ಸುಪ್ರೀಂ ಕೋರ್ಟ್(supreme court) ಕೊನೆಗೂ ಆಧಾರ್(Aadhaar) ಯೋಜನೆಯನ್ನು ಎತ್ತಿ ಹಿಡಿದಿದೆ. ನ್ಯಾಯಾಲಯದ ಐವರು ನ್ಯಾಯಮೂರ್ತಿಗಳ ಪೀಠವು ಯಾವುದಕ್ಕೆಲ್ಲ ಆಧಾರ್(Aadhaar) ಬೇಕು, ಯಾವುದಕ್ಕೆ ಬೇಡ ಎಂಬ ತೀರ್ಪನ್ನು ನೀಡಿದ್ದು, ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಆಧಾರ್ ಯಾವುದಕ್ಕೆ ನೀಡಬೇಕು?
– ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಅನ್ನು ಲಿಂಕ್ ಮಾಡಬೇಕು
– ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ನೀಡಬೇಕು
– ಸರ್ಕಾರದ ಸಹಾಯಧನಗಳನ್ನು ಜನರು ಪಡೆಯಲು ಆಧಾರ್ ನೀಡಬೇಕು
– ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ನೀಡಬೇಕು
ಆಧಾರ್ ಯಾವುದಕ್ಕೆ ನೀಡಬೇಕು?
– ಶಾಲಾ, ಕಾಲೇಜು ಪ್ರವೇಶಕ್ಕೆ ಆಧಾರ್ ಅನ್ನು ನೀಡಬೇಕಿಲ್ಲ. ಕಡ್ಡಾಯವು ಅಲ್ಲ
– ಆಧಾರ್ ಇಲ್ಲದ ಕಾರಣಕ್ಕೆ ಯಾವುದೇ ಮಗುವಿಗೆ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನಗಳನ್ನು ನಿರಾಕರಿಸುವಂತಿಲ್ಲ
– ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯವಲ್ಲ
– ಸಿಬಿಎಸ್ಇ, ಎನ್ಇಇಟಿ ಮತ್ತು ಯುಜಿಸಿಗಳು ನಡೆಸುವ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಆಧಾರ್ ನಂಬರ್ ನೀಡುವ ಅಗತ್ಯವಿಲ್ಲ
ಸೂಚನೆ: ಸುಪ್ರೀಂ ಕೋರ್ಟ್ ಸೆಕ್ಷನ್ 57 ಅನ್ನು ವಜಾ ಮಾಡಿದೆ. ಇದರ ಪ್ರಕಾರ ಸರ್ಕಾರಿ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಯಾವುದೇ ವ್ಯಕ್ತಿಯ ಆಧಾರ್ ವಿವರಗಳನ್ನು ಪಡೆದುಕೊಳ್ಳಲು ಸೆಕ್ಷನ್ 57 ಅವಕಾಶ ನೀಡಿತ್ತು. ಈಗ ಇದನ್ನು ವಜಾ ಮಾಡಲಾಗಿದೆ.
In this article people can know where Aadhaar is mandatory, where not mandatory in kannnada. Supreme Court upholds Aadhaar card validity.