ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಟ್ರೈನ್ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬುಕ್ ಮಾಡಲು ಬಯಸುತ್ತಾರೆ. ಇದರಿಂದ ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುವ ತೊಂದರೆ ತಪ್ಪುತ್ತದೆ ಮತ್ತು ಸಮಯ ಉಳಿಯುತ್ತದೆ. ಆನ್ಲೈನ್ನಲ್ಲಿ ಬುಕ್ ಮಾಡಲಾಗುತ್ತಿರುವ ರೈಲು ಟಿಕೆಟ್ಗಳ ಪ್ರಮಾಣ ಹೆಚ್ಚಾಗುತ್ತಿದ್ದಂತೆ, ಹಲವಾರು ಪ್ಲಾಟ್ಫಾರ್ಮ್ಗಳು ಈಗ ಇ-ಸೌಲಭ್ಯವನ್ನು ಒದಗಿಸುತ್ತಿವೆ. ಹಾಗೇ IRCTC (Indian Railway Catering and Tourism Corporation) ಸುರಕ್ಷಿತ ವಹಿವಾಟುಗಳೊಂದಿಗೆ ಟಿಕೆಟ್ ಬುಕಿಂಗ್ ಅನ್ನು ಸುಲಭಗೊಳಿಸಲು IRCTC eWallet ಹೆಸರಿನ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಹೆಸರೇ ಸೂಚಿಸುವಂತೆ, ಇದು ಆನ್ಲೈನ್ ಆಯ್ಕೆಯಾಗಿದ್ದು, ಇಲ್ಲಿ ಬಳಕೆದಾರರು ಮುಂಚಿತವಾಗಿ ಹಣವನ್ನು ಠೇವಣಿ ಮಾಡಬಹುದು ಮತ್ತು ಟಿಕೆಟ್ಗಳನ್ನು ಬುಕ್ ಮಾಡುವಾಗ ಠೇವಣಿಯನ್ನೇ ಪಾವತಿ ಆಯ್ಕೆಯಾಗಿ ಬಳಸಬಹುದು.
ಹಾಗಾದರೆ ಇ-ವ್ಯಾಲೆಟ್ ಎಂದರೇನು?
ಇದು ಮುಂಗಡ ಪಾವತಿ ವ್ಯವಸ್ಥೆಯಾಗಿದ್ದು, IRCTC ಯಲ್ಲಿ ಮುಂಚಿತವಾಗಿ ಹಣವನ್ನು ಠೇವಣಿ ಮಾಡಬಹುದು. ಈ ಹಣವನ್ನು ನಂತರ ಅದರ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರುವ ರೈಲು ಟಿಕೆಟ್ಗಳು ಮತ್ತು ಇತರ ಪಾವತಿ ಆಯ್ಕೆಗಳನ್ನು ಬುಕ್ ಮಾಡಲು ಬಳಸಲಾಗುತ್ತದೆ.
IRCTC ಇ-ವ್ಯಾಲೆಟ್ಗೆ ನೋಂದಾಯಿಸುವುದು ಹೇಗೆ?
ಮೊದಲಿಗೆ ನಿಮ್ಮ IRCTC ಖಾತೆಗೆ ಲಾಗಿನ್ ಆಗಿ.
ಇ-ವ್ಯಾಲೆಟ್ ವಿಭಾಗಕ್ಕೆ ಹೋಗಿ ಮತ್ತು ‘ರಿಜಿಸ್ಟರ್ ನೌ’ ಕ್ಲಿಕ್ ಮಾಡಿ.
IRCTC ಇ-ವ್ಯಾಲೆಟ್ ನೋಂದಣಿಗಾಗಿ ನಿಮ್ಮ ಪ್ಯಾನ್ ಅಥವಾ ಆಧಾರ್ ಅನ್ನು ಪರಿಶೀಲಿಸಿ.
IRCTC ಇ-ವ್ಯಾಲೆಟ್ ನೋಂದಣಿ ಶುಲ್ಕವನ್ನು ಪಾವತಿಸಲು ಪಾವತಿ ಪುಟವು ಕಾಣಿಸಿಕೊಳ್ಳುತ್ತದೆ. ಶುಲ್ಕ ರೂ. 50 ತೆರಿಗೆಗಳನ್ನು ಹೊರತುಪಡಿಸಿ.
