ಇಂದು ಭಾರತ ಕೃಷಿ ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಎರಡನೇ ಸ್ಥಾನದಲ್ಲಿದೆ. ಭಾರತದ ಕೃಷಿಯ ಇತಿಹಾಸ ಋಗ್ವೇದ ಕಾಲದಷ್ಟು ಹಳೆಯದು. ಶತಮಾನಗಳ ಹಿಂದಿನಿಂದಲೂ, ಶೇ 70 ಕ್ಕಿಂತ ಹೆಚ್ಚು ಜನರ ಮೂಲ ಕಸುಬು ಕೃಷಿಯಾಗಿದೆ. ಬಹುಪಾಲು ಜನರ ಜೀವನೋಪಾಯವಾಗಿ ಮುಂದುವರೆದಿರುವ ಕೃಷಿ ಕ್ಷೇತ್ರವು ನಮ್ಮ ಜನರ ಆಲೋಚನೆ, ಪರಿಕಲ್ಪನೆ, ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ಹೆಚ್ಹಿನ ಪರಿಣಾಮ ಬೀರಿದೆ.
ಕೃಷಿ ಇಲಾಖೆಯು (Department of Agriculture) ರೈತರಿಗೆ ಕೃಷಿ ಸೇವೆಗಳನ್ನು ಒದಗಿಸುವುದು ಮತ್ತು ಕೃಷಿಗೆ ಅಗತ್ಯ ತಾಂತ್ರಿಕ ಜ್ಞಾನವನ್ನು ತಿಳಿಯಪಡಿಸುವ ಕಾರ್ಯ ಮಾಡುತ್ತಿದೆ. ಹಾಗೆಯೇ ಹೆಚ್ಚಿನ ಇಳುವರಿಯ ಬೆಳೆಗಳ ಪರಿಚಯ, ರೈತರಿಗೆ ತರಬೇತಿ ನೀಡುವ ಮೂಲಕ ಕೃಷಿ ಚಟುವಟಿಕೆಯನ್ನು ಹೆಚ್ಚಿಸಲು ಕೌಶಲಗಳನ್ನು ಮತ್ತು ಜ್ಞಾನವನ್ನು ಸುಧಾರಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ.
ಕೃಷಿಯನ್ನು ಪ್ರೋತ್ಸಾಯಿಸುವ ಮೂಲಕ ಕೃಷಿ ಇಲಾಖೆಯು (Department of Agriculture) ಹಲವಾರು ಯೋಜನೆಗಳನ್ನು ಜಾರಿಗೆ ತಂದು ಕೃಷಿ ಅಭಿವೃದ್ದಿಗೆ ಸಹಕರಿಸುತ್ತಿದೆ. ಆದರೆ ಇಂದಿಗೂ ಸಹ ಕೃಷಿ ಇಲಾಖೆಯು ಕೈಗೊಂಡಿರುವ ಹಲವು ಯೋಜನೆಗಳ ಬಗ್ಗೆ ರೈತರಿಗೆ ಅಧಿಕೃತವಾದ ಸಂಪೂರ್ಣ ಮಾಹಿತಿ ತಿಳಿದಿಲ್ಲ. ಆದ್ದರಿಂದ ಇಂದು ಕನ್ನಡ ಅಡ್ವೈಜರ್ ಕೃಷಿ ಇಲಾಖೆ ಅಡಿಯಲ್ಲಿ ರೈತರಿಗಾಗಿ ಯಾವ ಎಲ್ಲಾ ಯೋಜನೆಗಳಿವೆ ಎಂಬುದರ ಸಂಪುರ್ಣ ಪಟ್ಟಿಯನ್ನು ಈ ಲೇಖನದಲ್ಲಿ ತಿಳಿಯಪಡಿಸುತ್ತಿದೆ. ಆ ಯೋಜನೆಗಳು ಈ ಕೆಳಗಿನಂತಿವೆ ನೋಡಿ..
ಕೃಷಿ ಇಲಾಖೆಯ ಪ್ರಮುಖ ಯೋಜನೆಗಳು:-
- ಮಣ್ಣಿನ ಸತ್ವ ಹೆಚ್ಚಿಸುವ ಕಾರ್ಯಕ್ರಮ
- ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ಪೂರೈಕೆ
- ಭೂಚೇತನ ಮತ್ತು ಭೂ ಸಮೃದ್ಧಿ ಯೋಜನೆ
- ಸಾವಯವ ಗೊಬ್ಬರಗಳ ಯೋಜನೆ
- ರಾಗಿ ಮತ್ತು ಜೋಳದದ ಧಾನ್ಯಗಳಲ್ಲಿ ಉತ್ಪಾಧನೆಯನ್ನು ಹೆಚ್ಚಿಸಲು ವಿಶೇಷ ಪ್ರೋತ್ಸಾಹ ಧನ ಯೋಜನೆ.
- ಸಸ್ಯ ಸಂರಕ್ಷಣಾ ಕಾರ್ಯಕ್ರಮಗಳು
- ಸಾವಯವ ಭಾಗ್ಯ ಯೋಜನೆ
- ಪರಂಪರಾಗತ ಕೃಷಿ ವಿಕಾಸ ಯೋಜನೆ
- ಕೃಷಿ ಭಾಗ್ಯ ಯೋಜನೆ
- ಬೆಳೆ ಸಾಲಕ್ಕೆ ಸಹಾಯಧನ
- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
- ಆತ್ಮಹತ್ಯೆಗೊಳಗಾದ ರೈತ ಕುಟುಂಬಗಳಿಗೆ ಪರಿಹಾರ ಧನ
- ಕೃಷಿ ಯಂತ್ರೋಪಕರಣಗಳ ಯೋಜನೆ
- ಲಘು ನೀರಾವರಿ ಯೋಜನೆ
- ಕೃಷಿ ಯಂತ್ರಧಾರೆ
- ಕೃಷಿ ಪಂಡಿತ ಪ್ರಶಸ್ತಿ ಮತ್ತು ಕೃಷಿ ಪ್ರಶಸ್ತಿ
- ಮಣ್ಣು ಆರೋಗ್ಯ ಅಭಿಯಾನ
- ರಾಷ್ಟೀಯ ಕೃಷಿ ವಿಕಾಸ ಯೋಜನೆ
- ಕೃಷಿ ಅಭಿಯಾನ
- ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ
- ರಾಷ್ಟೀಯ ಆಹಾರ ಭದ್ರತಾ ಅಭಿಯಾನ
- ಕೃಷಿ ತಂತ್ರಜ್ಙಾನ ನಿರ್ವ ಸಂಸ್ಥೆ (ATMA)
- ಕೃಷಿ ಉತ್ಪನ್ನಗಳ ಸಂಸ್ಕರಣ ಯೋಜನೆ
ಕೃಪೆ: ಕೃಷಿ ಇಲಾಖೆ
The Department of Agriculture has been created mainly to provide Agricultural Extension services to farmers and to transfer the latest technical knowledge to the farming community, introduction of high yielding varieties, laying demonstrations, imparting training to farmers to improve skills & knowledge to boost up the agricultural Production and productivity.