ವೆರೈಟಿ ವೆರೈಟಿ ದೋಸೆ ತಿನ್ನಲು ಬಹು ಸಂಖ್ಯಾತ ದೋಸೆ ಪ್ರಿಯರು ದೋಸೆ ಕಾರ್ನರ್ ಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಸಿಟಿಗಳಲ್ಲಿ ದೋಸೆ ಪ್ರಿಯರಿಗೆ ಅವರು ಹುಡುಕುವ ದೋಸೆ ಸಿಗಬಹುದು. ಆದರೆ ಹಳ್ಳಿಗಳಲ್ಲಿ ಅವರವರ ಮನೆಗಳಲ್ಲಿ ಅವರೇ ಮಾಡಿಕೊಳ್ಳಬೇಕು.
ಅಂದಹಾಗೆ ಹಾಗೆ ಮನೆಯಲ್ಲಿಯೇ ಹೆಚ್ಚು ಸಮಯ ವ್ಯಯಿಸದೇ ರುಚಿ ರುಚಿಯಾದ ಬೂದು ಕುಂಬಳಕಾಯಿ ದೋಸೆ ಮಾಡುವುದು ಹೇಗೆ ಎಂಬುದನ್ನು ಈ ಕೆಳಗೆ ತಿಳಿಸಿದ್ದೇವೆ.
ಬೂದು ಕುಂಬಳಕಾಯಿ ದೋಸೆ ಮಾಡಲು ಬೇಕಾದ ಪದಾರ್ಥಗಳು (Gray pumpkin dosa)
– 2 ಪಾವು ಅಕ್ಕಿ
– 4 ಬಟ್ಟಲು ಬೂದು ಕುಂಬಳಕಾಯಿ ತಿರುಳು
– 5 ಚಮಚ ಕಾಯಿತುರಿ
– ರುಚಿಗೆ ತಕ್ಕಷ್ಟು ಉಪ್ಪು
ಬೂದು ಕುಂಬಳಕಾಯಿ ದೋಸೆ ಮಾಡುವ ವಿಧಾನ (Gray pumpkin dosa)
ರಾತ್ರಿ ವೇಳೆ ಅಕ್ಕಿಯನ್ನು ನೀರಲ್ಲಿ ನೆನೆ ಹಾಕಿ. ಬೆಳಗ್ಗೆ ಎದ್ದು ಅಕ್ಕಿಯನ್ನು ಚೆನ್ನಾಗಿ ತೊಳೆದು ಮಿಕ್ಸಿಗೆ ಹಾಕಿ ಅದರ ಜೊತೆಗೆ 4 ಬಟ್ಟಲು ಬೀಜ ತೆಗೆದ ಬೂದು ಕುಂಬಳಕಾಯಿ ತಿರುಳನ್ನು ಹಾಕಿಕೊಳ್ಳಿ. ಜೊತೆಗೆ ಕಾಯಿ ತುರಿ ಹಾಕಿಕೊಂಡು ಚೆನ್ನಾಗಿ ನುಣ್ಣಗಾಗುವಂತೆ ರುಬ್ಬಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ದೋಸೆ ಹಿಟ್ಟು ಹೆಚ್ಚು ತಳ್ಳಗಾಗದಂತೆ ನೋಡಿಕೊಳ್ಳಿ.
ಈಗ ನೀವು ಬೂದು ಕುಂಬಳಕಾಯಿ ದೋಸೆಯನ್ನು ಉದ್ದಿನ ದೋಸೆಯಂತೆಯೇ ಮಾಡಿ. ಹಿಟ್ಟನ್ನು ರುಬ್ಬಿದ ತಕ್ಷಣವೇ ಮಾಡುವುದರಿಂದ ದೋಸೆಯೂ ಹುಳಿ ಬರುವುದಿಲ್ಲ.
ಬೂದು ಕುಂಬಳಕಾಯಿ ದೋಸೆಯನ್ನು ನಿಮಗೆ ಇಷ್ಟವಾದ ಚಟ್ನಿ ಅಥವಾ ಪಲ್ಯದೊಂದಿಗೆ ಸೇವಿಸಬಹುದು.
We use pumkins in variety of dishes. This is a very tastie and nice dosa. use these simple way to prepare Gray Pumpkin Dosa.