ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರವರನ್ನು ತೆರೆ ಮೇಲೆ ನೋಡೋದೇ ಒಂದು ಆನಂದ, ಉಲ್ಲಾಸ, ಉತ್ಸಾಹ ಹೀಗೆ ಇನ್ನೂ ಹಲವು ಪದಗಳನ್ನು ಪಟ್ಟಿ ಮಾಡುತ್ತ ಹೋಗಬಹುದು.
ಪವರ್ ಸ್ಟಾರ್ ಸಿನಿಮಾ ಹೊರತು ಪಡಿಸಿದರೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ಕೇವಲ ಅವರೇ ನಿರೂಪಣೆ ಮಾಡುವ ‘ಕನ್ನಡದ ಕೋಟ್ಯಾಧಿಪತಿ’ ರಸಪ್ರಶ್ನೆ ಗೇಮ್ ಶೋನಲ್ಲಿ ಮಾತ್ರ. ಈಗ ಮತ್ತೇ ಕನ್ನಡದ ಕೋಟ್ಯಾಧಿಪತಿ ಸೀಸನ್ 4 ಆರಂಭಗೊಂಡಿದೆ. ಅದರ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ.
ಕನ್ನಡಿಗರಿಗೆ ಮಾತ್ರವಲ್ಲದೇ ಇತರ ಭಾಷಿಗರಿಗೂ ಕನ್ನಡದ ಕೋಟ್ಯಾಧಿಪತಿ ಹಾಟ್ ಸೀಟ್ ಮೇಲೆ ಕುಳಿತುಕೊಳ್ಳಬೇಕು ಎಂಬುದು ಬಹುಸಂಖ್ಯಾತರ ಕನಸು. ಆ ಕನಸನ್ನು ನನಸು ಮಾಡಿಕೊಳ್ಳಲು ಈಗ ಅವಕಾಶ ಒದಗಿಬಂದಿದೆ.
ಕನ್ನಡದ ಕೋಟ್ಯಾಧಿಪತಿ ಆಗಲು ಯಾರೆಲ್ಲಾ ಭಾಗವಹಿಸಬಹುದು?
ಕನ್ನಡದ ಕೋಟ್ಯಾಧಿಪತಿಯಲ್ಲಿ ಭಾಗವಹಿಸಲು ಯಾವುದೇ ವಿದ್ಯಾರ್ಹತೆ, ವಿಶೇಷ ಅರ್ಹತೆ ಎಂದು ನಿಗದಿಪಡಿಸಿಲ್ಲ. ಕನ್ನಡದ ಕೋಟ್ಯಾಧಿಪತಿಯಲ್ಲಿ ಭಾಗವಹಿಸಲು, ಆಯ್ಕೆ ಆಗಲು ಹಲವು ಕಡೆಗಳಲ್ಲಿ ಆಡಿಷನ್ ನಡೆಸಲಾಗಿದೆ. ಈ ಮಾರ್ಗವಲ್ಲದೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೋ ಪ್ರಸಾರವಾಗುವ ವೇಳೆ ನಿರೂಪಕರು ಕೆಲವೊಮ್ಮೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ಗೆಲ್ಲಬಹುದು, ಹಾಗೂ ಹಾಟ್ ಸೀಟ್ನಲ್ಲಿ ಕುಳಿತು ಭಾಗವಹಿಸಲು ಅವರು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದಲ್ಲಿ ಅವಕಾಶ ಕೊಟ್ಟರು ಕೊಡಬಹುದು.
ಆಡಿಷನ್ ನಂತರ ಮೊದಲ ಸುತ್ತಿಗೆ ಆಯ್ಕೆ ಆದವರನ್ನು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಸೆಟ್ನಲ್ಲಿ ಇರುವ ಡಿಜಿಟಲ್ ಪ್ಯಾಡ್ ಮುಂದೆ ಕುಳಿಸಲಾಗುತ್ತದೆ. ಅಲ್ಲಿಂದ ಹಾಟ್ ಸೀಟ್ಗೆ ಬರಲು, ಪ್ಯಾಡ್ ಮುಂದೆ ಕುಳಿತ ಎಲ್ಲರು ಪುನೀತ್ ರಾಜ್ಕುಮಾರ್ ರವರು ನೀಡುವ ಪ್ರಶ್ನೆಗೆ ಉತ್ತರಿಸಬೇಕು. ಪ್ಯಾಡ್ ಮುಂದೆ ಕುಳಿತವರಲ್ಲಿ ಯಾರು ಮೊದಲು ಪ್ರಶ್ನೆಗೆ ಉತ್ತರಿಸುತ್ತಾರೋ ಅವರು ಹಾಟ್ ಸೀಟ್ ನಲ್ಲಿ ಕೋಟ್ಯಾಧಿಪತಿ ಆಗುವ ಅವಕಾಶ ಪಡೆಯುತ್ತಾರೆ.
ಕಾರ್ಯಕ್ರಮ ಪ್ರಸಾರವಾಗುವ ಸಮಯ: ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8-00 ಗಂಟೆಗೆ
ಕನ್ನಡದ ಕೋಟ್ಯಾಧಿಪತಿ ಶೋ ನೋಡುತ್ತಲೇ ಬಹುಮಾನ ಗೆಲ್ಲುವುದು ಹೇಗೆ?
ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನೋಡುವವರು ಸಹ ಬಹುಮಾನ ಗೆಲ್ಲಲು ಅವಕಾಶವಿದೆ. ಈ ಬಹುಮಾನ ಗೆಲ್ಲಲು ಸ್ಮಾರ್ಟ್ಫೋನ್ ಇರುವವರು ಗೂಗಲ್ ಪ್ಲೇ ಸ್ಟೋರ್ನಲ್ಲಿ ‘Voot’ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಅದರಲ್ಲಿ ‘ಕನ್ನಡದ ಕೋಟ್ಯಾಧಿಪತಿ Play Along’ ಮೂಲಕ ಆಟವಾಡಿ. ಸೀಸನ್ ಕೊನೆಯಲ್ಲಿ ಕಾರು ಗೆಲ್ಲಬಹುದು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ‘Voot’ ಆಪ್ನಲ್ಲಿ ಯಾವಾಗ ಬೇಕಾದ್ರು, ಎಲ್ಲಿ ಬೇಕಾದ್ರು ನೋಡಬಹುದು.
ಕನ್ನಡದ ಕೋಟ್ಯಾಧಿಪತಿಯಲ್ಲಿ ಒಟ್ಟಾರೆ 15 ಪ್ರಶ್ನೆಗಳು ಇರುತ್ತವೆ. ಈ ಪ್ರಶ್ನೆಗಳು ಅಲ್ಲಿ ಬರುವವರ ಲೈಫ್ ಅನ್ನೇ ಬದಲಿಸಬಲ್ಲವು.
ಕನ್ನಡದ ಕೋಟ್ಯಾಧಿಪತಿಯ ಈ ಸೀಸನ್ 19 ಜೂನ್ 2019 ರಿಂದ ಪ್ರಾರಂಭವಾಗಿದೆ.
– ಕನ್ನಡದ ಕೋಟ್ಯಾಧಿಪತಿ 2019(KKP) ಕನ್ನಡ ಭಾಷೆಯಲ್ಲಿ ನಡೆಯುವ ರಸಪ್ರಶ್ನೆ ಆಧಾರಿತ ಗೇಮ್ ಶೋ.
– ಕೆಕೆಪಿ ‘ಕಲರ್ಸ್ ಕನ್ನಡ’ ಚಾನೆಲ್ ನಲ್ಲಿ ಪ್ರಸಾರವಾಗುತ್ತದೆ.
– ಕೆಕೆಪಿ ಕಾರ್ಯಕ್ರಮವನ್ನು ಸ್ಟುಡಿಯೋ ನೆಕ್ಟ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆ ಮಾಲೀಕತ್ವವನ್ನು ವೈಕಾಮ್18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಇದರ ಅಂಗಸಂಸ್ಥೆಗಳು ಹೊಂದಿವೆ.
ಕನ್ನಡದ ಕೋಟ್ಯಾಧಿಪತಿ 2019 ಅನ್ನು ಎಲ್ಲೆಲ್ಲಿ ನೋಡಬಹುದು?
– ಕಲರ್ಸ್ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ.
– My Jio ಸ್ಮಾರ್ಟ್ಪೋನ್ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿಯೂ ನೋಡಬಹುದು. (ಕಲರ್ಸ್ ಕನ್ನಡ ವಾಹಿನಿ ಆಯ್ಕೆ ಮಾಡಿ ಯಾವ ಸಮಯದಲ್ಲಿ ಎಲ್ಲಿ ಬೇಕಾದರೂ ನೋಡಬಹುದು)
– Voot ಆಪ್ ಕಲರ್ಸ್ ಕನ್ನಡ ವಾಹಿನಿಯ ಎಲ್ಲಾ ಕಾರ್ಯಕ್ರಮಗಳನ್ನು ನೋಡಲು ಇರುವ ಅಧಿಕೃತ ಆಪ್ ಆಗಿದೆ. ಡೌನ್ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ
– ಕನ್ನಡದ ಕೋಟ್ಯಾಧಿಪತಿ 2019 ಅನ್ನು ಆನ್ಲೈನ್ ನಲ್ಲಿ ನೋಡಲು ಕ್ಲಿಕ್ ಮಾಡಿ
– ಕನ್ನಡದ ಕೋಟ್ಯಾಧಿಪತಿ ರಸಪ್ರಶ್ನೆ ಗೇಮ್ ಶೋ ನಲ್ಲಿ ಭಾಗವಹಿಸಲು, ರಸಪ್ರಶ್ನೆ ವಿಧಾನ, ಹೆಲ್ಪ್ಲೈನ್ ವಿಧಾನಗಳು ಮತ್ತು ಇತರೆ ಹಲವು ಮಾಹಿತಿಗಾಗಿ – ಕ್ಲಿಕ್ ಮಾಡಿ
– ಕಲರ್ಸ್ ಕನ್ನಡ ಅಧಿಕೃತ ವೆಬ್ಸೈಟ್ಗಾಗಿ – ಕ್ಲಿಕ್ ಮಾಡಿ
Kannadada Kotyadhipati 2019 SMS Number