ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏಪ್ರಿಲ್ 15 ರಂದು ಬಿಡುಗಡೆ ಮಾಡಬೇಕಿದ್ದ 5 ನಿಗಮ, ಮಂಡಳಿಗಳ ನೇಮಕ ಅಧಿಸೂಚನೆ ಬಿಡುಗಡೆ ಆಗಿಲ್ಲ. ಕಾರಣ ಕೆಇಎ ಆನ್ಲೈನ್ ಅರ್ಜಿ ಸ್ವೀಕಾರಕ್ಕೆ ಹೊಸ ಸಾಫ್ಟ್ವೇರ್ ಅನ್ನು ಡೆವಲಪ್ ಮಾಡುತ್ತಿದ್ದು, ಇದು ಪ್ರಾಯೋಗಿಕ ಹಂತದಲ್ಲಿದೆ. ಈ ಕಾರ್ಯವನ್ನು ಕೆಇಎ ಮುಂದಿನ 10 ರಿಂದ 15 ದಿನಗಳೊಳಗೆ ಮುಗಿಸಿ ಈ ಕೆಳಗಿನ 5 ನಿಗಮ, ಮಂಡಳಿಗಳ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿ, ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತೇವೆ ಎಂದು ಹೇಳಿದೆ. ಯಾವೆಲ್ಲ ನಿಗಮ, ಮಂಡಳಿಗಳ ಹುದ್ದೆಗೆ ಅರ್ಜಿ ಸ್ವೀಕಾರ ಮಾಡಲಿದೆ, ಹುದ್ದೆಗಳು ಯಾವೆಲ್ಲ ಇವೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ’ದ ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು : 10
ಗುಣಮಟ್ಟ ನಿರೀಕ್ಷಕರು : 23
ಹಿರಿಯ ಸಹಾಯಕರು (ಲೆಕ್ಕ): 33
ಹಿರಿಯ ಸಹಾಯಕರು: 57
ಕಿರಿಯ ಸಹಾಯಕರು: 263
ಒಟ್ಟು ಹುದ್ದೆಗಳು : 386
ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹುದ್ದೆಗಳು
ಕಲ್ಯಾಣ ಅಧಿಕಾರಿ : 12
ಕ್ಷೇತ್ರ ನಿರೀಕ್ಷಕರು : 60
ಪ್ರಥಮ ದರ್ಜೆ ಸಹಾಯಕರು: 12
ಆಪ್ತ ಸಹಾಯಕರು : 02
ದ್ವಿತೀಯ ದರ್ಜೆ ಸಹಾಯಕರು: 100.
ಒಟ್ಟು ಹುದ್ದೆಗಳು : 186
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ’ದ ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ)- ಗ್ರೂಪ್ ಬಿ : 4
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ)-ಗ್ರೂಪ್ ಬಿ : 2
ಆಪ್ತ ಕಾರ್ಯದರ್ಶಿ – ಗ್ರೂಪ್ ಸಿ : 1
ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್ ಸಿ : 4
ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್ ಸಿ : 3
ಸಹಾಯಕರು (ತಾಂತ್ರಿಕ) ಗ್ರೂಪ್ ಸಿ: 6
ಸಹಾಯಕರು (ತಾಂತ್ರಕೇತರ) ಗ್ರೂಪ್ ಸಿ : 6
ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್’ನ ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು : 23
ಮೇಲ್ವಿಚಾರಕರು : 23
ಪದವೀಧರ ಗುಮಾಸ್ತರು : 6
ಗುಮಾಸ್ತರು : 13
ಮಾರಾಟ ಪ್ರತಿನಿಧಿ / ಪ್ರೋಗ್ರಾಮ್ : 6
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹುದ್ದೆಗಳು
ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ): 10
ಸಹಾಯಕ ಇಂಜಿನಿಯರ್ (ಸಿವಿಲ್) (ಗ್ರೂಪ್-ಬಿ): 1
ಸಹಾಯಕ ಗ್ರಂಥಾಪಾಲಕ (ಗ್ರೂಪ್-ಸಿ) : 1
ಸಹಾಯಕ (ಗ್ರೂಪ್-ಸಿ) : 27
ಕಿರಿಯ ಸಹಾಯಕ (ಗ್ರೂಪ್-ಸಿ): 49
ಒಟ್ಟು ಹುದ್ದೆಗಳು: 88