ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು ಸಿಬ್ಬಂದಿ ಮೇಲ್ವಿಚಾರಕ, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ವಿವಿಧ ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಹುದ್ದೆಗಳ ವಿವರ, ಸಂಬಳ, ಆಯ್ಕೆ ವಿಧಾನ, ಅರ್ಜಿಗೆ ದಿನಾಂಕಗಳು, ಇತರೆ ಮಾಹಿತಿಗಳನ್ನು ತಿಳಿದು ಅರ್ಜಿ ಹಾಕಿರಿ.
ಪೋಸ್ಟ್‌ಗಳ ವಿವರ
ದ್ವಿತೀಯ ದರ್ಜೆ ಸಹಾಯಕರು: 18
ಸಿಬ್ಬಂದಿ ಮೇಲ್ವಿಚಾರಕರು: 2
ಲೆಕ್ಕಪತ್ರ ಮೇಲ್ವಿಚಾರಕ: 1
ಪ್ರಥಮ ದರ್ಜೆ ಸಹಾಯಕರು: 7
ಕಛೇರಿ ಸಹಾಯಕರು: 11
ಯಾವ ಹುದ್ದೆಗೆ ಎಷ್ಟು ಸಂಬಳ
ದ್ವಿತೀಯ ದರ್ಜೆ ಸಹಾಯಕರು: Rs.21400-42000.
ಸಿಬ್ಬಂದಿ ಮೇಲ್ವಿಚಾರಕರು: Rs.33450-62600.
ಲೆಕ್ಕಪತ್ರ ಮೇಲ್ವಿಚಾರಕ: Rs.33450-62600.
ಪ್ರಥಮ ದರ್ಜೆ ಸಹಾಯಕರು: Rs.27650 – 52650.
ಕಛೇರಿ ಸಹಾಯಕರು: Rs.18600-32,600.
ಯಾವ ಹುದ್ದೆಗೆ ಏನು ಅರ್ಹತೆ ಪಡೆದಿರಬೇಕು.
ಸಿಬ್ಬಂದಿ ಮೇಲ್ವಿಚಾರಕ / ಲೆಕ್ಕಪತ್ರ ಮೇಲ್ವಿಚಾರಕ / ಪ್ರಥಮ ದರ್ಜೆ ಸಹಾಯಕರು : ಡಿಗ್ರಿ ಜತೆಗೆ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ ಜ್ಞಾನದ ಜತೆಗೆ ಟ್ಯಾಲಿ ಕೋರ್ಸ್‌ನ ತೇರ್ಗಡೆ ಪತ್ರವನ್ನು ಹೊಂದಿರಬೇಕು.
ದ್ವಿತೀಯ ದರ್ಜೆ ಸಹಾಯಕರು: ಪಿಯುಸಿ ಜತೆಗೆ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ ಜ್ಞಾನದ ಜತೆಗೆ ಟ್ಯಾಲಿ ಕೋರ್ಸ್‌ನ ತೇರ್ಗಡೆ ಪತ್ರವನ್ನು ಹೊಂದಿರಬೇಕು.
ಕಛೇರಿ ಸಹಾಯಕರು : SSLC.
ಅರ್ಜಿ ಹಾಕಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ನಮೂನೆಯನ್ನು ಸಂಘದ ಪ್ರಧಾನ ಕಛೇರಿ, ಶಾಂತಿನಗರ, ಕೆ.ಹೆಚ್.ರಸ್ತೆ, ಬೆಂಗಳೂರು-27 ಇಲ್ಲಿ ಕಛೇರಿ ವೇಳೆಯಲ್ಲಿ ಪಡೆದು, ಇದೇ ವಿಳಾಸಕ್ಕೆ ಭರ್ತಿ ಮಾಡಿದ ಅರ್ಜಿಯನ್ನು ತಲುಪಿಸಬೇಕು. ಅರ್ಜಿ ಶುಲ್ಕ ರೂ.500 ನಗದು ಪಾವತಿ ಮಾಡಬೇಕು. ಅರ್ಜಿಯೊಂದಿಗೆ ಶೈಕ್ಷಣಿಕ ದಾಖಲೆಗಳನ್ನು ಲಗತ್ತಿಸಿ ದಿನಾಂಕ 07-02-2023 ರೊಳಗೆ ಇದೇ ಕಛೇರಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿ, ಸ್ವೀಕೃತಿ ಪತ್ರ ಮರೆಯದೇ ತೆಗೆದುಕೊಳ್ಳಬೇಕು.
Notification
https://drive.google.com/file/d/1012ZGRyTKVKhgJDF5bpJesqUY7eCC5ve/view
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತ ವೆಬ್‌ಸೈಟ್ : http://www.ksrtceccs.com/#/home