ರೈಲ್ವೆ ನೇಮಕಾತಿ ಬೋರ್ಡ್ (Railway Recruitment Board-RRB) ಪರೀಕ್ಷೆ ದಿನಾಂಕ, ಯಾವ ಅಭ್ಯರ್ಥಿಗೆ ಎಲ್ಲಿ ಪರೀಕ್ಷೆ ಎಂಬ ಮಾಹಿತಿಯನ್ನು ಪ್ರಕಟಣೆ ಮಾಡಿದೆ. ಆದರೆ ಪರೀಕ್ಷೆ ಪ್ರವೇಶ ಪತ್ರವನ್ನು ಮಾತ್ರ ಪ್ರತಿಯೊಬ್ಬ ವಿದ್ಯಾರ್ಥಿಗೆ ತಮ್ಮ ತಮ್ಮ ಪರೀಕ್ಷೆ ಇನ್ನು ನಾಲ್ಕು-ಐದು ದಿನಗಳ ಅಂತರದಲ್ಲಿ ಬಿಡುಗಡೆ ಮಾಡುತ್ತಿದೆ. ಅಲ್ಲದೇ ಈ ಬಗ್ಗೆ ಆರ್ಆರ್ಬಿ ಅಭ್ಯರ್ಥಿಗಳ ವಯಕ್ತಿಕ ಮೊಬೈಲ್ ನಂಬರ್ಗೆ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದಾದ ಮೆಸೇಜ್ ಅನ್ನು ಕಳುಹಿಸುತ್ತಿದೆ.
ಆದರೆ ಪ್ರವೇಶ ಪತ್ರದ ಬಗ್ಗೆ ಸರಿಯಾಗಿ ಮಾಹಿತಿ ತಿಳಿಯದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ ಡೌನ್ಲೋಡ್ ಆಗುತ್ತಿಲ್ಲ, ಪ್ರಿಂಟ್ ತೆಗೆಯಲು ಆಗುತ್ತಿಲ್ಲ ಎಂದು ಗಾಬರಿಗೊಳ್ಳುತ್ತಿದ್ದಾರೆ.
ಒಂದು ವೇಳೆ RRB ಪರೀಕ್ಷೆ ಬರೆಯಬೇಕಾದ ಅಭ್ಯರ್ಥಿಗೆ ತನ್ನ ಪರೀಕ್ಷೆ ದಿನಾಂಕ ಇನ್ನು 4-5 ದಿನಗಳು ಇರುವಾಗಲೇ ತಾನು ಅರ್ಜಿ ಸಲ್ಲಿಸುವಾಗ ನೀಡಿರುವ ಮೊಬೈಲ್ ಸಂಖ್ಯೆಗೆ ಮತ್ತು ಇಮೇಲ್ ವಿಳಾಸಕ್ಕೆ ಮೆಸೇಜ್ ಬರದಿದ್ದಲ್ಲಿ ಈ ಕೆಳಗಿನ ಸಲಹೆಯನ್ನು ಅನುಸರಿಸಿ.
ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಫಾಲೋ ಮಾಡುವ ಮುಖಾಂತರ ಪ್ರಾದೇಶಿಕ ಆರ್ಆರ್ಬಿ ವೆಬ್ಸೈಟ್ಗಳಲ್ಲಿ ತಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು.
– ನೀವು ಯಾವ ಪ್ರಾದೇಶಿಕ ಆರ್ಆರ್ಬಿ ಅಧಿಕೃತ ವೆಬ್ಸೈಟ್ ನಲ್ಲಿ ಗ್ರೂಪ್ ಡಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದೀರೋ ಆ ವೆಬ್ಸೈಟ್ ಓಪನ್ ಮಾಡಿ
– ಬೆಂಗಳೂರು ಪ್ರಾದೇಶಿಕ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಅರ್ಜಿ ಸಲ್ಲಿಸಿರುವರು ಈ ಲಿಂಕ್ ಮಾಡಿ
– ಈ ಹಂತದಲ್ಲಿ ಪ್ರವೇಶ ಪತ್ರಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈ ಹಿಂದೆ ಪರೀಕ್ಷಾ ದಿನಾಂಕ, ಸ್ಥಳ, ಸಮಯ ನೋಡಲು ಯಾವ ಲಿಂಕ್ ಕ್ಲಿಕ್ ಮಾಡಿದ್ದಿರೋ ಅದೇ ಲಿಂಕ್ ಅನ್ನು ಹಾಲ್ ಟಿಕೆಟ್ಗಾಗಿಯೂ ಕ್ಲಿಕ್ ಮಾಡಬೇಕು. ಈ ಲಿಂಕ್ ಮಾಡಿ.
– ನಂತರ ಓಪನ್ ಆದ ಪೇಜ್ ನಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ನೀಡಿ ಲಾಗಿನ್ ಆಗಿ.
– ಲಾಗಿನ್ ಆದ ನಂತರ ನಿಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್ ಮಾಡಿಕೊಳ್ಳಲು ನೀಡಲಾದ ಆಯ್ಕೆ ಮೇಲೆ ಕ್ಲಿಕ್ ಮಾಡಿ ಪ್ರವೇಶ ಪತ್ರ ಪಡೆಯಿರಿ.
Here you can know how to get RRB group D examination admit card. To download admit card candidates may either go to the official website of indian railways.