ಚುನಾವಣಾ ಆಯೋಗವು ವೋಟರ್ ಐಡಿಯನ್ನು ಸಹ ಆಧಾರ್ ಕಾರ್ಡ್ನಂತೆ ಡಿಜಿಟಲ್ ಮೂಲಕ ಡೌನ್ಲೋಡ್ ಪಡೆಯಲು ಅವಕಾಶ ಮಾಡಿದೆ. ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವಾಗಿದ್ದು, ಈ ದಿನದಂತೆ ಮತದಾರರ ಗುರುತಿನ ಚೀಟಿಯನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡುವ ಯೋಜನೆಗೆ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ರವರು ಚಾಲನೆ ನೀಡಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಡಿಜಿಟಲ್ ವೋಟರ್ ಐಡಿ ಮಾನ್ಯವಾಗಲಿದೆ.
ಮತದಾರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದವರು, ಇನ್ನುಮುಂದೆ ತಮ್ಮ ಗುರುತಿನ ಚೀಟಿಯನ್ನು ಚುನಾವಣಾ ಆಯೋಗದ ವೆಬ್ಸೈಟ್ ಅಥವಾ ಅಪ್ಲಿಕೇಶನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಗುರುತಿನ ಚೀಟಿಯನ್ನು ಪಿಡಿಎಫ್ ಮಾದರಿಯಲ್ಲಿ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಂಡು ಬಳಸಬಹುದು. ಅಲ್ಲದೇ ಡಿಜಿ ಲಾಕರ್ನಲ್ಲಿ ಇತರೆ ಮೂಲ ದಾಖಲೆಗಳನ್ನು ಅಧಿಕೃತವಾಗಿ ಸೇವ್ ಮಾಡುವಂತೆ ಇದನ್ನು ಸೇವ್ ಮಾಡಿಕೊಳ್ಳಬಹುದು.
ವೋಟರ್ ಐಡಿ ಕಾರ್ಡ್ ಅನ್ನು ಆನ್ಲೈನ್, ಅಪ್ಲಿಕೇಶನ್ ಮೂಲಕ ಡೌನ್ಲೋಡ್ ಹೇಗೆ?
- ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ https://voterportal.eci.gov.in/ ಗೆ ಭೇಟಿ ನೀಡಿ. ಅಥವಾ https://nvsp.in/ ಗೆ ಭೇಟಿ ನೀಡಿ.
- ಓಪನ್ ಆದ ಪೇಜ್ನಲ್ಲಿ ಮೊದಲು ಒಂದು ಖಾತೆಯನ್ನು ತೆರೆಯಬೇಕು. ಖಾತೆ ತೆರೆಯಲು ಇ-ಮೇಲ್ ವಿಳಾಸ ಅಥವಾ ಮೊಬೈಲ್ ನಂಬರ್ ನೀಡಬೇಕು.
- ನಂತರ ಒಟಿಪಿ ಬರುತ್ತದೆ. ಇದನ್ನು ನೀಡಬೇಕು.
- ನಂತರದಲ್ಲಿ ಹೆಸರು, ಸರ್ ನೇಮ್, ಪಾಸ್ ವರ್ಡ್ ನೀಡಿ ಖಾತೆಯನ್ನು ತೆರೆಯಬೇಕು. ಯಶಸ್ವಿಯಾಗಿ ಖಾತೆ ತೆರೆದ ನಂತರ ಲಾಗಿನ್ ಆಗಿ.
- ಈ ಪೇಜ್ನಲ್ಲಿ ಅಭ್ಯರ್ಥಿಗಳು ವೋಟರ್ ಐಡಿ ಕರೆಕ್ಷನ್, ವೋಟರ್ ಐಡಿ ಡಿಲೀಟ್, ವೋಟರ್ ಐಡಿ ಡೌನ್ಲೋಡ್ ಮತ್ತೆ ಇತರೆ ಅಗತ್ಯ ಸೇವೆಗಳಿಗೆ ಆಯ್ಕೆ ಇರುತ್ತದೆ.
- ವೋಟರ್ ಐಡಿ ಡೌನ್ಲೋಡ್ ಮಾಡಲು ‘Download e-EPIC’ ಎಂಬಲ್ಲಿ ಕ್ಲಿಕ್ ಮಾಡಿ.
- ಮತ್ತೊಂದು ಪೇಜ್ ಓಪನ್ ಆಗುತ್ತದೆ. ಈ ಪೇಜ್ನಲ್ಲಿ “YES, I have Form Reference No’ ಎಂಬಲ್ಲಿ ಕ್ಲಿಕ್ ಮಾಡಿ.
- ನಂತರ ರಾಜ್ಯ ಆಯ್ಕೆ ಮಾಡಿ. ರೆಫರೆನ್ಸ್ ನಂಬರ್ ನೀಡಿ. ನಂತರ ನೀವು ಲಿಂಕ್ ಮಾಡಲಾದ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ.
- ನಂತರ ವೋಟರ್ ಐಡಿಯನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
- ಹಾಗೆಯೇ ವೋಟರ್ ಕಾರ್ಡ್ ಅನ್ನು ಇ-ಕೆವೈಸಿ ಮೂಲಕ ವೆರಿಫೈ ಮಾಡಿಕೊಳ್ಳಬಹುದು.
- ಡೌನ್ಲೋಡ್ ಮಾಡಲಾದ ಡಿಜಿಟಲ್ ವೋಟರ್ ಐಡಿಯನ್ನು ಡಿಜಿಲಾಕರ್ನಲ್ಲಿ ಸೇವ್ ಮಾಡಿಕೊಳ್ಳಬಹುದು.