ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವವರು ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ಬಳಸುವಂತಿಲ್ಲ. ವಿಶೇಷವಾಗಿ ವಿಮಾನ ಟೇಕ್ ಆಫ್ ಆಗುವ ಮತ್ತು ಲ್ಯಾಂಡ್ ಆಗುವ ವೇಳೆಯಲ್ಲಿ ಕಡ್ಡಾಯವಾಗಿ ಬಳಸಲೇಬಾರದು ಎಂದು ಸೂಚನೆ ನೀಡಲಾಗುತ್ತದೆ. ಹಾಗಿದ್ರೆ ನಿಜವಾಗಿಯೂ ಪ್ರಯಾಣಿಕರು ವಿಮಾನದಲ್ಲಿ ಇಂಟರ್ನೆಟ್ ಬಳಸುವ ಹಾಗಿಲ್ಲವೇ?…
ವಿಮಾನದಲ್ಲಿ ವೈಫೈ ಅತಿ ಅಗ್ಗವಾಗಿಯೂ ಹಾಗೂ ಫಾಸ್ಟ್ ಆಗಿಯೂ ವರ್ಕ್ ಆಗುತ್ತದೆ. ಹಾಗಿದ್ರೆ ಅದು ಹೇಗೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ಮಾಹಿತಿ ಕೆಎಎಸ್ ಮತ್ತು ಐಎಎಸ್ ಸ್ಪರ್ಧಿಗಳಿಗೂ ಅನುಕೂಲವಾಗಿದೆ.
ವಿಮಾನದಲ್ಲಿರುವವರಿಗೆ ಇಂಟರ್ನೆಟ್ ಸಿಗ್ನಲ್ ಭೂಮಿಯಿಂದ 35,000 ಅಡಿ ಇರುವಾಗ ಪ್ರಮುಖವಾಗಿ 2 ವಿಧಾನಗಳಲ್ಲಿ ಸಿಗ್ನಲ್ ಲಭ್ಯವಾಗುತ್ತದೆ.
1. ಭೂಮಿಯಲ್ಲಿನ ಮೊಬೈಲ್ ಬ್ರಾಡ್ ಬ್ಯಾಂಡ್ ಟವರ್ ಮೂಲಕ ಶೇ 100 ರಷ್ಟು ಆಂಟೆನಾ ಮೂಲಕ ಸಿಗುತ್ತದೆ.
2. ಇನ್ನೊಂದು ವಿಧಾನ ಉಪಗ್ರಹ ತಂತ್ರಜ್ಞಾನ(Satelite Technology) ಮೂಲಕ ಸಿಗ್ನಲ್ಗಳನ್ನು ಭೂಮಿಯಲ್ಲಿನ ಜಿಯೋ ಸ್ಟೇಷನ್ ಗೆ ಕಳುಹಿಸಿ ರೀಸೀವರ್ ಮತ್ತು ಟ್ರ್ಯಾನ್ಸ್ ಮೀಟರ್ ಮೂಲಕ ಸ್ವೀಕರಿಸಲಾಗುತ್ತದೆ.
ಇಂಟರ್ನೆಟ್ ಸಿಗ್ನಲ್ ವಿಮಾನದಲ್ಲಿ ಹೇಗೆಲ್ಲಾ ದೊರೆಯುತ್ತದೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ..
1. ಭೂಮಿ ಆಧಾರಿತ ಇಂಟರ್ನೆಟ್ ಸೇವೆ(Air to Ground transmission)
-ಇದರ ಸಿಗ್ನಲ್ ವೇಗ ತುಂಬಾ ಕಡಿಮೆ ಆಗಿದ್ದು ಕೇವಲ ಇಮೇಲ್, ಎಸ್ಎಮ್ಎಸ್ ಸ್ವೀಕರಿಸಲು ಮತ್ತು ಸೆಂಡ್ ಮಾಡಲು ಸಹಾಯಕಾರಿ. ಇದರ 4G ವೇಗವೂ 30-40mbps ಇರುತ್ತದೆ.
