ಫೇಸ್ಬುಕ್ ಒಡೆತನದ ವಾಟ್ಸಾಪ್ ಈಗ ತನ್ನ ಬಳಕೆದಾರರಿಗಾಗಿ ಕುತೂಹಲಕಾರಿಯಾದ ಒಂದು ಫೀಚರ್ ಅನ್ನು ಅಪ್ಲಿಕೇಶನ್ ನಲ್ಲಿ ಅಪ್ಡೇಟ್ ಮಾಡಿದೆ. ಅದೇ ವಾಟ್ಸಾಪ್ ಸ್ಟಿಕ್ಕರ್(WhatsApp Sticker).
ಮೊದಲೆಲ್ಲ ವಾಟ್ಸಾಪ್ ನೀಡಿದ್ದ ಸ್ಟಿಕ್ಕರ್ ಗಳನ್ನೇ ಬಳಕೆದಾರರು ಸ್ನೇಹಿತರೊಂದಿಗೆ ಹಂಚಿಕೊಂಡು ಚಾಟ್ ಮಾಡಬೇಕಿತ್ತು. ಆದರೆ ಈಗ ನೀಡಿರುವ ಹೊಸ ಫೀಚರ್ ನಿಂದ ಬಳಕೆದಾರರು ಇನ್ನಷ್ಟು ಸಂತೋಷಗೊಂಡಿದ್ದಾರೆ.
ಹೌದು. ವಾಟ್ಸಾಪ್ ಈಗ ತನ್ನ ಬಳಕೆದಾರರು ಅವರದ್ದೇ ಫೋಟೋಗಳು ಅಥವಾ ಸೆಲ್ಫಿ ಕ್ಲಿಕ್ಕಿಸಿಕೊಂಡು ಅವರದ್ದೇ ಸ್ವಂತ ಸ್ಟಿಕ್ಕರ್ ಗಳನ್ನು ಕ್ರಿಯೇಟ್ ಮಾಡಿಕೊಳ್ಳಲು ಅವಕಾಶ ನೀಡುವ ಫೀಚರ್ ಅನ್ನು ಅಪ್ಡೇಟ್ ಮಾಡಿದೆ.
ನೀವು ನಿಮ್ಮ ಸ್ಹೇಹಿತರಿಗೆ ವಿಶೇಷವಾಗಿ ನಿಮ್ಮದೇ ಇಮೇಜ್ ಸ್ಟಿಕ್ಕರ್ನಲ್ಲಿ ಕ್ರಿಸ್ಮಸ್ ಗೆ, ಹೊಸ ವರ್ಷಕ್ಕೆ ಶುಭಾಶಯಗಳನ್ನು ತಿಳಿಸಬೇಕೆ. ಹಾಗಿದ್ದಲ್ಲಿ ಆ ಸ್ಟಿಕ್ಕರ್ಗಳನ್ನು ಸರಳವಾಗಿ ಕ್ರಿಯೇಟ್ ಮಾಡಿಕೊಳ್ಳುವ ವಿಧಾನ ಈ ಕೆಳಗಿನಂತಿದೆ ಓದಿರಿ..
– ಸ್ಟಿಕ್ಕರ್ ಫೀಚರ್ ಅಪ್ಡೇಟ್ ಅನ್ನು ಪಡೆದಿರುವ ವಾಟ್ಸಾಪ್ ಬಳಕೆದಾರರು ಮಾತ್ರ ತಮ್ಮ ಸೆಲ್ಫಿ ಮತ್ತು ಫೋಟೋಗಳನ್ನೇ ಸ್ಟಿಕ್ಕರ್ ಆಗಿ ಕ್ರಿಯೇಟ್ ಮಾಡಬಹುದು.
– ಆ ಫೀಚರ್ ಅಪ್ಡೇಟ್ ಪಡೆದವರು ಯಾವುದಾದರೂ ಗ್ರೂಪ್ ಅಥವಾ ಸ್ನೇಹಿರೊಂದಿಗಿನ ಚಾಟ್ ಗೆ ಹೋಗಿ ಎಮೋಜಿ ಐಕಾನ್ ಮೇಲೆ ಕ್ಲಿಕ್ ಮಾಡಿ.
– ಹಲವು ಎಮೋಜಿಗಳ ನಂತರ ಕೆಳಗೆ ಮೂರು ಆಯ್ಕೆಗಳು ಕಾಣುತ್ತವೆ. ಅವುಗಳಲ್ಲಿ ಮೊದಲನೇಯದು ಎಮೋಜಿ ಮತ್ತು ಎರಡನೇಯದು ಜಿಫ್ ಐಕಾನ್. ಉಳಿದ ಮೂರನೇ ಐಕಾನೇ ಸ್ಟಿಕ್ಕರ್ ಫೀಚರ್ ನದ್ದು.
– ಆ ಸ್ಟಿಕ್ಕರ್ ಫೀಚರ್ ಮೇಲೆ ಕ್ಲಿಕ್ ಮಾಡಿದಾಗ ಓಪನ್ ಆಗುವ ಪೇಜ್ನಲ್ಲಿಯೇ ಬಲಭಾಗದಲ್ಲಿ ‘+’ ಐಕಾನ್ ಕಾಣುತ್ತದೆ.
