ಕರ್ನಾಟಕ ರಾಜ್ಯದ 2023ನೇ ಸಾಲಿನ ವಿಧಾನಸಭೆ ಚುನಾವಣೆಯ ಅಧಿಕೃತ ವೇಳಾಪಟ್ಟಿ ಬಿಡುಗಡೆ ಆಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ 2023
ನೀತಿ ಸಂಹಿತೆ ಜಾರಿ ದಿನಾಂಕ : ಮಾರ್ಚ್ 17, 2023
ಚುನಾವಣೆ ಅಧಿಸೂಚನೆ ಪ್ರಕಟ ದಿನಾಂಕ : ಏಪ್ರಿಲ್ 17, 2023
ನಾಮಪತ್ರ ಸಲ್ಲಿಸಲು ಕೊನೆಯ ದಿನ : ಏಪ್ರಿಲ್ 24, 2023
ಕರ್ನಾಟಕ ವಿಧಾನಸಭೆ ಚುನಾವಣೆ ನಾಮಪತ್ರಗಳ ಪರಿಶೀಲನೆ : ಏಪ್ರಿಲ್ 25, 2023
ನಾಮಪತ್ರ ಹಿಂಪಡೆಯಲು ಕೊನೆಯ ದಿನ : ಏಪ್ರಿಲ್ 27, 2023
ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ದಿನ : ಮೇ 12, 2023
ಕರ್ನಾಟಕ ವಿಧಾನಸಭೆ ಚುನಾವಣೆ ಮತ ಏಣಿಕೆ: ಮೇ 15, 2023
ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಮುಖ್ಯ ಮಂತ್ರಿ ಆಕಾಂಕ್ಷಿಗಳು
ಬಸವರಾಜ ಬೊಮ್ಮಾಯಿ – ಬಿಜೆಪಿ ಪಕ್ಷ
ಸಿದ್ಧರಾಮಯ್ಯ – ಕಾಂಗ್ರೆಸ್ ಪಕ್ಷ
ಹೆಚ್ ಡಿ ಕುಮಾರಸ್ವಾಮಿ – ಜಾತ್ಯಾತೀತ ಜನತಾ ದಳ ಪಕ್ಷ
ಡಿ ಕೆ ಶಿವಕುಮಾರ್ – ಕಾಂಗ್ರೆಸ್ ಪಕ್ಷ
ಈ ಮೇಲಿನ ನಾಲ್ವರು ಮೂರು ಪಕ್ಷಗಳ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಗಳ ಜಿದ್ದಾಜಿದ್ದಿ ನಡುವೆ ಪ್ರಾದೇಶಿಕ ಪಕ್ಷದ ಹೆಚ್ಡಿ ಕುಮಾರಸ್ವಾಮಿ ಲಾಭವನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಇಂದಿನ ರಾಜಕಾರಣದಲ್ಲಿ ಪಕ್ಷಾಂತರ ಕಾಯಿಲೆಯಿಂದ ಯಾವ ಪಕ್ಷದ ಎಂಎಲ್ಎ ಯಾವ ಪಕ್ಷಕ್ಕೆ ಪಾಲಾಯನ ಮಾಡಿ ಕಾಮನ್ ಮ್ಯಾನ್ ಮತದಾರನನ್ನೂ ಕಡೆಗಣಿಸುವನೋ ತಿಳಿಯದಾಗಿದೆ.
ಕರ್ನಾಟಕ ವಿಧಾನ ಸಭೆ ಚುನಾವಣೆ 2023 ರ ಮೂಲಕ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ?
ಖಂಡಿತ ಜೆಡಿಎಸ್ ಬರಲ್ಲ. ಆದರೆ ಕಾಂಗ್ರೆಸ್ ಬರುತ್ತೋ, ಬಿಜೆಪಿ ಬರುತ್ತೋ ಹೇಳೋಕ್ಕೆ ಆಗಲ್ಲ.
ಒಂದು ಕಾಂಗ್ರೆಸ್ ಎಂಎಲ್ಎ ಸಂಖ್ಯೆಗಳು ಹೆಚ್ಚಾದಲ್ಲಿ ಈ ಪಕ್ಷದ ಮುಖ್ಯಮಂತ್ರಿ ಯಾರಾಗುವರು?
ಅಧಿಕಾರದ ದಾಹ ಈ ಪಕ್ಷದ ಎರಡು ನಾಯಕರಾದ ಸಿದ್ಧರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಇಬ್ಬರಿಗೂ ಇರುವುದರಿಂದ, ಇದರ ಲಾಭ ಬಿಜೆಪಿಗೋ ಅಥವಾ ಜೆಡಿಎಸ್ನ ಪಾಲಾಗೊವುದೋ ಎಂಬ ನಿರೀಕ್ಷೆ ಇದೆ.
ಕರ್ನಾಟಕ ವಿಧಾನಸಭೆಯಲ್ಲಿ ಯಾವುದೇ ಒಂದು ಪಕ್ಷ ಸರ್ಕಾರ ರಚಿಸಲು ಬೇಕಾದ ಎಂಎಲ್ಎಗಳ ಸಂಖ್ಯೆ ಎಷ್ಟು?
113 ಮ್ಯಾಜಿಕ್ ನಂಬರ್ ಆಗಿದೆ.
ಕರ್ನಾಟಕ ವಿಧಾನಸಭೆಯಲ್ಲಿ ಎಸ್ಸಿ ಎಂಎಲ್ಎ’ಗಳ ಸಂಖ್ಯೆ ಎಷ್ಟು?
