ನಮ್ಮ ನಿತ್ಯ ಜೀವನದಲ್ಲಿ ಹಲ್ಲುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮುತ್ತಿನಂಥಾ ಹಲ್ಲುಗಳು ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಆಹಾರ ಜಗಿಯುವುದಕ್ಕೆ ಹಾಗೂ ಸ್ಪಷ್ಟವಾಗಿ ಮಾತನಾಡುವುದಕ್ಕೆ ಹಲ್ಲುಗಳು ಬಹುಮುಖ್ಯ. ಹಲ್ಲುಗಳ ಆರೋಗ್ಯದ ವಿಷಯಕ್ಕ ಬಂದರೆ ಒಮ್ಮೆ ನೋವು ಕಾಣಿಸಿಕೊಂಡರೆ ನೋವು ಅನುಭವಿಸುವುದು ತುಂಬಾ ಕಷ್ಟ. ಇದು ಕೊಡುವ ಸಂಕಟ ಅಷ್ಟಿಷ್ಟಲ್ಲ. ಹಲ್ಲು ನೋವು ಹೆಚ್ಚಾದಾಗ ತಲೆನೋವು, ಜ್ವರ ಸಹ ಕಾಣಿಸಿಕೊಳ್ಳಬಹುದು.
ಬ್ಯಾಕ್ಟೀರಿಯಾ ಸೋಂಕು, ವಸಡಿನ ರೋಗ, ದುರ್ಬಲ ಹಲ್ಲುಗಳು ಹಲ್ಲು ನೋವಿಗೆ ಪ್ರಮುಖ ಕಾರಣವಾಗಿದೆ. ಇದರಿಂದ ಹಲ್ಲು ನೋವಿನ ಜೊತೆಗೆ ದವಡೆಗಳ ಊತ ಮತ್ತು ಕೀವು ಸಹ ಕಂಡು ಬರುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ದೊರೆಯದಿದ್ದಲ್ಲಿ ನೋವು ಮೂಳೆಗಳಿಗೆ ವ್ಯಾಪಿಸಿ ಮುಂದೆ ಜೀವಕ್ಕೆ ಅಪಾಯವನ್ನು ಸಹ ಬಂದೊದಗಬಹುದು.
ಆದ್ದರಿಂದ ವೈದ್ಯರ ಬಳಿ ಹೋಗದೇ ನಮ್ಮ ಮನೆಯಲ್ಲಿಯೇ ಸಿಗುವಂತಹ ವಸ್ತುಗಳಿಂದ ಹಲ್ಲು ನೋವಿಗೆ ಪರಿಹಾರವನ್ನು ಕಂಡು ಕೊಳ್ಳಬಹುದು. ಇದಕ್ಕಾಗಿ ಕನ್ನಡ ಅಡ್ವೈಜರ್ ಇಂದು ಹಲ್ಲು ನೋವಿನ ಉಪಶಮನಕ್ಕೆ ಕೆಲವು ಟಿಪ್ಸ್ ನೀಡಲಿದೆ.
ಹಲ್ಲು ನೋವಿಗೆ ಪರಿಹಾರ:
- ಈರುಳ್ಳಿ: ಕತ್ತರಿಸಿದ ಈರುಳ್ಳಿಯನ್ನು ಹಲ್ಲಿನ ಮೇಲಿಟ್ಟರೆ ಹಲ್ಲು ನೋವು ಕಡಿಮೆಯಾಗುತ್ತದೆ. ಹಲ್ಲು ನೋವು ಪ್ರಾರಂಭವಾದ ಹಂತದಲ್ಲಿ ಹಸಿ ಈರುಳ್ಳಿಯನ್ನು ಜಗಿದು ಬಾಯಲ್ಲಿಟ್ಟುಕೊಳ್ಳುವುದರಿಂದ ನೋವು ಕಡಿಮೆಯಾಗಬಹುದು.
- ಲವಂಗ: ಲವಂಗದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿಯಿದೆ. ಹೀಗಾಗಿ ನೋವಿರುವ ಜಾಗಕ್ಕೆ ಲವಂಗವನ್ನು ಇಟ್ಟುಕೊಳ್ಳುವುದರಿಂದ ನೋವೂ ಉಪಶಮನವಾಗುತ್ತದೆ ಹಾಗೂ ಹಲ್ಲಿನಲ್ಲಿರುವ ಕೀಟಾಣುಗಳೂ ನಾಶವಾಗುತ್ತದೆ. ಲವಂಗದೆಣ್ಣೆಗೆ ಆಲಿವ್ ಆಯಿಲ್ ಬೆರೆಸಿ ಹತ್ತಿಯನ್ನು ಅದ್ದಿ, ಹಲ್ಲುಗಳಿಗೆ ಲೇಪಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.
