ಮಾನವ ಹಕ್ಕುಗಳ ಅಯೋಗದಲ್ಲಿ ನೇಮಕಾತಿ: ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಪಾಸಾದವರು ಅರ್ಜಿ ಸಲ್ಲಿಸಿ.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಅಯೋಗವು 10 ವಿವಿಧ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಹುದ್ದೆಗಳ ವಿವರ ಮತ್ತು ಇತರೆ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರ
ಅಪರ ನಿಬಂಧಕರು-1
ಸಹಾಯಕ ನಿಬಂಧಕರು-1
ಕೋರ್ಟ್ ಅಧಿಕಾರಿ-1
ತೀರ್ಪು ಬರಹಗಾರರು-1
ಕಾನೂನು ಸಹಾಯಕರು/ಸಂಶೋಧನಾ ಸಹಾಯಕರು-2
ಶೀಘ್ರಲಿಪಿಗಾರರು-2
ಸಹಾಯಕರು-1
ವಾಹನ ಚಾಲಕರು-1
ವಿದ್ಯಾರ್ಹತೆ: ಎಸ್ಎಸ್ಎಲ್ಸಿ / ಪಿಯುಸಿ / ಪದವಿ.
ವಯೋಮಿತಿ ಅರ್ಹತೆ : ದಿನಾಂಕ 01-07-2021 ಕ್ಕೆ 62 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು www.kshrc.karnataka.gov.in ನಲ್ಲಿ ನೀಡಲಾದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು, ಅಗತ್ಯ ದಾಖಲೆಗಳೊಂದಿಗೆ ಅಂಚೆ ಮೂಲಕ, ಇ-ಮೇಲ್ ಮೂಲಕ ಸಲ್ಲಿಸಬೇಕು.
ಇಮೇಲ್ ವಿಳಾಸ : secretary-kshrc@karnataka.gov.in
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 04-09-2021