ರಾಜ್ಯ ಮೀಸಲು ಪೊಲೀಸ್ ಪಡೆಗಳಲ್ಲಿ ಖಾಲಿ ಇರುವ ಅನುಯಾಯಿ (ಪುರುಷ) (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಯ ಹೆಸರು : ಅನುಯಾಯಿ
ಹುದ್ದೆಗಳ ಸಂಖ್ಯೆ : 250
ವಿದ್ಯಾರ್ಹತೆ : sslc
ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 30-07-2021
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-08-2021
ಆನ್ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 01-09-2021
ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ : https://recruitment.ksp.gov.in
ನೇಮಕಾತಿ ಹಂತಗಳು : ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ ಇರುತ್ತದೆ.
ವಯೋಮಿತಿ ಅರ್ಹತೆಗಳು: ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು. ದಿನಾಂಕ 30-08-1991 ರಿಂದ 30-08-2003 ರ ನಡುವೆ ಜನಿಸಿರಬೇಕು.
- ಎಸ್ಟಿ (Tribal), ಎಸ್ಸಿ, ಪ್ರವರ್ಗ-1, 2A, 2B, 3A, 3B ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ : ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ ರೂ.250. ST / SC / CAT-1 ಅಭ್ಯರ್ಥಿಗಳಿಗೆ ರೂ.100. ಅರ್ಜಿ ಶುಲ್ಕವನ್ನು ಹೆಚ್ಡಿಎಫ್ಸಿ ಬ್ಯಾಂಕ್ / ಅಂಚೆ ಕಛೇರಿಯಲ್ಲಿ ಮಾತ್ರ ಪಾವತಿಸಬೇಕು.
ವೇತನ ಶ್ರೇಣಿ : ರೂ.18,600 – 32,600. ಪಿಂಚಣಿ ಸೌಲಭ್ಯ ಇರುತ್ತದೆ.