಶಕ್ತಿ ಇದೆ.

If you’ve developed eyes dark circles and are worried you’re going to be stuck with them forever, don’t be. These useful home remedies will help you get rid of from eyes dark circles for good.

You may also like