ಸೌಂದರ್ಯ ಎಂದರೆ ಕೇವಲ ಮುಖದ ಸೌಂದರ್ಯವಲ್ಲ, ದೇಹದ ಎಲ್ಲಾ ಅಂಗಾಂಗಗಳು ಸ್ವಚ್ಛ, ಸುಂದರವಾಗಿದ್ದರೆ ಮಾತ್ರ ಸೌಂದರ್ಯಕ್ಕೊಂದು ಅರ್ಥ.
ಇಂದು ಹೆಚ್ಚಿನ ಸ್ತ್ರೀಯರು ತಮ್ಮ ಮುಖದ ಆರೈಕೆಗೆ ಕೊಡುವ ಗಮನವನ್ನು ಕೈ ಕಾಲುಗಳ ಅಂದವನ್ನು ಹೆಚ್ಚಿಸಲು ಕೊಡುವುದಿಲ್ಲ. ಬಹುತೇಕ ಮಂದಿ ತಮ್ಮ ಮುಖದ ಸೌಂದರ್ಯಕ್ಕೆ ಮಹತ್ವ ಕೊಡುತ್ತಾರೆಯೋ ಹೊರತು, ಕೈ, ಕಾಲು, ಪಾದ… ಹೀಗೆ ಯಾವುದರ ಸೌಂದರ್ಯಕ್ಕೂ ಅಷ್ಟಾಗಿ ಮಹತ್ವ ಕೊಡುವುದಿಲ್ಲ.
ಆದರೆ, ನಿಜವಾಗಿಯೂ ನಿಮ್ಮ ಸೌಂದರ್ಯ ಅಡಗಿರುವುದು ಕೈ ಕಾಲುಗಳಲ್ಲಿ. ನೀವು ಆಕರ್ಷಕವಾಗಿ ಕಾಣಬೇಕು ಅಂದ್ರೆ ನಿಮ್ಮ ಕೈ ಕಾಲುಗಳು ಮತ್ತು ಬೆರಳುಗಳು ಕೂಡ ಸುಂದರವಾಗಿರಬೇಕು. ಬನ್ನಿ ಹಾಗಿದ್ದರೆ ಇಂದು ಕನ್ನಡ ಅಡ್ವೈಜರ್ ಕೈಕಾಲುಗಳ ಆರೈಕೆಯ ಬಗ್ಗೆ ತಿಳಿಸಿಕೊಡುತ್ತದೆ.
ಸ್ನಾನದ ನಂತರ ಕೈಕಾಲುಗಳಿಗೆ ಸ್ವಲ್ಪ ಮಾಶ್ಚುರಾಯೀಸ್ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಕೈ-ಕಾಲುಗಳ ತ್ವಚೆಯನ್ನು ಕಾಪಾಡಿಕೊಳ್ಳಬಹುದು.
ನಿಂಬೆರಸಕ್ಕೆ ಸೌತೆಕಾಯಿ ಜ್ಯೂಸ್ ಸೇರಿಸಿ ಕೈ-ಕಾಲುಗಳಿಗೆ ಹಚ್ಚಿದರೆ ಒಳ್ಳೆಯದು
ಇನ್ನು ಸನ್ ಬರ್ನ್ನಿಂದ ತಪ್ಪಿಸಿಕೊಳ್ಳಲು ಬಾದಾಮಿ ಎಣ್ಣೆ ಮತ್ತು ಆಲೋವೆರಾವನ್ನು ಮಿಕ್ಸ್ ಮಾಡಿ ಕೈಕಾಲುಗಳಿಗೆ ಸವರಿದರೆ ಮಾಯವಾಗುತ್ತದೆ.
ನಿಂಬೆ ಹಣ್ಣಿನ ಸಿಪ್ಪೆಯನ್ನು ಕೈ ಮತ್ತು ಕಾಲುಗಳಿಗೆ ಉಜ್ಜಿ .
-1 ಚಮಚ ರೋಸ್ ವಾಟರ್ ಗೆ 4 ಚಮಚ ಮೊಸರು ಸೇರಿಸಿ ಕೈ ಮತ್ತು ಕಾಲುಗಳಿಗೆ ಚೆನ್ನಾಗಿ ಮಸಾಜ್ ಮಾಡಿ.
-3 ಚಮಚ ಅಕ್ಕಿ ಹಿಟ್ಟು ,ಸ್ವಲ್ಪ ಅರಿಶಿನ, 2 ಹನಿ ನಿಂಬೆರಸ ಸೇರಿಸಿ ಕೈ ಕಾಲುಗಳಿಗೆ ಹಚ್ಚಿ.
-ಕೈ ಕಾಲುಗಳನ್ನು ಹಾಲಿನಿಂದ 10 ನಿಮಿಷ ಮಸಾಜ್ ಮಾಡಿ.
-ಹೆಚ್ಚು ಸಡಿಲ ಬಟ್ಟೆಗಳನ್ನೇ ಧರಿಸಿ.
-ನಿಮ್ಮ ಕೈ ತುಂಬ ಒಣ ಚರ್ಮವಾಗಿದ್ದರೆ ಸ್ವಲ್ಪ ಪೆಟ್ರೋಲಿಯಂ ಜೆಲ್ಲಿಯನ್ನು ಮಲಗುವ ಮುನ್ನ ಹಚ್ಚಿ.
Hands and feet are one of the most neglected part of body when it comes to beauty care. But only some of them are concentrate on their Hand and feet beautyness also. So for these people we are giving some simple home remedies tips to matain hands and feet fairness.