Home » ಪ್ರಧಾನ ಮಂತ್ರಿ ಮುದ್ರಾ ಲೋನ್ ಪಡೆಯಲು ಬೇಕಾದ ದಾಖಲೆಗಳು ಯಾವುವು? ಇಲ್ಲಿದೆ ಮಾಹಿತಿ..

ಪ್ರಧಾನ ಮಂತ್ರಿ ಮುದ್ರಾ ಲೋನ್ ಪಡೆಯಲು ಬೇಕಾದ ದಾಖಲೆಗಳು ಯಾವುವು? ಇಲ್ಲಿದೆ ಮಾಹಿತಿ..

by manager manager

ಮುದ್ರಾ ಲೋನ್ ಪಡೆಯಲು ಬಯಸುವವರು ಮುದ್ರಾ ಲೋನ್ ನೀಡಲಾಗುವ ತಮ್ಮ ಸ್ಥಳೀಯ ಹತ್ತಿರದ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು. ಅವರು ಅರ್ಹತೆಗೆ ತಕ್ಕಂತೆ ಮುದ್ರಾ ಲೋನ್ ನೀಡುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸುತ್ತಾರೆ.

ಅಂದಹಾಗೆ ಮುದ್ರಾ ಯೋಜನೆ ಅಡಿಯಲ್ಲಿ ಶಿಶು ಲೋನ್ ಪಡೆಯಲು ಯಾವುದೇ ರೀತಿಯ ಉನ್ನತ ಮೇಲಾಧಾರಗಳು ಅಗತ್ಯವಿಲ್ಲ. ಲೋನ್ ಪ್ರಕ್ರಿಯೆಯ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಶಿಶು ಲೋನ್ ಗೆ ತಿಂಗಳಿಗೆ ಶೇ.1 ಬಡ್ಡಿಯನ್ನು ವಿಧಿಸಲಾಗುತ್ತದೆ. ಈ ಲೋನ್ ಅನ್ನು ಗರಿಷ್ಠ ಐದು ವರ್ಷದ ಒಳಗೆ ಮರುಪಾವತಿ ಮಾಡಬಹುದು. ಮುದ್ರಾ ಲೋನ್ ಅನ್ನು ಮುದ್ರಾ(MUDRA) ಕಾರ್ಡ್ ಮೂಲಕವೇ ನೀಡಲಾಗುತ್ತದೆ.

ಮುದ್ರಾ ಲೋನ್ ಪಡೆಯಲು ಮುದ್ರಾ ಅಪ್ಲಿಕೇಶನ್ ಜೊತೆಗೆ ಈ ಕೆಳಗಿನ ಅಗತ್ಯ ದಾಖಲೆಗಳನ್ನು ನೀಡಬೇಕು..

– ಸೆಲ್ಫ್ ಅಟೆಸ್ಟ್ ಗುರುತಿನ ಕಾರ್ಡ್ ( ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್)

– ವಾಸಸ್ಥಳ ಗುರುತಿನ ಚೀಟಿ (ಇತ್ತೀಚಿನ ಟೆಲಿಫೋನ್ ಬಿಲ್, ವಿದ್ಯುತ್ ಬಿಲ್, ವೋಟರ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಸ್ಟೇಟ್‌ಮೆಂಟ್ ಅಥವಾ ಪಾಸ್‌ಪೋರ್ಟ್)

-ಲೋನ್ ಪಡೆಯಬೇಕಾದವರ ಇತ್ತೀಚಿನ ಎರಡು ಭಾವಚಿತ್ರಗಳು

– ಲೋನ್ ಯಾವುದಕ್ಕಾಗಿ ಎಂಬುದರ ಮತ್ತು ಅದರ ಬೆಲೆಯ ಕೊಟೇಶನ್

– ಉದ್ಯಮಕ್ಕಾಗಿ ದುಡಿಯುವವರ ಇತರೆ ಉದ್ಯೋಗಿಗಳ ವಿವರ, ಯಂತ್ರೋಪಕರಣಗಳ ಪಟ್ಟಿ, ಬೆಲೆ

– ಗುರುತಿನ ಆಧಾರ/ ಉದ್ಯಮದ ವಿಳಾಸ, ಸಂಬಂಧಿಸಿದ ಲೈಸನ್ಸ್, ರಿಜಿಸ್ಟ್ರೇಶನ್ ಸರ್ಟಿಫಿಕೇಟ್ಸ್/ ಮಾಲೀಕತ್ವಕ್ಕೆ ಸಂಬಂಧಪಟ್ಟ ಇತರೆ ದಾಖಲೆಗಳು(ಲಭ್ಯವಿದ್ದಲ್ಲಿ)

– SC/ST/OBC ಸರ್ಟಿಫಿಕೇಟ್‌ಗಳು ಅನ್ವಯವಾಗಿದ್ದಲ್ಲಿ ಅಗತ್ಯ

ಮುದ್ರಾ ಲೋನ್ ಯಾವ ಎಲ್ಲಾ ಕ್ಷೇತ್ರಗಳಿಗೆ ಲಭ್ಯ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯುವುದು ಹೇಗೆ?

You may also like

2 comments

Shivanand Kulakarani June 7, 2018 - 11:30 am

sar nanu driver nanagi car lona bekagitu

Narayanaswamy July 15, 2018 - 2:57 pm

ಎಂ ಕೊತ್ತೂರು ಎನ್ ಜಿ ಹುಲ್ಕೂರು post ಬಂಗಾರಪೇಟೆ ತಾಲೂಕು ಕೋಲಾರ್ ಡಿಸ್ಟ್ರಿಕ್ಟ್

Comments are closed.