ಇಂದು ರೈತನಿಂದ, ಖಾಸಗಿ, ಸರ್ಕಾರಿ ಕಂಪನಿಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ ಪ್ಯಾನ್ ಕಾರ್ಡ್ ಒಂದು ರೀತಿ ಅಗತ್ಯವಾದ ಗುರುತಿನ ಚೀಟಿಯಂತೆ. ಇದು ಬ್ಯಾಂಕ್ ವ್ಯವಹಾರಗಳ ಪ್ರಮುಖ ಕೆಲಸಗಳಿಗೆ ಉಪಯುಕ್ತವಾಗಿದೆ. ಈ ಪ್ಯಾನ್ ಕಾರ್ಡ್ ಕಳೆದುಹೋದಲ್ಲಿ, ಅದೇ ನಂಬರ್ನ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ, ಎಲ್ಲಿ ಪಡೆಯಬೇಕು, ಎಷ್ಟು ಹಣ ಖರ್ಚು ಆಗುತ್ತದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.
ಮತ್ತೊಮ್ಮೆ ಪ್ಯಾನ್ ಕಾರ್ಡ್ ಪಡೆಯಲು ಈ ಕೆಳಗಿನ ಸರಳ ಟಿಪ್ಸ್ ಫಾಲೋ ಮಾಡಿರಿ.
– ಗೂಗಲ್ ಗೆ ಭೇಟಿ ನೀಡಿ ‘PAN Card Reprint’ ಎಂದು ಟೈಪಿಸಿ ಸರ್ಚ್ ಮಾಡಿ.
– ನಂತರ ಪ್ರದರ್ಶನವಾಗು ಗೂಗಲ್ ರಿಸಲ್ಟ್ ಪೇಜ್ಗಳಲ್ಲಿ NSDL ಅಧಿಕೃತ ವೆಬ್ಸೈಟ್ ವಿಳಾಸ ‘https://www.onlineservices.nsdl.com/paam/ReprintEPan.html’ ಕ್ಕೆ ಭೇಟಿ ನೀಡಿ.
– ಓಪನ್ ಆದ ಪೇಜ್ನಲ್ಲಿ ಪ್ಯಾನ್ ಕಾರ್ಡ್ ನಂಬರ್, ಆಧಾರ್ ಕಾರ್ಡ್ ನಂಬರ್, ಜನ್ಮ ದಿನಾಂಕ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಿ. GSTN ಎಂದಿರುವ ಬಾಕ್ಸ್ ಅನ್ನು ಖಾಲಿ ಬಿಡಬಹುದು.
– ನಂತರ ಕೆಳಗೆ ನೀಡಲಾದ ಬಾಕ್ಸ್ ಅನ್ನು ಟಿಕ್ ಮಾಡಿ, ಕ್ಯಾಪ್ಚಾ ಲೆಟರ್ಗಳನ್ನು ನೀಡಿ, ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
– ನಂತರ ಓಪನ್ ಆಗುವ ಪೇಜ್ನಲ್ಲಿ ನಿಮ್ಮ ಎಲ್ಲಾ ಮಾಹಿತಿಗಳನ್ನು ನೀಡಲಾಗಿರುತ್ತದೆ.
– ಈ ಪೇಜ್ನಲ್ಲಿ ನೀವು ಪ್ಯಾನ್ ಕಾರ್ಡ್ ಅನ್ನು ಯಾವ ವಿಳಾಸಕ್ಕೆ ಕಳುಹಿಸಬೇಕು ಎಂಬುದನ್ನು ವಿಳಾಸ ಮತ್ತು ಪಿನ್ ಕೋಡ್ ಸಹಿತ ಇರುವಂತೆ ಖಚಿತಪಡಿಸಬೇಕು.
– ವಿಳಾಸ ಪರಿಶೀಲನೆ ನಂತರ ನೀವು ಒಂದು OTP ಅನ್ನು ರಿಜಿಸ್ಟರ್ ಮೊಬೈಲ್ ಸಂಖ್ಯೆ, ಇ-ಮೇಲ್ ಗೆ ಪಡೆಯುತ್ತೀರಿ. ಅದಕ್ಕಾಗಿ ಜೆನೆರೇಟ್ OTP ಕ್ಲಿಕ್ ಮಾಡಿದರೆ, ಮೊಬೈಲ್ ಬರುತ್ತದೆ. ಅದನ್ನು ಕೇಳಲಾದ ಬಾಕ್ಸ್ನಲ್ಲಿ ನೀಡಿ.
– OTP ನಮೂದಿಸಿದ ನಂತರ, ನೀವು 50 ರೂಪಾಯಿಗಳನ್ನು ಆನ್ಲೈನ್ ಮೂಲಕವೇ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐನಂತಹ ಅನೇಕ ಆಯ್ಕೆಗಳ ಮೂಲಕ ಪಾವತಿಸಬೇಕು.
– ಶುಲ್ಕ ಪಾವತಿ ನಂತರ ನಿಮ್ಮನ್ನು ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದ ವೆಬ್ಸೈಟ್ಗೆ ಮರುನಿರ್ದೇಶಿಸಲಾಗುತ್ತದೆ. ಇಲ್ಲಿ ನೀವು ‘Continue’ ಎಂದು ಕ್ಲಿಕ್ ಮಾಡಬೇಕು.
– ಇಲ್ಲಿ ನೀವು ಶುಲ್ಕ ಪಾವತಿ ರಶೀದಿ ತೆಗೆದುಕೊಳ್ಳಲು ಜೆನೆರೇಟ್ ಮತ್ತು ಪ್ರಿಂಟ್ ಆಯ್ಕೆಗಳನ್ನು ಕ್ಲಿಕ್ ಮಾಡಬೇಕು. ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು.
ಪ್ಯಾನ್ ಕಾರ್ಡ್ ನೀವು ನೀಡಲಾದ ವಿಳಾಸಕ್ಕೆ ಅಂಚೆ ಅಥವಾ ಕೊರಿಯರ್ ಮೂಲಕ ಬಂದು ತಲುಪುವುದು.
ವೋಟರ್ ಐಡಿ ಕಾರ್ಡ್ ಆನ್ಲೈನ್ನಲ್ಲಿ ಲಭ್ಯ: ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಹೇಗೆ ಗೊತ್ತೇ?