ಇತ್ತೀಚಿನ ದಿನಗಳಲ್ಲಿ ಬಹುಸಂಖ್ಯಾತ ಆನ್ಲೈನ್ ಬ್ಯುಸಿನೆಸ್, ಹೊಸ ಹೊಸ ಉದ್ಯಮ ಆರಂಭ ಮಾಡಿರುವ ನವ ಉದ್ಯಮಿಗಳು ತಮ್ಮ ಉದ್ಯಮಕ್ಕೆ ಸಂಬಂಧಪಟ್ಟಂತೆ ಫೇಸ್ಬುಕ್ ಫ್ಯಾನ್ ಪೇಜ್ ಅನ್ನು ಕ್ರಿಯೇಟ್ ಮಾಡಿರುತ್ತಾರೆ.
ತಮ್ಮ ಉದ್ಯಮದ ಫ್ಯಾನ್ ಪೇಜ್ಗೆ ನವ ಉದ್ಯಮಿಗಳು ಮೊದಲಿಗೆ ತಮ್ಮ ಫೇಸ್ಬುಕ್ ಸ್ನೇಹಿತರಿಗೆ ಪೇಜ್ ಲೈಕ್ ಮಾಡಲು ಆಹ್ವಾನ ನೀಡುವುದು ಪ್ರಾಥಮಿಕ ಕೆಲಸ. ಒಂದು ವೇಳೆ ಸ್ನೇಹಿತರಲ್ಲಿಯೇ ಮೊದಲು ಪೇಜ್ ಲೈಕ್ ಮಾಡಿ ನಂತರ ಅನ್ಲೈಕ್ ಮಾಡಿದರೆ.. ಯಾರು ಫೇಸ್ಬುಕ್ ಪೇಜ್ ಅನ್ಲೈಕ್ ಮಾಡಿದ್ದಾರೆ? ಯಾವಾಗ? ಅನ್ಲೈಕ್ ಮಾಡಿದ್ದಾರೆ ಎಂದು ತಿಳಿಯುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ.
ಫೇಸ್ಬುಕ್ ಪೇಜ್ ಯಾರು? ಯಾವಾಗ? ಅನ್ಲೈಕ್ ಮಾಡಿದ್ದಾರೆ ಎಂದು ತಿಳಿಯಲು ಈ ಕೆಳಗಿನ ಸರಳ ಹಂತಗಳನ್ನು ಫಾಲೋ ಮಾಡಿ
– ನಿಮ್ಮ ಉದ್ಯಮದ ಪೇಸ್ಬುಕ್ ಫ್ಯಾನ್ ಪೇಜ್ ಅನ್ನು ಓಪನ್ ಮಾಡಿ
– ಓಪನ್ ಆದ ಪೇಜ್ನಲ್ಲಿ ಮೇಲ್ಭಾಗದಲ್ಲಿ Insights ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
– ನಂತರ ಎಡಭಾಗದಲ್ಲಿಯ ಆಯ್ಕೆಗಳ ಲಿಸ್ಟ್ ನಲ್ಲಿ Like ಆಪ್ಶನ್ ಮೇಲೆ ಕ್ಲಿಕ್ ಮಾಡಿ
– ನಂತರ ತೆರೆದುಕೊಂಡ ಪೇಜ್ ನಲ್ಲಿ ನೀವು ಯಾವ ದಿನಾಂಕದಿಂದ ಯಾವ ದಿನಾಂಕದ ವರೆಗೆ ಪೇಜ್ ಅನ್ಲೈನ್ ಆಗಿರುವುದನ್ನು ನೋಡಬೇಕು ಎಂದುಕೊಂಡಿದ್ದೀರೋ ಸೆಲೆಕ್ಟ್ ಮಾಡಿ.
– ನಂತರ ಸ್ಕ್ರಾಲ್ ಡೌನ್ ಮಾಡಿ Net Likes ಸೇರಿದಂತೆ ಹಲವು ರೀತಿಯ ಆಯ್ಕೆಗಳು ನಿಮಗೆ ಲಭ್ಯವಾಗುತ್ತವೆ.
– ಬಲಭಾಗದಲ್ಲಿ Unlike ಆಯ್ಕೆಯ ಮೇಲೆ ಕ್ಲಿಕ್ ಮಾಡಿ
To see how many people unliked your Page during a specific date range follow this simple steps.