ರೈಲ್ವೆ ನೇಮಕಾತಿ ಮಂಡಳಿಯು(Railway Recruitment Board) ಎಎಲ್ಪಿ ಮತ್ತು ಟೆಕ್ನೀಷಿಯನ್ (ALP/Technician) ಹುದ್ದೆಗಳ ಮೊದಲ ಹಂತದ ಪರೀಕ್ಷೆ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಮರುಪಾವತಿ ಮಾಡಿದೆ. ಹಾಗೂ ಮರು ಪಾವತಿಬಗ್ಗೆ ಅಭ್ಯರ್ಥಿಗಳಿಗೆ ಸಂದೇಶವನ್ನು ಕಳುಹಿಸಲಾಗಿದೆ.
ಆದರೆ ಕೆಲವು ಅಭ್ಯರ್ಥಿಗಳಿಗೆ (ಮೊದಲ ಹಂತದ ಪರೀಕ್ಷೆಗೆ ಹಾಜರಾದವರಿಗೆ)ಮರುಪಾವತಿ ಹಣವು ಅವರ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ. ಅಲ್ಲದೇ ಸಂದೇಶವು ಸಹ ಈ ಬಗ್ಗೆ ಬಂದಿರುವುದಿಲ್ಲ. ಅಭ್ಯರ್ಥಿಗಳು ಹುದ್ದೆಗಾಗಿ ಅರ್ಜಿ ಸಲ್ಲಿಸುವ ವೇಳೆ ತಪ್ಪಾದ ಬ್ಯಾಂಕ್ ಖಾತೆ ನಂಬರ್, ತಪ್ಪಾದ ಐಎಫ್ಎಸ್ಸಿ ಕೋಡ್, ಬ್ರ್ಯಾಂಚ್ ಮತ್ತು ವಿಳಾಸವನ್ನು ನೀಡಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ರೈಲ್ವೆ ನೇಮಕಾತಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ ಗ್ರಾಹಕರ ಸಂಖ್ಯೆಯನ್ನು ತಪ್ಪಾಗಿ ನೀಡಿದ್ದು ಅಂತಹ ಅಭ್ಯರ್ಥಿಗಳಿಗೂ ಪರೀಕ್ಷಾ ಶುಲ್ಕ ಮರುಪಾವತಿ ಆಗಿಲ್ಲ ಎಂದು ತಿಳಿಸಿದೆ.
ಪರೀಕ್ಷಾ ಶುಲ್ಕ ಮರುಪಾವತಿ ಪಡೆಯುವುದು ಹೇಗೆ?
-ಪರೀಕ್ಷಾ ಶುಲ್ಕ ಮರುಪಾವತಿ ಪಡೆಯದವರು ಬೇಸರಗೊಳ್ಳುವ ಅಗತ್ಯವಿಲ್ಲ. ಕಾರಣ ರೈಲ್ವೆ ನೇಮಕಾತಿ ಮಂಡಳಿಯು ಹಣ ಹಿಂಪಡೆಯಲು ಮತ್ತೊಮ್ಮೆ ಅವಕಾಶ ನೀಡಿದ್ದು, ಮಂಡಳಿ ಸೂಚಿಸಿರುವ ಸರಳ ಮಾರ್ಗಗಳನ್ನು ಅನುಸರಿಸಬೇಕಷ್ಟೆ. ಅದು ಈ ಕೆಳಗಿನಂತಿದೆ.
– ರೈಲ್ವೆ ನೇಮಕಾತಿ ಮಂಡಳಿಯು ಬ್ಯಾಂಕ್ ವಿಳಾಸ ವಿವರ ತಪ್ಪಾಗಿ ನೀಡಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಮರುಪಾವತಿ ಪಡೆಯಲು ದಿನಾಂಕ 17-12-2018 ರಂದು ಎಸ್ಎಂಎಸ್ ಮೂಲಕ ಸೂಚನೆ ನೀಡಲಿದೆ.
– ಅಂದು ನೀಡಿದ ಸೂಚನೆಗೆ ಅನುಸಾರವಾಗಿ ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಖಾತೆ ನಂಬರ್ ಮತ್ತು ಇತರೆ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಸರಿಯಾಗಿ ನೀಡಲು ಅವಕಾಶ ನೀಡಲಾಗಿದೆ.
– ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ RRBs ನಲ್ಲಿ ಬ್ಯಾಂಕ್ ಖಾತೆ ವಿವರ ಸರಿಪಡಿಸಲು ಒಂದು ಲಿಂಕ್ ಅನ್ನು ನೀಡಲಿದೆ. ಅದರ ಸಹಾಯದಿಂದ ಅಭ್ಯರ್ಥಿಗಳು ಮತ್ತೊಮ್ಮೆ ಬ್ಯಾಂಕ್ ಖಾತೆ ವಿವರ ನೀಡಬಹುದು.
– ಈ ರೀತಿ ಬ್ಯಾಂಕ್ ಸಂಬಂಧಿಸಿದ ಮಾಹಿತಿ ನೀಡಲು ರೈಲ್ವೆ ನೇಮಕಾತಿ ಮಂಡಳಿಯು ಅಭ್ಯರ್ಥಿಗಳಿಗೆ 8 ದಿನಗಳ ಕಾಲಾವಕಾಶ ನೀಡಲಿದೆ. ದಿನಾಂಕ 18-12-2018 ರಿಂದ 25-12-2018 ರವರೆಗೆ ಮಾತ್ರ ಈ ಲಿಂಕ್ ವೆಬ್ಸೈಟ್ನಲ್ಲಿ ಲಭ್ಯ.
ಸೂಚನೆ: ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ರೈಲ್ವೆ ನೇಮಕಾತಿ ಮಂಡಳಿಯು ಅಭ್ಯರ್ಥಿಗಳಲ್ಲಿ ಕೋರಿದ್ದು, ಸರಿಯಾದ ಬ್ಯಾಂಕ್ ಖಾತೆ ನಂಬರ್ ಮತ್ತು IFSC ಕೋಡ್ ಅನ್ನು ನೀಡಲು ತಿಳಿಸಿದೆ.
Railway Recruitment Boards have initiated refund of examination Fee to candidates. Candidates who Failed to get refund of fees can follow these instructions.