ಕಂಪನಿಗಳಲ್ಲಿ ಸಂಬಂಳಕ್ಕಾಗಿ ದುಡಿಯುತ್ತಿರುವ ಉದ್ಯೋಗಿಗಳಲ್ಲಿ ಬಹುಸಂಖ್ಯಾತರಿಗೆ ಆದಾಯ ತೆರಿಗೆ ವಾಪಸಾತಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ತಿಳಿದಿಲ್ಲ. ಅಲ್ಲದೇ ಇದೊಂದು ಕಷ್ಟದ ಕೆಲಸ ಎಂದುಕೊಂಡು, ಆನ್ಲೈನ್ನಲ್ಲಿ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವವರಿಗೆ, ವಾಪಸಾತಿ ಹಣ ಎಷ್ಟು ಬರುತ್ತದೋ ಅದರಲ್ಲಿ ಶೇಕಡ ಇಂತಿಷ್ಟು ಎಂದು ನೀಡಿ ಫೈಲ್ ಮಾಡಿಸುತ್ತಾರೆ. ಈ ಸಮಸ್ಯೆ ತಪ್ಪಿಸಲು, ತಾವೇ ರಿಟರ್ನ್ಸ್ ಫೈಲ್ ಮಾಡಬೇಕು ಎಂದುಕೊಂಡವರಿಗಾಗಿ ಸುಲಭವಾಗಿ ಹೇಗೆ Income Tax Returns ಫೈಲ್ ಮಾಡುವುದು ಎಂದು ಈ ಕೆಳಗೆ ನೀಡಲಾಗಿದೆ.
ಈ ಕೆಳಗಿನ ಹಂತಗಳನ್ನು ಫೈಲ್ ಮಾಡಿ
– ಉಚಿತವಾಗಿ ಆದಾಯ ತೆರಿಗೆ ವಾಪಸಾತಿ ಪಡೆಯಲು ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧಿಕೃತ E-Filling ವೆಬ್ಸೈಟ್ ಗೆ ಭೇಟಿನೀಡಿ. ಇತರೆ ವೆಬ್ಸೈಟ್ಗಳ ಮೂಲಕವು ಆದಾಯ ತೆರಿಗೆ ವಾಪಸಾತಿಗೆ ಆನ್ಲೈನ್ ಫೈಲ್ ಮಾಡಿಸಬಹುದು. ಆದರೆ ಅದಕ್ಕೆ ಚಾರ್ಜ್ ಮಾಡಲಾಗುತ್ತದೆ.
– ನಂತರ ಆ ವೆಬ್ಸೈಟ್ನಲ್ಲಿ ಲಾಗಿನ್ ಹೆಸರು, ಪಾಸ್ವರ್ಡ್, ಜನ್ಮ ದಿನಾಂಕ, ಕಂಪನಿಗೆ ಸೇರಿದ ದಿನ ನೀಡಿ ಲಾಗಿನ್ ಆಗಬೇಕು.
-ಮೂರನೇ ಹಂತದಲ್ಲಿ ವೆಬ್ಸೈಟ್ ನಲ್ಲಿ ‘e-File’ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ, ನಿಮ್ಮ ಐಟಿಆರ್ ಅನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು.
– ನಿಗದಿತ ಇನ್ಕಮ್ ಟ್ಯಾಕ್ಸ್ ಫಾರ್ಮ್ 16 ಮತ್ತು ವರ್ಷವನ್ನು ಸರಿಯಾಗಿ ಆಯ್ಕೆ ಮಾಡಿ
– ಒಮ್ಮೆ ಫಾರ್ಮ್ ನಲ್ಲಿ ಕೇಳಿದ ಎಲ್ಲಾ ಮಾಹಿತಿಗಳನ್ನು ನೀಡಿದ ನಂತರ ಅದೇ ಪೇಜ್ ನಲ್ಲಿ ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ
– ನಿಮ್ಮ ಸಹಿ ಕೇಳಿದಲ್ಲಿ, ಡಿಜಿಟಲ್ ಸಹಿಯನ್ನು ಅಪ್ಲೋಡ್ ಮಾಡಬಹುದು. e-Filing ಗೆ ಡಿಜಿಟಲ್ ಸಹಿ ರಿಜಿಸ್ಟರ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
– ಅಂತಿಮವಾಗಿ Submit ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಪ್ರಯತ್ನ ಯಶಸ್ವಿಯಾದಲ್ಲಿ ITR-V ಪೇಜ್ ವೆಬ್ಸೈಟ್ನಲ್ಲಿ ಪ್ರದರ್ಶನವಾಗುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ. ಆ ಲಿಂಕ್ ಅನ್ನು ನೀವು ನೀಡಿದ ಇಮೇಲ್ ವಿಳಾಸಕ್ಕೆ ಬಂದಿರುತ್ತದೆ.
ಡೌನ್ಲೋಡ್ ಮಾಡಿಕೊಂಡ ಪತ್ರಕ್ಕೆ ನಿಮ್ಮ ಸಹಿ ಹಾಕಿ ಆದಾಯ ತೆರಿಗೆ ಇಲಾಖೆ ಅಧಿಕೃತ ವಿಳಾಸಕ್ಕೆ ಅಂಚೆ ಮೂಲಕ ಪೋಸ್ಟ್ ಮಾಡಿ. ನಂತರ ಆಗಾಗ ನಿಮ್ಮ ಇಮೇಲ್ ಅನ್ನು ಪರಿಶೀಲಿಸುತ್ತಿರಿ. ನಿಮ್ಮ ITR-V ಯಶಸ್ವಿಯಾಗಿ ಸ್ವೀಕರಿಸಲಾಗಿದೆಯೇ, ಇಲ್ಲವೋ ಎಂಬ ಮಾಹಿತಿಯನ್ನು ಇಮೇಲ್ ನಲ್ಲಿ ಕಳುಹಿಸಲಾಗಿರುತ್ತದೆ.