ಇಂದು ಸಾಮಾಜಿಕ ಜಾಲತಾಣಗಳ ಬಳಕೆ ಮಾಡದವರು ಬೆರಳೆಣಿಕೆ ಎಂದೇಳಬಹುದು. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೀತಿಯ ಸಾಮಾಜಿಕ ಜಾಲತಾಣಬಳಕೆಗಳು ಬಂದಿವೆ. ಅವುಗಳಲ್ಲಿ ಚೀನ ಮೂಲದ ಬೈಟ್ಡ್ಯಾನ್ಸ್ ಕಂಪನಿಯ Hello ಆಪ್ ಸಹ ಒಂದು. ಇನ್ನೂ ಟಿಕ್ ಟಾಕ್ ಸಾಮಾಜಿಕ ವಿಡಿಯೋ ತಾಣವಾಗಿದೆ. ಈ ಆಪ್ಗಳು ಫೇಸ್ಬುಕ್ ಗಿಂತ ವೇಗವಾಗಿ ತಮ್ಮ ಬಳಕೆದಾರರನ್ನು ಹೆಚ್ಚು ಮಾಡಿಕೊಳ್ಳುತ್ತಿವೆ.
ಅಂದಹಾಗೆ ಇಂದಿನ ಲೇಖನದಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ನಿಮ್ಮ ಇಷ್ಟದ ವಿಡಿಯೋಗಳನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬುದನ್ನು ಸರಳವಾಗಿ ಇಲ್ಲಿ ಹೇಳಿದ್ದೇವೆ ನೋಡಿ.
– ಫೇಸ್ಬುಕ್ ವಿಡಿಯೋ ಮತ್ತು ಇನ್ಸ್ಟಾಗ್ರಾಂ ನಲ್ಲಿನ ವಿಡಿಯೋಗಳನ್ನು ಡೌನ್ಲೋಡ್ ಮಾಡಲು, ಮೊದಲಿಗೆ ವಿಡಿಯೋ ಡೌನ್ಲೋಡರ್(Video Downloader) ಮತ್ತು ಇಜೀ ಡೌನ್ಲೋಡರ್(Easy Downloader) ಆಪ್ಗಳನ್ನು ನಿಮ್ಮ ಆಂಡ್ರಾಯ್ಡ್ ಮೊಬೈಲ್ಗೆ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ.
ಫೇಸ್ಬುಕ್ ವಿಡಿಯೋ ಡೌನ್ಲೋಡ್ ಮಾಡುವುದು ಹೇಗೆ?
-ವಿಡಿಯೋ ಡೌನ್ಲೋಡರ್ ಆಪ್ ಇನ್ಸ್ಟಾಲ್ ಆದ ನಂತರ, ಇದರಲ್ಲಿ ನಿಮ್ಮ ಫೇಸ್ಬುಕ್ ಯೂಸರ್ ನೇಮ್ ಐಡಿಯೊಂದಿಗೆ ಈ ಆಪ್ನಲ್ಲಿ ಲಾಗಿನ್ ಆಗಿ
– ನಂತರ ನೀವು ಫೇಸ್ಬುಕ್ ಅನ್ನು ಹೇಗೆ ಬಳಸುತ್ತಿರೋ ಅದೇ ರೀತಿ ವಿಡಿಯೋ ಡೌನ್ಲೋಡರ್ ನಲ್ಲಿ ಬಳಕೆ ಆರಂಭಿಸಿದರೆ ವಿಡಯೋ ಗಳು ಪ್ರದರ್ಶನಗೊಳ್ಳುತ್ತವೆ.
– ನಿಮಗೆ ಬೇಕಾದ ವಿಡಿಯೋ ಮೇಲೆ ಕ್ಲಿಕ್ ಮಾಡಿದರೆ, ಪ್ಲೇ, ಡೌನ್ಲೋಡ್, ಶೇರ್ ಆಯ್ಕೆಗಳು ಗೋಚರಿಸುತ್ತವೆ.
– ನೀವು ಡೌನ್ಲೋಡ್ ಮಾಡಲು Download ಆಪ್ಶನ್ ಆಯ್ಕೆ ಮಾಡಿದರೆ, ವಿಡಿಯೋ ಯಾವ ಕ್ವಾಲಿಟಿಯಲ್ಲಿ ಬೇಕು ಎಂಬುದನ್ನು ಆಯ್ಕೆ ಮಾಡಿಕೊಂಡು ಓಕೆ ಮಾಡಬೇಕು. ನಂತರ ವಿಡಿಯೋ ಡೌನ್ಲೋಡ್ ಆಗುತ್ತದೆ.
ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಡೌನ್ಲೋಡ್ ಮಾಡುವುದು ಹೇಗೆ?
– ಈಗಾಗಲೇ ತಿಳಿಸಿದಂತೆ Easy Downloader ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿದ್ದೀರಿ.
– ಇನ್ಸ್ಟಾಗ್ರಾಂ ಆಪ್ ಓಪನ್ ಮಾಡಿ ನಿಮ್ಮ ಇಷ್ಟದ ವಿಡಿಯೋದ ಬಲಭಾಗದಲ್ಲಿ 3 ಚುಕ್ಕೆಗಳ ಮೇಲೆ ಟಚ್ ಮಾಡಿ.
– ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ಅವುಗಳಲ್ಲಿ Copy link ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಇಷ್ಟದ ವಿಡಿಯೋ ಡೌನ್ಲೋಡ್ ಆಗಿರುತ್ತದೆ.