ಬೆಂಗಳೂರು: ಇಂಜಿನಿಯರ್, ಅಗ್ರಿಕಲ್ಚರ್ ಕೋರ್ಸ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಕರ್ನಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಸಿಇಟಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಲಿದೆ.
ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯುಕ್ತರು ಸುದ್ದಿಗೋಷ್ಠಿ ನಡೆಸಿ ರ್ಯಾಂಕ್ ವಿಜೇತರು, ಒಟ್ಟಾರೆ ಫಲಿತಾಂಶದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದ್ದು, ಇಲಾಖೆಯ ವೆಬ್ಸೈಟ್ನಲ್ಲಿ ಮಧ್ಯಾಹ್ನ 3 ಗಂಟೆ ಬಳಿಕ ಫಲಿತಾಂಶ ಪಡೆಯಬಹುದು
ಏ.18 ಮತ್ತು 20 ರಂದು ನಡೆದ ಸಿಇಟಿ ಪರೀಕ್ಷೆ ನಡೆದಿದ್ದು, 1,98,639 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಚುನಾವಣೆ ಹಿನ್ನಲೆ ಪರೀಕ್ಷೆ ಫಲಿತಾಂಶ ತಡವಾಗಿದ್ದು, ಇಂದು ಪ್ರಕಟವಾಗಲಿದೆ.
ಫಲಿತಾಂಶಕ್ಕಾಗಿ ಕೆಳಗಿನ ಲಿಂಕ್’ಗಳನ್ನು ಕ್ಲಿಕ್ಕಿಸಿ
Karnataka Examinations Authority (KEA) CET result to be declared today. KEA will announce the Common Entrance Test (CET) result 2018 at 1 pm today. Candidates can check their results on the official websites.