ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬೆಸ್ಕಾಂ, ಸೆಸ್ಕಾಂ, ಹೆಸ್ಕಾಮ್, ಮೆಸ್ಕಾಂ, ಜೆಸ್ಕಾಮ್ನಲ್ಲಿ ಖಾಲಿ ಇರುವ ಒಟ್ಟು 3646 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 16/03/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18/04/2019
ಅಂಚೆ ಕಛೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 22/04/2019
ಈಗಾಗಲೇ ವಿವಿಧ ಹುದ್ದೆಗಳಿಗೆ ಅರ್ಜಿಸಲ್ಲಿಸಿರುವವರಿಗೆ KPTCL ನೀಡಿರುವ ಹೊಸ ಸೂಚನೆ ತಿಳಿಯಲು – ಕ್ಲಿಕ್ ಮಾಡಿರಿ
ಆನ್ಲೈನ್ ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ KPTCL ಹೊರಡಿಸಿರುವ ಮರುಪ್ರಕಟಣೆ ಬಗ್ಗೆ ತಿಳಿಯಲು – ಕ್ಲಿಕ್ ಮಾಡಿ
ಈ ಕೆಳಗೆ ನೀಡಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ
For kptcl recruitment 2019-20 notification – click here
ಹುದ್ದೆಗಳ ವಿವರ
ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್(ವಿದ್ಯುತ್) – 94
ಸಹಾಯಕ ಎಂಜಿನೀಯರ್(ವಿದ್ಯುತ್) – 505
ಸಹಾಯಕ ಎಂಜಿನೀಯರ್(ಸಿವಿಲ್) -28
ಕಿರಿಯ ಎಂಜಿನೀಯರ್(ವಿದ್ಯುತ) – 570
ಕಿರಿಯ ಎಂಜಿನೀಯರ್(ಸಿವಿಲ್) – 28
ಕಿರಿಯ ಆಪ್ತ ಸಹಾಯಕ – 63
ಕಿರಿಯ ಸಹಾಯಕ – 360
ಚಾಲಕ ದರ್ಜೆ -II – 126
ಕಿರಿಯ ಸ್ಟೇಷನ್ ಪರಿಚಾರಕ – 103
ಕಿರಿಯ ಪವರ್ ಮ್ಯಾನ್(ಕಿರಿಯ ಮಾರ್ಗದಳು) – 1769
ಆಯ್ಕೆ ವಿಧಾನ
ಈ ಮೇಲಿನ ವಿವಿಧ ಹುದ್ದೆಗಳಿಗೆ ಹುದ್ದೆಗಳಿಗನುಗುಣವಾಗಿ ಸಹನ ಶಕ್ತಿ ಪರೀಕ್ಷೆ , ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಹತೆ
– ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ : SSLC ಉತ್ತೀರ್ಣ
– AEE(Electrical), AE(Electrical/Civil), JE(Electrical/Civil), Junior Assistant, Junior Personal Assistant ಹುದ್ದೆಗಳ ವಿದ್ಯಾರ್ಹತೆಯ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ
– ಚಾಲಕ ಹುದ್ದೆಗಳಿಗೆ : SSLC ಉತ್ತೀರ್ಣ
ಅರ್ಜಿ ಶುಲ್ಕ ವಿವರ
ಕಿರಿಯ ಸ್ಟೇಷನ್ ಪರಿಚಾರಕ/ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ
-ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ 2ಬಿ 3ಎ 3ಬಿ ಮತ್ತು ಪ್ರವರ್ಗ-1(CAT-1)ಗೆ ಸೇರಿದ ಅಭ್ಯರ್ಥಿಗಳಿಗೆ 200/- ರೂ
-ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 100/- ರೂ
AEE(Electrical), AE(Electrical/Civil), JE(Electrical/Civil), Junior Assistant, Junior Personal Assistant ಹುದ್ದೆಗಳಿಗೆ
– ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ 2ಬಿ 3ಎ 3ಬಿ ಮತ್ತು ಪ್ರವರ್ಗ-1(CAT-1)ಗೆ ಸೇರಿದ ಅಭ್ಯರ್ಥಿಗಳಿಗೆ 500/- ರೂ
– ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 300/- ರೂ
ಚಾಲಕ ಹುದ್ದೆಗಳಿಗೆ
– ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ 2ಬಿ 3ಎ 3ಬಿ ಮತ್ತು ಪ್ರವರ್ಗ-1(CAT-1)ಗೆ ಸೇರಿದ ಅಭ್ಯರ್ಥಿಗಳಿಗೆ 400/- ರೂ
– ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 250/- ರೂ
ವಯೋಮಿತಿ
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರತಕ್ಕದ್ದು ಮತ್ತು ಈ ಕೆಳಕಂಡ ಗರಿಷ್ಠ ವಯೋಮಿತಿ ಮೀರಿರಬಾರದು
-ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು 35 ವರ್ಷ
– ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು 38 ವರ್ಷ
– ಪ್ರವರ್ಗ-1, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 40 ವರ್ಷ
ವೇತನ ಶ್ರೇಣಿ ಈ ಕೆಳಗಿನಂತಿದೆ
– ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್ ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 46,080/-ರಿಂದ 98,030/-ರೂ
– ಸಹಾಯಕ ಇಂಜಿನಿಯರ್ (ವಿದ್ಯುತ್) ಮತ್ತು ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 41,130/- ರಿಂದ 72,920/-ರೂ
– ಕಿರಿಯ ಇಂಜಿನಿಯರ್ (ವಿದ್ಯುತ್ ) ಮತ್ತು ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 36,270/- ರಿಂದ 65,020/-ರೂ
– ಕಿರಿಯ ಆಪ್ತ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 22,920/-ರಿಂದ 56,320/-ರೂ
– ಕಿರಿಯ ಸಹಾಯಕ ಮತ್ತು ಚಾಲಕ ದರ್ಜೆ-11 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 20,220/-ರಿಂದ 51,640/-ರೂ
– ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 16,370/- ರಿಂದ 35,180/-ರೂ