ಪೈಲ್ಸ್(Piles) ಇತ್ತೀಚಿನ ದಿನಗಳಲ್ಲಿ ಜನತೆಗೆ ಕಾಡುವ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಈ ಆರೋಗ್ಯ ತೊಂದರೆಯಿಂದ ಬಚಾವಾಗಲು ಹಲವರು ಆಪರೇಷನ್ ಮೊರೆ ಹೋಗುತ್ತಾರೆ. ಇನ್ನೂ ಕೆಲವರು ಇಂಗ್ಲೀಷ್ ಮೆಡಿಷನ್ಗಳನ್ನು, ಇತ್ತೀಚೆಗೆ ಆಯುರ್ವೇದಿಕ್ ಔಷಧಗಳನ್ನು ತೆಗೆದುಕೊಂಡು ಯಾವುದೇ ಆಪರೇಷನ್ ಮಾಡಿಸದೆಯೂ ಸಹ ಪೈಲ್ಸ್ ನಿಂದ ಮುಕ್ತಿ ಪಡೆದಿದ್ದಾರೆ.
ಗರ್ಭಿಣಿ ಸ್ತ್ರೀಯರು ಕೂಡ ಮೂಲವ್ಯಾದಿ ಸಮಸ್ಯೆಗೆ ಸಾಮಾನ್ಯವಾಗಿ ಹೆಚ್ಚು ಗುರಿಯಾಗುತ್ತಿದ್ದು, ಇಂತಹ ಸಮಸ್ಯೆಗೆ ಒಳಗಾದವರು ನೆನಪಿಡಬೇಕಾದ ಬಹುಮುಖ್ಯ ಅಂಶವೆಂದರೆ ನಮ್ಮ ಆಹಾರ ಪದ್ಧತಿಯಿಂದಲೂ ಮನೆಯಲ್ಲೇ ಪೈಲ್ಸ್(Piles) ಸಮಸ್ಯೆಯಿಂದ ಪಾರಾಗಬಹುದು.
ಪೈಲ್ಸ್ (ಮೂಲವ್ಯಾದಿ) ಲಕ್ಷಣಗಳು
– ಗುದದ್ವಾರ ಊದಿಕೊಳ್ಳುವುದು
– ಗುದದ್ವಾರದಲ್ಲಿ ತುರಿಕೆ ಉಂಟಾಗುವುದು ಮತ್ತು ಟಾಯ್ಲೆಟ್ ಕ್ರಿಯೆ ಸಂದರ್ಭದಲ್ಲಿ ನೋವು ಉಂಟಾಗುವುದು.
– ಗುದದ್ವಾರದಲ್ಲಿ ರಕ್ತ ಬರುವುದು
– ಪೈಲ್ಸ್(Piles) ಇರುವವರು ಬಹುಬೇಗ ಗುಣಪಡಿಸಿಕೊಳ್ಳದಿದ್ದಲ್ಲಿ ರಕ್ತಶ್ರಾವ ದಿನದಿಂದ ದಿನಕ್ಕೆ ಹೆಚ್ಚಾಗಿ ದೇಹ ವೀಕ್ ಆಗುತ್ತದೆ. ದೇಹದಲ್ಲಿ ರಕ್ತ ಕಡಿಮೆ ಆದಾಗ ಇತರೆ ರೋಗಗಳಿಗೆ ಗುರಿಯಾಗುವ ಸಾಧ್ಯತೆಯೂ ಹೆಚ್ಚು.
ಆಯುರ್ವೇದ ಪರಿಣಿತರ ಪ್ರಕಾರವು ಪೈಲ್ಸ್ ಸಮಸ್ಯೆ ಸಾಮಾನ್ಯವಾಗಿ ಉದ್ಯೋಗದಲ್ಲಿರುವ ಬಹುಸಂಖ್ಯಾತರು ಹೆಚ್ಚು ಸಮಯ ಕೂರುವುದರಿಂದ, ವ್ಯಾಯಾಮ ಮಾಡದೇ ಇರುವುದರಿಂದ, ಅಗತ್ಯವಾದ ನೀರನ್ನು ಕುಡಿಯದೇ ಇರುವುದರಿಂದ ಮೂಲವ್ಯಾದಿ ಸಮಸ್ಯೆ ಇಂತಹವರಿಗೆ ಸಾಮಾನ್ಯವಾಗಿ ಉಂಟಾಗುತ್ತದೆ ಎನ್ನುತ್ತಾರೆ.