ಪಾವತಿ ಯಶಸ್ವಿಯಾದ ನಂತರ, ನೀವು ಲಾಗ್ ಔಟ್ ಆಗಿ.
IRCTC ಇ-ವ್ಯಾಲೆಟ್ಗೆ ಹಣವನ್ನು ಹೇಗೆ ಪಾವತಿಸುವುದು ?
ನಿಮ್ಮ IRCTC ಖಾತೆಗೆ ಲಾಗಿನ್ ಮಾಡಿ.
ಇ-ವ್ಯಾಲೆಟ್ ವಿಭಾಗಕ್ಕೆ ಹೋಗಿ ಮತ್ತು IRCTC ಇ-ವ್ಯಾಲೆಟ್ ಠೇವಣಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಿಮ್ಮ ವ್ಯಾಲೆಟ್ಗೆ ನೀವು ಠೇವಣಿ ಇಡಲು ಬಯಸುವ ಮೊತ್ತವನ್ನು ಆಯ್ಕೆಮಾಡಿ.
ಡ್ರಾಪ್ಡೌನ್ ಮೆನುವಿನಿಂದ ಪಾವತಿ ಆಯ್ಕೆಯನ್ನು ಆರಿಸಿ ಮತ್ತು ಸಲ್ಲಿಸು ಆಯ್ಕೆಯನ್ನು ಕ್ಲಿಕ್ ಮಾಡಿ.
ಒಮ್ಮೆ ಪಾವತಿ ಯಶಸ್ವಿಯಾದರೆ, ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ದೃಢೀಕರಿಸುವ ಸಂದೇಶವನ್ನು ನೀವು ಪಡೆಯುತ್ತೀರಿ.
ನೆನಪಿರಲಿ ಬಳಕೆದಾರರು ತಮ್ಮ IRCTC ಇ-ವ್ಯಾಲೆಟ್ಗಳಲ್ಲಿ ಕನಿಷ್ಠ 100 ಮತ್ತು ಗರಿಷ್ಠ 10,000 ರೂ.ಗಳನ್ನು ಠೇವಣಿ ಮಾಡಬಹುದು.
IRCTC ಇ-ವ್ಯಾಲೆಟ್ ಬಳಸಿ ಟಿಕೆಟ್ ಬುಕ್ ಮಾಡುವುದು ಹೇಗೆ?
ನಿಮ್ಮ IRCTC ಖಾತೆಗೆ ಲಾಗಿನ್ ಮಾಡಿ.
ನಿಮ್ಮ ಪ್ರಯಾಣಕ್ಕಾಗಿ ರೈಲು, ಮೂಲ, ಇಳಿಯುವ ಸ್ಥಳ, ಪ್ರಯಾಣಿಕರ ವಿವರಗಳು ಮತ್ತು ದಿನಾಂಕವನ್ನು ಆಯ್ಕೆಮಾಡಿ.
ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ಟಿಕೆಟ್ಗಳನ್ನು ಬುಕ್ ಮಾಡಲು ಮುಂದುವರಿಯಿರಿ.
ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಪಾವತಿ ಆಯ್ಕೆಗೆ ಹೋಗಿ.
ಪಾವತಿ ವಿಭಾಗದ ಅಡಿಯಲ್ಲಿ, IRCTC ಇ-ವ್ಯಾಲೆಟ್ ಆಯ್ಕೆಯನ್ನು ಆಯ್ಕೆಮಾಡಿ.
ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಹಿವಾಟಿನ ಪಾಸ್ವರ್ಡ್ ಅನ್ನು ನಮೂದಿಸಿ.
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಪಡೆಯುತ್ತೀರಿ. ವಹಿವಾಟನ್ನು ಖಚಿತಪಡಿಸಲು OTP ಅನ್ನು ನಮೂದಿಸಿ.
ನಿಗದಿತ ಮೊತ್ತವನ್ನು ನಿಮ್ಮ ಇ-ವ್ಯಾಲೆಟ್ನಿಂದ ಕಡಿತಗೊಳಿಸಲಾಗುತ್ತದೆ.