- ಬೆಳ್ಳುಳ್ಳಿ : ಬೆಳ್ಳುಳ್ಳಿ ಸಿಪ್ಪೆ ತೆಗೆದು ಚೆನ್ನಾಗಿ ಜಜ್ಜಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ನೋವಿರುವ ಹಲ್ಲಿನ ಜಾಗಕ್ಕೆ ಇಟ್ಟುಕೊಳ್ಳಿ. ಬೆಳ್ಳುಳ್ಳಿಯ ಖಾರಕ್ಕೆ ನೋವು ಇಲ್ಲವಾಗುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ರಸವನ್ನು ತೆಗೆದು ಇನ್ಫೆಕ್ಷನ್ ಆಗಿರುವ ಭಾಗಕ್ಕೆ ಲೇಪಿಸಿದರೆ ಹಲ್ಲು ನೋವು ನಿವಾರಿಸಲು ಸಹಕರಿಸುತ್ತದೆ.
- ಕಾಳುಮೆಣಸು: ಉಪ್ಪು ಮತ್ತು ಕಾಳು ಮೆಣಸಿನ ಪುಡಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ನ್ನು ನೋವಿರುವ ಜಾಗಕ್ಕೆ ಹಚ್ಚಿಕೊಳ್ಳಿ. ತುಳಸಿ ಎಲೆ ಮತ್ತು ಕರಿಮೆಣಸನ್ನು ರುಬ್ಬಿ ಮಾತ್ರೆಗಳನ್ನು ಮಾಡಿಕೊಂಡು ಹಲ್ಲಿನ ನಡುವೆ ಇಟ್ಟುಕೊಂಡರೆ ಹಲ್ಲು ನೋವು ನಿವಾರಣೆಯಾಗುತ್ತದೆ.
- ಉಪ್ಪು ನೀರು: ಸ್ವಲ್ಪ ಕಾದಿರುವ ಬಿಸಿ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಿಕೊಳ್ಳುವುದರಿಂದ ಬಾಯಲ್ಲಿರುವ ಕೀಟಾಣುಗಳು ನಾಶವಾಗಿ ಶುಚಿಯಾಗುತ್ತದೆ. ಇದರಿಂದ ನೋವಿಗೆ ಕಾರಣವಾಗುವ ಅಂಶಗಳೂ ನಿವಾರಣೆಯಾಗುತ್ತವೆ.
- ನಿಂಬೆ ರಸ: ನಿಂಬೆ ರಸವು ಹಲ್ಲುನೋವನ್ನು ಕಡಿಮೆ ಮಾಡಬಲ್ಲದು. ನೋವು ಹೆಚ್ಚಿದ್ದರೆ ರೋಜ್ ವಾಟರ್ ಹಾಗೂ ನಿಂಬೆ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ನೋವು ಕಡಿಮೆಯಾಗುತ್ತದೆ.
- ಗೋಧಿ ತೆನೆ: ಹಲ್ಲು ಹಾಗೂ ಒಸಡಿನ ನೋವಿನ ನಿವಾರಣೆಗೆ ಗೋಧಿ ತೆನೆಯ ರಸ ಬಹಳ ಒಳ್ಳೆಯ ಔಷಧಿ. ಇದು ಹಲ್ಲು ನೋವನ್ನು ನಿವಾರಿಸುತ್ತದೆ ಹಾಗೂ ಬ್ಯಾಕ್ಟೀರಿಯಾಗಳನ್ನು ತೊಲಗಿಸುತ್ತದೆ.
- ಬೇವಿನ ಕಡ್ಡಿ: ವಾರೊಕ್ಕೊಮ್ಮೆಯಾದರೂ ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ ಹಲ್ಲುಗಳು ಗಟ್ಟಿಯಾಗುವುದರ ಜತೆಗೆ ಆರೋಗ್ಯವಾಗಿರುತ್ತವೆ.
For those that have had tooth pain, you know just how terrible it can feel. Tooth pain will often prevent you functioning normally. It can ruin the pleasure of eating, and even make you want to stop talking. Tooth pain from a tooth cavity or a broken tooth can derail your life.