– ಆ ‘+’ ಐಕಾನ್ ನೇ ವಾಟ್ಸಾಪ್ ಬಳಕೆದಾರರಿಗೆ ತಮ್ಮ ಸೆಲ್ಫಿ ಮತ್ತು ಫೋಟೋಗಳನ್ನೇ ಸ್ಟಿಕ್ಕರ್ ಗಳಾಗಿ ಪರಿವರ್ತಿಸಲು ಸಹಾಯಕವಾಗಿದೆ.
– ‘+’ ಫೀಚರ್ ಕ್ಲಿಕ್ ಮಾಡಿದಾಗ ಓಪನ್ ಆಗುವ ಹೊಸ ಪೇಜ್ನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ.
– ಕೊನೆಯಲ್ಲಿ ‘Get more Stickers’ ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಂತರ ನಿಮಗೆ ನೇರವಾಗಿ ಗೂಗಲ್ ಪ್ಲೇ ಸ್ಟೋರ್ ಸುಲಭವಾಗಿ ಓಪನ್ ಆಗುತ್ತದೆ.
– ಓಪನ್ ಆದ ಗೂಗಲ್ ಪ್ಲೇ ಸ್ಟೋರ್ ಸರಳ ಪೇಜ್ ನಲ್ಲಿ ‘Sticker Studio – Sticker Maker for WhatsApp’ ಆಪ್ ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿ. ಹಾಗೂ ಈ ಆಪ್ ಗೆ ನಿಮ್ಮ ಸ್ಮಾರ್ಟ್ಫೋನ್ ನಲ್ಲಿನ ಗ್ಯಾಲರಿ ಆಕ್ಸೆಸ್ ಮಾಡಲು ಪರ್ಮಿಸನ್ ಕೊಡಿ.
– ನಂತರ ನೀವು ಹೊಸ ಸೆಲ್ಪಿ ಆಗಲಿ, ಈಗಾಗಲೇ ಸ್ಟೋರ್ ನಲ್ಲಿರುವ ಫೋಟೋಗಳನ್ನು, ಅಥವಾ ಗ್ಯಾಲರಿಯ ಬ್ಯಾಗ್ರೌಂಡ್ ಅನ್ನೇ ಸ್ಟ್ರಿಕ್ಕರ್ ಆಗಿ ಪರಿವರ್ತಿಸಲು ಅವಕಾಶ ಇರುತ್ತದೆ.
– ಯಾವುದೇ ಇಮೇಜ್ ಅನ್ನು ಸೆಲೆಕ್ಟ್ ಮಾಡಿದ ನಂತರ ಅದೇ ಇಮೇಜ್ ಮೇಲೆ ನಿಮಗೆ ಬೇಕಾದ ಹಾಗೆ ಸ್ಟಿಕ್ಕರ್ ರಚಿಸಲು ಬೆರಳಿನಲ್ಲೇ ಡ್ರಾಯಿಂಗ್ ಮಾಡಿ. ನೀವು ಗೆರೆ ಎಳೆದ ರೀತಿಯಲ್ಲೇ ಸ್ಟಿಕ್ಕರ್ ಕ್ರಿಯೇಟ್ ಆಗಿ ನಂತರ ಸೇವ್ ಆಗುತ್ತದೆ. ಅಥವಾ ಮೊದಲೇ ಹೆಸರು ನೀಡಿಯೂ ಸಹ ಸ್ಟಿಕ್ಕರ್ ಕ್ರಿಯೇಟ್ ಮಾಡಬಹುದು.
– ಆದರೆ ನೀವು ನಿಮ್ಮ ಸ್ಟಿಕ್ಕರ್ ಪ್ಯಾಕ್ ಬಳಸಲು ಕನಿಷ್ಠ 3 ಸ್ಟಿಕ್ಕರ್ ಅನ್ನು ಕ್ರಿಯೇಟ್ ಮಾಡಬೇಕು. ನಂತರ ‘Add on WhatsApp’ ಆಪ್ಸನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವಾಟ್ಸಾಪ್ ನಲ್ಲಿ ನಿಮ್ಮದೇ ಸ್ಟಿಕ್ಕರ್ ಗಳನ್ನು ಸ್ಹೇಹಿತರೊಂದಿಗೆ ಬಳಸಬಹುದು.
ವಾಟ್ಸಾಪ್ ಸ್ಟಿಕ್ಕರ್ ಕ್ರಿಯೇಟ್ ಮಾಡಲು ನಾವು ತಿಳಿಸಿದ ಈ ಹಂತಗಳಲ್ಲಿ ನಿಮಗೆ ಡೌಟ್ ಇದ್ದಲ್ಲಿ ಕಮೆಂಟ್ ಬಾಕ್ಸ್ ನಲ್ಲಿ ಪ್ರಶ್ನಿಸಬಹುದು.
Use these simple steps and know How to create WhatsApp Stickers from our own selfies and photos. Read more here.