ಇಂದು ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆಯ ಬ್ರ್ಯಾಂಡ್ ಸ್ಮಾರ್ಟ್ಫೋನ್(Smartphone) ನಿಂದ ಪಡೆಯ ಬಹುದಾದ ಸೇವೆಯನ್ನು, ಟಚ್ ಸ್ಕ್ರೀನ್ ಅಲ್ಲದಿದ್ದರೂ ಜಿಯೋ ಫೋನ್(jio phone) ನಲ್ಲಿ ಪಡೆಯಬಹುದಾಗಿದೆ. ಅಂತಹ ಫೀಚರ್ಗಳನ್ನುಅತೀ ಕಡಿಮೆ ಬೆಲೆಗೆ ಮುಕೇಶ್ ಅಂಬಾನಿ ರವರು ಭಾರತದ ಪತ್ರಿಯೊಬ್ಬ ಪ್ರಜೆಯ ಕೈಗೆಟುಕುವ ಹಾಗೆ ಒದಗಿಸಿದ್ದಾರೆ. ಅವರ ಜಿಯೋ ಫೋನ್(Jio Phone) ನಲ್ಲಿ ಕೇವಲ ಜಿಯೋ ಸಿಮ್(Jio Sim) ಗಳನ್ನು ಮಾತ್ರ ಬಳಸಬಹುದಾಗಿದೆ. ಆ ಸಿಮ್ಗಳನ್ನು ಆಕ್ಟಿವೇಶನ್ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದು, ಕೆಲವು ಅಂಶಗಳು ಗಮನಾರ್ಹವಾಗಿವೆ.
ಜಿಯೋ ಫೋನ್ ನಲ್ಲಿ ಜಿಯೋ ಸಿಮ್ ಆಕ್ಟಿವೇಶನ್ ಮಾಡಲು ಈ ಕೆಳಗಿನ ಮಾರ್ಗ ಅನುಸರಿಸಿ
– ಜಿಯೋ ಸಿಮ್ ಅನ್ನು ಇತರೆ ಮೊಬೈಲ್ಗಳಲ್ಲಿ ಆಕ್ಟಿವೇಟ್ ಮಾಡುವಂತೆ E-KYC ಪ್ರಕ್ರಿಯೆ ಅನುಸರಿಸಿ ಆಕ್ಟಿವೇಟ್ ಮಾಡಬಹುದು.
– ಆದರೆ ಜಿಯೋ ಸಿಮ್ ಆಕ್ಟಿವೇಟ್ ಮಾಡಲು ಜಿಯೋ ಸ್ಟೋರ್ಗಳಿಗೆ ಹೋದಾಗ ಆಧಾರ್ ಕಾರ್ಡ್ ಅನ್ನು ಮರೆಯದೇ ತೆಗೆದುಕೊಂಡು ಹೋಗಬೇಕು.
– ಅಲ್ಲದೇ ಜಿಯೋ ಫೋನ್ ನಲ್ಲಿ ಜಿಯೋ ಸಿಮ್ ಆಕ್ಟಿವೇಶನ್ ಮಾಡಲು ಮೊದಲ ಬಾರಿಗೆ ರೂ,49 ರ ಅಥವಾ ರೂ.153 ರ ಪ್ಲಾನ್ ಅನ್ನು ರಿಚಾರ್ಜ್ ಮಾಡಬೇಕು.
– ಜಿಯೋ ಫೋನ್ ಗೆ ಜಿಯೋ ಸಿಮ್ ಆಕ್ಟಿವೇಶನ್ಗಾಗಿ ಪ್ರೈಮ್ ಪ್ಲಾನ್ ಅನ್ನು ಖರೀದಿಸುವ ಅವಶ್ಯಕತೆ ಇರುವುದಿಲ್ಲ.
ಸೂಚನೆ: ಜಿಯೋ ಮಾನ್ಸೂನ್ ಆಫರ್ ನಲ್ಲಿ ಜಿಯೋ ಫೋನ್ ಕೊಳ್ಳಲು ಜಿಯೋ ಯಾವುದೇ ಅಧಿಕೃತ ಕೊನೆಯ ದಿನಾಂಕವನ್ನು ಪ್ರಕಟಣೆ ಮಾಡಿಲ್ಲ.
In this article jio lovers can know how to activate a jio sim in Jio Phone in kannada. Jio Phone users can activate jio sim like any other phone via E-KYC process.