2. ಟ್ರಾನ್ಸ್ಮಿಟಿಂಗ್ ಆಂಟೆನಾ(Satellite basec ku-band service)
– ಮಿಲಿಟರಿ ಕ್ಷೇತ್ರದವರು ಈ ಒಂದು ಇಂಟರ್ನೆಟ್ ಸೇವೆ ಬಳಸುತ್ತಾರೆ. ಇದು ಮೊದಲ ವಿಧಾನಕ್ಕಿಂತ ವೇಗವಾಗಿದ್ದು, 50mbps ವೇಗದಲ್ಲಿ ಇಂಟರ್ನೆಟ್ ಸೇವೆ ಒದಗಿಸುತ್ತದೆ. ವಿಮಾನದಲ್ಲಿನ ಟ್ರಾನ್ಸ್ಮೀಟರ್ ಸ್ಯಾಟಲೈಟ್ಗೆ ಸಿಗ್ನಲ್ ಕಳುಹಿಸುತ್ತದೆ. ಸ್ಯಾಟಲೈಟ್ ಪ್ರತಿಕ್ರಿಯೆ ನಂತರ ವಿಮಾನದಲ್ಲಿನ ಆಂಟೆನಾ ಸಿಗ್ನಲ್ ಸ್ವೀಕರಿಸುತ್ತದೆ. ಅದನ್ನು ಡಿಕೋಡ್ ಮಾಡಿ ಪ್ರಯಾಣಿಕರ ಡಿವೈಸ್ಗಳಿಗೆ ವೈಫೈ ಮೂಲಕ ಇಂಟರ್ನೆಟ್ ಸೇವೆ ನೀಡಲಾಗುತ್ತದೆ. ಆದರೆ ವಿಮಾಣದಲ್ಲಿನ ಎಲ್ಲಾ ಪ್ರಯಾಣಿಕರು ಒಂದೇ ವೈಫೈ ಗೆ ಸಂಪರ್ಕ ಹೊಂದುವುದರಿಂದ ಇಂಟರ್ನೆಟ್ ವೇಗ ಕುಸಿಯುತ್ತದೆ. ಅಲ್ಲದೇ ಇದೇ ವೈಫೈ ಸಿಗ್ನಲ್ ಅನ್ನು ಇತರೆ ವಿಮಾನಗಳು ಪಡೆಯುತ್ತಿದ್ದಲ್ಲಿ ಇಂಟರ್ನೆಟ್ ವೇಗ ಹೆಚ್ಚಿನ ಮಟ್ಟದಲ್ಲಿ ಕುಗ್ಗುತ್ತದೆ.
3. ರಿಸೀವಿಂಗ್ ಮತ್ತು ಟ್ರಾನ್ಸ್ಮಿಟಿಂಗ್ ಆಂಟೆನಾ ಆನ್ ಪ್ಲೇನ್
-ಕೆಎ ಬ್ಯಾಂಡ್ ಕನೆಕ್ಟಿವಿಟಿಯು ವಿಮಾನದಲ್ಲಿ 70mbps ವೇಗ ಹೊಂದಿದೆ. ಆದರೆ ಈ ಬ್ಯಾಂಡ್ಗಳನ್ನು ಅಮೆರಿಕಾ ಮತ್ತು ಕೆನಡಾದ ಒಂದೊಂದೆ ವಿಮಾನಗಳಲ್ಲಿ ಬಳಸಲಾಗುತ್ತದೆ.
4. ಆನ್ ಬೋರ್ಡ್ ಸರ್ವ್ ಮತ್ತು ವೈಫೈ ರೂಟರ್
ವಿಮಾನದಲ್ಲಿ ಪ್ರಯಾಣಿಸುವ ವೇಳೆ ಎಲ್ಲಾ ರೀತಿಯ ಡಿಜಿಟಲ್ ಮಾಹಿತಿ ಪಡೆಯಬಹುದು. ಆದರೆ ಈ ವೇಳೆ ಪ್ರಯಾಣ ಎಂಜಾಯ್ ಮಾಡುವುದನ್ನು ಆಯ್ಕೆ ಮಾಡಿಕೊಳ್ಳುವುದೇ ಉತ್ತಮ.
Inflight Wi-Fi is getting faster and cheaper, and is an increasingly common offering on budget and flagship airlines alike. But how does in airplane WiFi actually work?..here is full details.