ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದ ಅನುದಾನಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆ 2009 ಮೂಲಕ 1 ರಿಂದ 8ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೇರಿದಂತೆ Oneನೆರೆಹೊರೆಯ ಎಲ್ಲಾ ಶಾಲೆಗಳ ತಾತ್ಕಾಲಿಕ ಪಟ್ಟಿ ಪ್ರಕಟಣೆ ದಿನಾಂಕ : 22-02-2023
ಅನುದಾನಿತ ಶಾಲೆಗಳೂ ಸೇರಿದಂತೆ ದಾಖಲಾತಿ ಕೋರಿ ಪೋಷಕರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 20-03-2023 ರಿಂದ 20-04-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 20-04-2023
EID ಮೂಲಕ ಸಲ್ಲಿಸಿದ ಅರ್ಜಿಗಳ ದತ್ತಾಂಶದ ನೈಜತೆ ಪರಿಶೀಲನೆ : 21-03-2023 ರಿಂದ 21-04-2023
ವಿಶೇಷ ಪ್ರವರ್ಗಗಳು ಮತ್ತು ಕ್ರಮಬದ್ಧವಲ್ಲದ ಅರ್ಜಿಗಳ ಪರಿಶೀಲನೆ : 21-03-2023 ರಿಂದ 21-04-2023
ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ : 24-04-2023
ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಬಿಡುಗಡೆ : 27-04-2023
ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ: 28-04-2023 ರಿಂದ 08-05-2023
ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳ ಬಿಡುಗಡೆ ದಿನಾಂಕ : 28-04-2023 ರಿಂದ 08-05-2023
ಆನ್ಲೈನ್ ತಂತ್ರಾಂಶದಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ : 16-05-2023
ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಅವಧಿ : 17-05-2023 ರಿಂದ 25-05-2023
ಶಾಲೆಗಳಲ್ಲಿ ದಾಖಲಾದ 2ನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸುವುದು : 17-05-2023 ರಿಂದ 25-05-2023
ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 1-8ನೇ ತರಗತಿವರೆಗೆ ಕಾಯಿದೆಯ ಸೆಕ್ಷನ್ 12 (1) (B) ಪ್ರಕಾರ ಸದರಿ ಶಾಲೆ ಸರ್ಕಾರದಿಂದ ಪಡೆಯುವ ಅನುದಾನದ ಅನುಪಾತಕ್ಕೆ ಅನುಗುಣವಾಗಿ ಉಚಿತ ಸೀಟುಗಳ ಶೇಕಡ ಪ್ರಮಾಣ ನಿರ್ಧಾರವಾಗುತ್ತದೆ. 2023-24ನೇ ಸಾಲಿನಲ್ಲಿ ಪ್ರಾರಂಭಿಕ ತರಗತಿಯಾದ 1ನೇ ತರಗತಿಗೆ ನಿಗದಿತ ಶೇಕಡ 25 ಪ್ರಮಾಣದ ಸೀಟುಗಳಿಗೆ ಅನಾನುಕೂಲ ಪರಿಸ್ಥಿತಿಯಲ್ಲಿರುವ ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಸೀಟು ಹಂಚಿಕೆ ಮಾಡಲಾಗುವುದು.
ಶಿಕ್ಷಣ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸುವವರಿಗೆ ಸೂಚನೆ
ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗಾಗಿ ಪ್ರವೇಶ ಕೋರುವ ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕಡ್ಡಾಯ.
ಅರ್ಜಿ ಎಲ್ಲೆಲ್ಲಿ ಸಲ್ಲಿಸಬಹುದು ?
RTE ಅಡಿಯಲ್ಲಿ ಸೀಟು ಬಯಸುವ ಪಾಲಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಉಚಿತವಾಗಿ ಅಥವಾ ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ, ಬೆಂಗಳೂರು-ಒನ್, ಇತರೆ ನಗರ ಪ್ರದೇಶಗಳಲ್ಲಿ ಕರ್ನಾಟಕ-ಒನ್, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಟಲ್ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.