ಪೈಲ್ಸ್ ಸಮಸ್ಯೆಯನ್ನು ಗುಣಪಡಿಸಿಕೊಳ್ಳುವುದು ಬಹುದೊಡ್ಡ ಕಾರ್ಯವೇನಲ್ಲ. ಹಾಗೆ ಹೆಚ್ಚು ಹಣವು ವೆಚ್ಚ ಆಗುವುದಿಲ್ಲ. ಇಂದಿನ ಲೇಖನದಲ್ಲಿ ನಾವು ತಿಳಿಸುವ ಕೆಲವು ಮನೆಯಲ್ಲೇ ಮಾಡಬಹುದಾದ ಪರಿಹಾರೋಪಾಯಗಳನ್ನು ಪಾಲಿಸಿ, ನಂತರ ರಿಸಲ್ಟ್ ನೋಡಿರಿ..
ಈ ಸರಳ ಪರಿಹಾರಗಳನ್ನು ಮಿಸ್ ಮಾಡದೇ ಫಾಲೋ ಮಾಡಿ
1 ಹೆಚ್ಚು ನೀರು ಕುಡಿಯರಿ
ಈಗಾಗಲೇ ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿರುವವರು, ಅದರ ನೋವಿನಿಂದ ಪಾರಾಗಲು ಹೆಚ್ಚು ನೀರು ಸೇವಿಸುವುದನ್ನು ಆರಂಭಿಸಿ. ಜೀರ್ಣಕ್ರಿಯೆ ಹೆಚ್ಚುವುದರಿಂದ ಅರ್ಧದಷ್ಟು ಪೈಲ್ಸ್ ಸಮಸ್ಯೆಯಿಂದ ಮುಕ್ತಿ ಪಡೆದಹಾಗೆ. ಉತ್ತಮ ಪ್ರಮಾಣದ ನೀರು ಸೇವಿಸುವುದರಿಂದ ಮಲಬದ್ಧತೆ ಕ್ರಿಯೆಯಲ್ಲಿನ ನೋವಿನಿಂದ ಪಾರಾಗಬಹುದು.
2 ಸೌತೆಕಾಯಿ ಮತ್ತು ಕ್ಯಾರೆಟ್ ಬಳಸಿ
ಪೈಲ್ಸ್ ಇರುವವರು ಅಗತ್ಯವಾಗಿ ದಿನನಿತ್ಯ ಆಹಾರ ಸೇವಿಸಿದ ನಂತರ ಸೌತೆಕಾಯಿ ತಿನ್ನುವುದನ್ನು ರೂಢಿಸಿಕೊಳ್ಳಿ. ಕ್ಯಾರೆಟ್ ಆಂಟಿ ಆಕ್ಸಿಡೆಂಟ್ ಅಂಶವನ್ನು ಹೊಂದಿದ್ದು ಊರಿಯೂತ ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ನರಗಳ ಆರೋಗ್ಯವನ್ನು ಹೆಚ್ಚಿಸುವ ವಿಟಮಿನ್ ಸಿ ಮತ್ತು ಕೆ ಗಳನ್ನು ಹೊಂದಿದ್ದು ಪೈಲ್ಸ್ ಗುಣಪಡಿಸುವ ಎಲ್ಲಾ ಸಾಧ್ಯತೆಗಳು ಕ್ಯಾರೆಟ್ ನಲ್ಲಿವೆ.
ಕ್ಯಾರೆಟ್ ಬಗೆಗಿನ ಈ 10 ಅನುಕೂಲಗಳ ಬಗ್ಗೆ ಭಾಗಶಃ ಊಹಿಸಿರಲು ಸಾಧ್ಯವೇ ಇಲ್ಲ!
3 ಸಾಂಭಾರ ಪದಾರ್ಥಗಳು
ಭಾರತದ ಹೆಸರುವಾಸಿ ಸಾಂಭಾರು ಪದಾರ್ಥಗಳು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರ ನೋಡಿದರೆ ಎಲ್ಲರಿಗೂ ತಿಳಿಯುತ್ತದೆ. ದಿನನಿತ್ಯ ಆಹಾರದಲ್ಲಿ ತರಕಾರಿಗಳ ಜೊತೆ ಅಥವಾ ನೀರಿನ ಜೊತೆಯಲ್ಲಾದರೂ ಪರವಾಗಿಲ್ಲ ಈ ಸಾಂಭಾರು ಪದಾರ್ಥಗಳನ್ನು ಸೇವಿಸಿ. ಕಾರಣ ಈ ಎಲ್ಲಾ ತರಹದ ಸ್ಪೈಸಿ ಆಹಾರಗಳಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಪ್ರೋಟೀನ್, ವಿಟಮಿನ್ಗಳು ಇದ್ದು ಮೂಲವ್ಯಾದಿಯನ್ನು ಹೋಗಲಾಡಿಸುವ ಮತ್ತು ನೋವನ್ನು ಕಡಿಮೆ ಮಾಡುವ ಗುಣಗಳಿವೆ.
