ಇಂದು ಪ್ರತಿಯೊಂದು ಬ್ಯಾಂಕ್ ವ್ಯವಹಾರ ಮತ್ತು ಹಣಕಾಸು ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯ. ಪಾನ್ ಕಾರ್ಡ್ ಇಲ್ಲದಿದ್ದರೆ ಹಲವಾರು ವ್ಯವಹಾರಗಳಿಗೆ ಅಡ್ಡಿಯಾಗುವುದು ಉಂಟು.
ಪಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿ ಸ್ಟೇಟಸ್ ಚೆಕ್ ಮಾಡುವುದು ತುಂಬಾ ಸಿಂಪಲ್. ಒಮ್ಮೆ ನೀವು ಪಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಲ್ಲಿಸಿದವರಲ್ಲಿ ಸ್ವೀಕೃತಿ ನಂಬರ್ ಪಡೆಯಿರಿ. ಆ ಸ್ವೀಕೃತಿ ನಂಬರ್ ಬಳಸಿ ನಿಮ್ಮ ಪಾನ್ ಕಾರ್ಡ್ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.
ಪಾನ್ ಕಾರ್ಡ್ ಸ್ಟೇಟಸ್ ಅನ್ನು UTI ಪೋರ್ಟಲ್ ನಲ್ಲಿ ಅಥವಾ NSDL ಪೋರ್ಟಲ್ ನಲ್ಲಿ ಚೆಕ್ ಮಾಡಬಹುದು.
ಪಾನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಲು ಭೇಟಿ ನೀಡಬೇಕಾದ
– ಆನ್ಲೈನ್ UTI ಪೋರ್ಟಲ್ – ಕ್ಲಿಕ್ ಮಾಡಿ
ನಂತರ
– ಓಪನ್ ಆದ ಸ್ಟೇಟಸ್ ಚೆಕ್ ಪೇಜ್ ನಲ್ಲಿ ಪಾನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ ನಂತರ ನೀಡಲಾದ ಸ್ವೀಕೃತಿ ನಂಬರ್ ಅನ್ನು ಎಂಟರ್ ಮಾಡಿ.
– ನಿಮ್ಮ ಜನ್ಮ ದಿನಾಂಕವನ್ನು ಎಂಟರ್ ಮಾಡಿ
– ನಂತರದ ಕಾಲಂ ನಲ್ಲಿ ಎಡಭಾಗದಲ್ಲೇ ನೀಡಲಾದ ಕ್ಯಾಪ್ಚ ನಂಬರ್ ಅನ್ನು ಎಂಟರ್ ಮಾಡಿ.
– Submit ಆಯ್ಕೆ ಮೇಲೆ ಕ್ಲಿಕ್ ಮಾಡಿ.
– ನಂತರ ಓಪನ್ ಆದ ಪೇಜ್ ನಲ್ಲಿ ಪಾನ್ ಕಾರ್ಡ್ ತಯಾರಿ ಪ್ರಕ್ರಿಯೆ ಯಾವ ಹಂತದಲ್ಲಿದೆ, ತಯಾರಿ ಮುಗಿದು ನೀವು ನೀಡಲಾದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಲಾಗಿದೆಯೇ ಎಂಬುದನ್ನು ಇಂಗ್ಲೀಷ್ನಲ್ಲಿ ನೀಡಲಾಗಿರುತ್ತದೆ.
– ಆನ್ಲೈನ್ NSDL ಪೋರ್ಟಲ್ – ಕ್ಲಿಕ್ ಮಾಡಿ
ನಂತರ
– ಓಪನ್ ಆದ ಪೇಜ್ನಲ್ಲಿ ಮೊದಲಿಗೆ ‘PAN – New/Change Request’ ಅಪ್ಲಿಕೇಶನ್ ಟೈಪ್ ಅನ್ನು ಆಯ್ಕೆ ಮಾಡಿ.
– ನಂತರ ಸ್ವೀಕೃತಿ ನಂಬರ್ ಅನ್ನು ಟೈಪಿಸಿ
– ಕ್ಯಾಪ್ಚ ನಂಬರ್ ಅನ್ನು ಎಂಟರ್ ಮಾಡಿ
– Submit ಆಯ್ಕೆ ಮೇಲೆ ಕ್ಲಿಕ್ ಮಾಡಿ.
– ನಂತರ ಓಪನ್ ಆದ ಪೇಜ್ ನಲ್ಲಿ ಪಾನ್ ಕಾರ್ಡ್ ಸ್ಟೇಟಸ್ ಕಾಣುತ್ತದೆ.
ಪಾನ್ ಕಾರ್ಡ್ ಸ್ಟೇಟಸ್ ಅನ್ನು ಈ ಕೆಳಗಿನಂತೆ ನೀವು ನೋಡಬಹುದು.