ಕೊಡಗು ಜಿಲ್ಲೆಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯ ವಿವಧ ವಿಭಾಗಗಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯೃರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ಪ್ರಾಧ್ಯಾಪಕರು: 03
ಸಹ ಪ್ರಾಧ್ಯಾಪಕರು: 07
ಸಹಾಐಕ ಪ್ರಾಧ್ಯಾಪಕರು: 18
ಸೀನಿಯರ್ ರೆಸಿಡೆಂಟ್: 25
ಮೆಡಿಕಲ್ ಆಫೀಸರ್: 02
ವಿದ್ಯಾರ್ಹತೆ: ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ನಿಗದಿಪಡಿಸಿರುವಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ
-ಪ್ರೊಫೇಸರ್ ಹುದ್ದೆಗಳಿಗೆ ಗರಿಷ್ಠ 50 ವರ್ಷ
-ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ ಗರಿಷ್ಠ 45 ವರ್ಷ
-ಸಹಾಯಕ ಪ್ರಾಧ್ಯಾಪಕರು ಹುದ್ದೆಗಳಿಗೆ ಗರಿಷ್ಠ 38 ವರ್ಷ
– ಸರ್ಕಾರದ ನಿಯಮಾವಳಿಯಂತೆ ಮೇಲಿನ ಎಲ್ಲಾ ಹುದ್ದೆಗಳಿಗೆ ಆಯಾ ಕೆಟಗರಿ ಹುದ್ದೆಗಳಿಗೆ ವಯೋ ಸಡಿಲಿಕೆ ನೀಡಲಾಗಿದೆ.
ನೇಮಕಾತಿ ಮಾನದಂಡ
-ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹಾಗೂ ಅಸಿಸ್ಟಂಟ್ ಪ್ರೊಪೇಸರ್ ಹುದ್ದೆಗಳಿಗೆ ಅಭ್ಯರ್ಥಿಗಳು ರಾಷ್ಟ್ರೀಯ, ಅಂತರಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿರುವ ಸಂಶೋಧನಾ ಲೇಖನಗಳಿಗೆ ಮತ್ತು ಸೇವಾನುಭವ ಮತ್ತು ನೇರಸಂದರ್ಶನದಲ್ಲಿ ಗಳಿಸಿದ ಅಂಕಗಳಿಗೆ ಅನುಗುಣವಾಗಿ ಜ್ಯೇಷ್ಠತಾ ಆಧಾರದಲ್ಲಿ ನೇಮಕ ನಡೆಯಲಿದೆ.
– ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳು ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳು, ನೇರ ಸಂದರ್ಶನ ಹಾಗೂ ಪ್ರಕಟಿಸಿದ ಸಂಶೋಧನಾ ಲೇಖನಗಳಿಗೆ ಗಳಿಸಿದ ಅಂಕಗಳನನು ಒಟ್ಟು ಸೇರಿಸಿ ಈ ಹುದ್ದೆಗಳನ್ನು ಜ್ಯೇಷ್ಠತಾ ಆಧಾರದಲ್ಲಿ ನೇಮಕಾತಿ ನಡೆಸಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟು?
-ಎಲ್ಲಾ ಹುದ್ದೆಗಳಿಗೂ ಅರ್ಜಿ ಶುಲ್ಕ ರೂ.1000 ನಿಗದಿಪಡಿಸಲಾಗಿದೆ.
– ಅರ್ಜಿ ಶುಲ್ಕವನ್ನು ‘ಡೈರೆಕ್ಟರ್, ಕೊಡಗು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್ ಮಡಿಕೇರಿ’ ರವರ ಹೆಸರಿಗೆ ಡಿಡಿ ತೆಗೆಯುವುದರ ಮೂಲಕ ಪಾವತಿಬೇಕು.
ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಕೊಡಗು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮಡಿಕೇರಿ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸ್ವ ದೃಢೀಕರಿಸಿದ 2 ಸೆಟ್ ದಾಖಲೆಗಳನ್ನು ಲಗತ್ತಿಸಿ ನಿಗದಿತ ದಿನಾಂಕದೊಳಗೆ ನೇರವಾಗಿ ಅಥವಾ ಪೋಸ್ಟ್ ಮೂಲಕ ಸಂಜೆ 4 ಗಂಟೆಯೊಳಗೆ ತಲುಪಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಆಫೀಸ್ ಆಫ್ ಚೀಫ್ ಅಡ್ಮನಿಸ್ಟ್ರೇಟಿವ್ ಆಫೀಸರ್, ಕೊಡಗು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮಡಿಕೇರಿ, ಕೊಡಗು ಜಿಲ್ಲೆ- 571201
ಸೂಚನೆ: ಅರ್ಜಿಯ ಲಕೋಟೆ ಮೇಲೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 25-05-2019
ನೇರ ಸಂದರ್ಶನ ದಿನಾಂಕ – 29-05-2019
Kodagu Institute of Medical Sciences recruitment notification 2019 (In Detail) – Click Here
Kodagu Institute of Medical Sciences recruitment notification 2019 in Kannada – Click here
Kodagu Institute of Medical Sciences recruitment notification 2019 in English – Click here
Kodagu Institute of Medical Sciences recruitment 2019 Application form – Click Here
For other more details to visit official website – click here