ಭಾರತೀಯ ರೈಲ್ವೆಗೆ ಸೇರಿರುವ ಕೊಂಕಣ ರೈಲ್ವೆ ನಿಗಮವು(Konkan Railway Limited) ನಿಗಮದ ಹಲವು ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ.
ಟ್ರಾಕ್ಮನ್, ಪಾಯಿಂಟ್ಸ್ ಮ್ಯಾನ್ ಹಾಗೂ ಕಲಾಸಿ ಸೇರಿದಂತೆ 100 ಗ್ರೂಪ್ ‘ಡಿ’ ಹುದ್ದೆಗಳಿಗೆ(Group D post) ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ: www.konkanrailway.com
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :21-06-2018
ಹುದ್ದೆಗಳ ವಿವರ : ಟ್ರಾಕ್ ಮನ್ 50, ಪಾಯಿಂಟ್ ಮ್ಯಾನ್ 37, ಕಲಾಸಿ 2, ಕಲಾಸಿ ಮೆಕ್ಯಾನಿಕಲ್ 3 ಹುದ್ದೆಗಳು.
ವಯೋಮಿತಿ : ಕನಿಷ್ಠ 18 ವರ್ಷಗಳು, ಗರಿಷ್ಠ 30 ವರ್ಷಗಳು, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ 5 ವರ್ಷಗಳು, ಒಬಿಸಿಗೆ 3 ವರ್ಷ, ಮಾಜಿ ಸೈನಿಕರಿಗೆ ಹಾಗೂ ವಿಕಲಚೇತನರಿಗೆ ಅರ್ಹತಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ವಿದ್ಯಾರ್ಹತೆ : ಈ ಮೇಲಿನ ಎಲ್ಲಾ ಹುದ್ದೆಗಳಿಗೆ ಎಸ್ಎಸ್ಎಲ್ಸಿ(SSLC) ಊತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಆರ್ಥಿಕವಾಗಿ ಹಿಂದುಳಿದ ವರ್ಗದವರು, ಮಾಜಿ ಸೈನಿಕರು, ವಿಕಲ ಚೇತನರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಅರ್ಜಿ ಶುಲ್ಕ ರೂ.250/ ಮಾತ್ರ. ಇತರರಿಗೆ ಅರ್ಜಿ ಶುಲ್ಕ ರೂ500/. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ವಿಧಾನ : ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ), ದೈಹಿಕ ಅರ್ಹತಾ ಪರೀಕ್ಷೆ(ಪಿಇಟಿ), ದಾಖಲೆಗಳ ಪರಿಶೀಲನೆ(ಡಿಎ) ಮೂಲಕ.
ಪರೀಕ್ಷೆ ದಿನಾಂಕ : ಪರೀಕ್ಷೆ ದಿನಾಂಕವನ್ನು ಅಧಿಕೃತವಾಗಿ ನೀಡಿಲ್ಲ. ಆದರೆ 2018 ಆಗಸ್ಟ್ ತಿಂಗಳಲ್ಲಿ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಪರೀಕ್ಷೆಗೆ ಮೆಟ್ರಿಕ್ ಮಟ್ಟದ ಸಾಮಾನ್ಯ ಜ್ಞಾನ ವಿಷಯಗಳ ಪ್ರಶ್ನೆಗಳಾಗಿರುತ್ತವೆ.
ದೈಹಿಕ ಅರ್ಹಾತಾ ಪರೀಕ್ಷೆ : ಪುರುಷರು 1 ಸಾವಿರ ಮೀಟರ್ ದೂರವನ್ನು 4.15 ನಿಮಿಷದಲ್ಲಿ ಓಡಿ ತಲುಪಬೇಕು. ಮಹಿಳೆಯರು 400 ಮೀಟರ್ ಅಂತರವನ್ನು 3.10 ನಿಮಿಷಗಳಲ್ಲಿ ಕ್ರಮಿಸಬೇಕು.
ವಿಶೇಷ ಸೂಚನೆ : ಭಾರತೀಯ ರೈಲ್ವೆಗೆ ಸೇರಿರುವ ಕೊಂಕಣ ರೈಲ್ವೆಯ ಈ ಮೇಲಿನ ಹುದ್ದೆಗಳಿಗೆ ಕೊಂಕಣ ರೈಲ್ವೆ ಯೋಜನೆಯ ವ್ಯಾಪ್ತಿಯ ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ಥೋಕರ್ವರೆಗಿನ ಪ್ರದೇಶದಲ್ಲಿ ಭೂಮಿ ಕಳೆದುಕೊಂಡವರು ಮಾತ್ರ ಪ್ರಸ್ತುತ ಈ ನೇಮಕಾತಿಗೆ ಅರ್ಜಿ ಹಾಕಬಹುದು. ಆದರೆ ಈಗಾಗಲೇ ಇದೇ ಯೋಜನೆಯಡಿ ಹುದ್ದೆ ಪಡೆದಿರುವ ಕುಟುಂಬದವರಿಗೆ ಅವಕಾಶವಿಲ್ಲ. ಆದರೆ ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ ಯೋಜನೆಯ ವ್ಯಾಪ್ತಿ ಮತ್ತು ಹುದ್ದೆ ಸಂಖ್ಯೆ ಮಿತಿ ಅನ್ವಯಿಸುವುದಿಲ್ಲ.
Konhan Railway invited group D job their cluster. Here is full details to apply to Konkan railway group D post fRecruitment 2018-19 Group D in Kannada