ಕರ್ನಾಟಕ ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 3453 ಸಹ ಶಿಕ್ಷಕರ ಭರ್ತಿಗಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ. ಈ ಅತಿಥಿ ಶಿಕ್ಷಕರ ನೇಮಕಾತಿ 2019-20 ಸಾಲಿಗಾಗಿ ನಡೆಯಲಿದೆ.
ಬೆಂಗಳೂರು ವಿಭಾಗದಲ್ಲಿ 589, ಮೈಸೂರು ವಿಭಾಗದಲ್ಲಿ 775, ಬೆಳಗಾವಿ ವಿಭಾಗದಲ್ಲಿ 1017 ಮತ್ತು ಕಲಬುರ್ಗಿ ವಿಭಾಗದಲ್ಲಿ 1072 ಹುದ್ದೆಗಳು ಸೇರಿದಂತೆ ಒಟ್ಟು 3453 ಅತಿಥಿ ಪ್ರೌಢಶಾಲಾ ಶಿಕ್ಷಕರನ್ನು ನೇಮಕಾತಿ ಮಾಡಲು ಪ್ರೌಢ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ.
ಆಯಾ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಿಗೆ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲ ಮಾತ್ರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗಿದ್ದು, ಅತಿಥಿ ಶಿಕ್ಷಕರು ತಾಲ್ಲೂಕುವಾರು ಸಂಖ್ಯೆ ಹಾಗೂ ಅನುದಾನದ ವಿವರಗಳೊಂದಿಗೆ ಅತಿಥಿ ಶಿಕ್ಷಕರ ಗೌರವ ಸಂಭಾವನೆ ಅನುದಾನ ಬಿಡುಗಡೆ ಮಾಡಲು ಮರು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲೆಗಳ ಡಿಡಿಪಿಐಗಳಿಗೆ ಸೂಚಿಸಲಾಗಿದೆ.
ಖಾಯಂ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಅಧಿಸೂಚಿಸಿದ, ಶಿಕ್ಷಕರು ನೇಮಕಗೊಂಡು ಕರ್ತವ್ಯಕ್ಕೆ ಹಾಜರಾದ ತಕ್ಷಣ ಅತಿಥಿ ಶಿಕ್ಷಕರ ಹುದ್ದೆಗಳನ್ನು ಸಾಮಾನ್ಯವಾಗಿ ರದ್ದಾಗಲಿವೆ ಎಂದು ಆದೇಶದಲ್ಲಿ ಸ್ವಷ್ಟಪಡಿಸಲಾಗಿದೆ.
3453 ಅತಿಥಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಪ್ರಕಟಣೆಯ ಪಿಡಿಎಫ್ಗಾಗಿ – ಕ್ಲಿಕ್ ಮಾಡಿ