224 ಕ್ಷೇತ್ರಗಳ ಪೈಕಿ 36 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ, 15 ಪರಿಶಿಷ್ಟ ಪಂಗಡಗಳಿಗೆ ಮೀಸಲಿವೆ.
ಬೆಂಗಳೂರಿನ ಅತಿ ಶ್ರೀಮಂತ ಎಂಎಲ್ಎ ಯಾರು?
2018 ರಲ್ಲಿ ಆಸ್ತಿ ಘೋಷಣೆ ಮಾಡಿದ ಪ್ರಕಾರ ರಾಜಕಾರಣಿ /ಎಂಎಲ್ಎ ಪ್ರಿಯಾ ಕೃಷ್ಣ ರವರು ಅತಿ ಶ್ರೀಮಂತ ಎಂಎಲ್ಎ ಎಂದೇಳಲಾಗಿದೆ. ಅವರು 1020 ಕೋಟಿ ಚರಾಸ್ತಿ /ಸ್ತಿರಾಸ್ತಿ ಘೋಷಣೆ ಮಾಡಿದ್ದರು. ಆದರೆ ಇವರಿಗೂ ಶ್ರೀಮಂತರಿದ್ದು ಗೊತ್ತಿಲ್ಲದ ಸಂಗತಿ ಇದ್ದರೂ ಇರಬಹುದು ಎಂದು ಪ್ರಜೆಗಳು ಮಾತನಾಡುತ್ತಾರೆ.
ಮೋದಿ ಹೆಸರಿನಿಂದ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುತ್ತದೆಯೇ?
ಖಂಡಿತ ಹಾಗಂತ ಹೇಳಲಾಗದು. ಈ ಬಾರಿಯ ಚುನಾವಣೆಯಲ್ಲಿ ಮೋದಿ ಹೆಸರಿನಿಂದ ಸರ್ಕಾರ ರಚನೆ ಸಾಧ್ಯವಿಲ್ಲ. ಆದರೆ ಹುಚ್ಚನ ಮದುವೇಲಿ ಉಂಡವನೇ ಜಾಣ ಎಂಬಂತೆ ಸರ್ಕಾರ ಯಾರ ಕೈ ಸೇರಬಹುದೋ ಏನೋ ಎನ್ನುತ್ತಾರೆ ಜನತೆ.
ಕರ್ನಾಟಕದ ಜನತೆ ದುಡ್ಡು ಕೊಟ್ಟ ರಾಜಕೀಯ ಪಕ್ಷಕ್ಕೆ ವೋಟು ಮಾಡುತ್ತದೆಯೇ?
ಈ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ ಸಾಧ್ಯ. ಆದರೆ ಜನತೆ ದುಡ್ಡು ಕೊಟ್ಟ ರಾಜಕೀಯ ಪಕ್ಷಕ್ಕೆಯೇ ವೋಟು ಹಾಕುವುದು ಎನ್ನುವುದು ಸುಳ್ಳು. ಕರ್ನಾಟಕದ ಪಜ್ಞಾವಂತ ಜನರು / ವಿದ್ಯಾವಂತ ಜನರು ತಮಗೆ ಇಷ್ಟವಾದ ರಾಜಕಾರಣಿಗಳಿಗೆಯೇ ವೋಟು ಹಾಕುವುದು. ಕೆಲಸ ಮಾಡುವ ರಾಜಕಾರಣಿಗೆ ವೋಟು ಹಾಕುವುದು. ಆದರೆ ಏನು ತಿಳಿಯದ ಕೆಲವು ಮತದಾರರನ್ನು ದುಡ್ಡುಕೊಟ್ಟು ಇವರಿಗೆ ವೋಟು ಹಾಕಬೇಕು ಎಂದು ಮನವೊಲಿಸುವುದು ಸ್ಥಳೀಯ ಕಾರ್ಯಕರ್ತರು. ಇನ್ನೂ ಬೆರಳೆಣಿಗೆ ಮತದಾರರು ಯಾವ ಪಕ್ಷದ ಜನತೆ ಏನು ಕೊಟ್ಟರು ಸ್ವೀಕರಿಸುತ್ತಾರೆ. ಆದರೆ ಅವರು ಅಂದುಕೊಟ್ಟ ಪಕ್ಷಕ್ಕೆ ವೋಟು ಹಾಕುವುದು. ಯಾವುದೋ ಪಕ್ಷ ಏನೋ ಹೆಚ್ಚಾಗಿ ಕೊಟ್ಟಿದೆ ಎಂದು ವೋಟು ಹಾಕುವುದಿಲ್ಲ. ಇನ್ನೂ ಪ್ರಮಾಣಿಕ ಮತದಾರ ಏನು ತೆಗೆದುಕೊಳ್ಳದೇ ರಾಜಕೀಯ ವಿದ್ಯಮಾನವನ್ನು ಗಮನಿಸಿ, ಒಳ್ಳೆಯ ಕೆಲಸಗಾರ ರಾಜಕಾರಣಿಗೆ ವೋಟು ಹಾಕುತ್ತಾನೆ ಎಂಬ ಮಾತುಗಳಿವೆ.
ಜನತೆಯ ಪ್ರಶ್ನೆಗಳಿಗೆ ಉತ್ತರ ಹೀಗೆ ಮುಂದುವರೆಯಲಿದೆ.