4 ಅತಿಯಾದ ರಾತ್ರಿ ಊಟಕ್ಕೆ ಬಾಯ್ ಹೇಳಿ
ರಾತ್ರಿ ಸಮಯದಲ್ಲಿ ಹೆಚ್ಚು ಆಹಾರ ತಿನ್ನದಿರಿ. ಅತ್ಯಧಿಕ ಫೈಬರ್ ಅಂಶ ಇರುವ ಮತ್ತು ಹೆಚ್ಚು ಫ್ರೈ ಮಾಡಿದ ಆಹಾರಗಳನ್ನು ಈಗಾಗಲೇ ಪೈಲ್ಸ್ ಇರುವವರಂತು ತಿನ್ನಲೇಬಾರದು. ಈ ಆಹಾರ ಪದ್ಧತಿಯಿಂದ ಗುದದ್ವಾರ ನರಗಳು ಸಮಸ್ಯೆಗೆ ಗುರಿಯಾಗಿ ಗಾಯಗಳು ಆಗುವ ಸಂಭವ ಉಂಟು. ಅಲ್ಲದೇ ಜೀರ್ಣಕ್ರಿಯೆ ಕುಂಡಿತಗೊಳ್ಳುತ್ತದೆ.
5 ಹರಳೆಣ್ಣೆ ಬಳಸಿ
ಹರಳೆಣ್ಣೆಯೂ ಆಂಟಿ ಆಕ್ಸಿಡೆಂಟ್, ಶಿಲೀಂದ್ರ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ವಿರೋಧಿ ಗುಣಗಳನ್ನು ಹೊಂದಿದೆ. ಆದ್ದರಿಂದ ಹರಳೆಣ್ಣೆಯೂ ಪ್ರತಿಯೊಬ್ಬರ ಪೈಲ್ಸ್ ಸಮಸ್ಯೆಯನ್ನು ಕಡಿಮೆ ಮಾಡಿ, ಮೂಲವ್ಯಾದಿಯ ನೋವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಆಹಾರದಲ್ಲಿ ಹರಳೆಣ್ಣೆಯನ್ನು ಬಳಸಿ.
6 ಬಿಸಿ ನೀರಿನ ಜೊತೆ Tripala Powder ಬಳಸಿ
ಈಗಾಗಲೇ ಪೈಲ್ಸ್ ಸಮಸ್ಯೆ ಇರುವವರು ಮಲಬದ್ಧತೆ ಪ್ರಕ್ರಿಯೆಯ ನೋವಿನಿಂದ ಬಳಸುತ್ತಿದ್ದಲ್ಲಿ, ದಿನನಿತ್ಯ ಸ್ವಲ್ಪ ಮಟ್ಟದ ಬಿಸಿನೀರಿಗೆ ನಾಲ್ಕು ಚಮಚ Tripala Powder ಮಿಶ್ರಣ ಮಾಡಿ 15 ನಿಮಿಷ ಕುಳಿತುಕೊಳ್ಳಿ. ಈ ಚಟುವಟಿಕೆ ಮ್ಯಾಜಿಕ್ ಮಾಡಲಿದ್ದು, ಪೈಲ್ಸ್ ಬೆಳವಣಿಗೆಯನ್ನು ತಪ್ಪಿಸುತ್ತದೆ.
ಪೈಲ್ಸ್ ನಿಂದ ಪಾರಾಗಲು ಈ ಮೇಲಿನ ಟಿಪ್ಸ್ಗಳನ್ನು ಪರಿಗಣಿಸಿ. ಪೈಲ್ಸ್ ಉಂಟಾಗಲು ಪ್ರಮುಖ ಕಾರಣಗಳು ಏನು? ಎಂಬುದನ್ನು ಕನ್ನಡ ಅಡ್ವೈಜರ್ ಶೀಘ್ರದಲ್ಲೇ ಲೇಖನವನ್ನು ಪ್ರಕಟಿಸಲಿದೆ.
How to reduce piles or Hemorrhoids? if your question is please follow these top home remedies to cure and reduce piles at home.