ರಾಯಚೂರು ಜಿಲ್ಲೆಯಾದ್ಯಂತ ಇರುವ ನ್ಯಾಯಾಲಯಗಳಲ್ಲಿ ಆದೇಶ ಜಾರಿಕಾರರು, ಜವಾನರು, ಸ್ಟೆನೋಗ್ರಾಫರ್, ಬೆರಳಚ್ಚುಗಾರರ ನೇಮಕಾತಿಗೆ ಅಪ್ಲಿಕೇಶನ್ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸಾದವರು ಮಾರ್ಚ್ 10 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
ಶೀಘ್ರಲಿಪಿಗಾರರು ಗ್ರೇಡ್-III: 07
ಬೆರಳಚ್ಚುಗಾರರು : 01
ಆದೇಶ ಜಾರಿಕಾರರು : 03
ಜವಾನ : 22
ಸಂಭಾವನೆ ವಿವರ
ಶೀಘ್ರಲಿಪಿಗಾರರು: ರೂ.27650-52650.
ಬೆರಳಚ್ಚುಗಾರರು: ರೂ.21400-42000.
ಆದೇಶ ಜಾರಿಕಾರರು: ರೂ.19950-37900.
ಜವಾನ : ರೂ.17000-28950.
ವಿದ್ಯಾರ್ಹತೆ
ದ್ವಿತೀಯ ಪಿಯುಸಿ ಪಾಸ್ ಅಥವಾ 3 ವರ್ಷಗಳ ಡಿಪ್ಲೊಮ ಕಮರ್ಸಿಯಲ್ ಪ್ರಾಕ್ಟೀಸ್ ಪರೀಕ್ಷೆ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಪಾಸ್. ಅಥವಾ ಡಿಪ್ಲೊಮ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
ಆದೇಶ ಜಾರಿಕಾರರು ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ. ವಾಹನ ಚಾಲನ ಪರವಾನಿಗೆ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ಕೋರ್ಟ್ ಜವಾನ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ. ಕನ್ನಡ ಓದಲು ಮತ್ತು ಬರೆಯಲು ಬರಬೇಕು.
ವಯಸ್ಸಿನ ಅರ್ಹತೆಗಳು
ಅರ್ಜಿ ಹಾಕಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ ಅರ್ಹತೆಗಳು ಅನ್ವಯವಾಗಲಿವೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10-03-2023 ರ ರಾತ್ರಿ 11-59 ರವರೆಗೆ.
ಅರ್ಜಿ ಶುಲ್ಕ ರೂ.200.