ದಿನನಿತ್ಯದ ಜಂಟಾಟದಲ್ಲಿ ಮನುಷ್ಯ ಜೀವನಕ್ಕೆ ಅತ್ಯಮೂಲ್ಯವಾದ ಆಹಾರ ತಿನ್ನುವುದು, ನೀರನ್ನೇ ಕುಡಿಯುವುದನ್ನೇ ಮರೆಯುತ್ತಾನೆ. ಇನ್ನು ನಗುವುದೆಲ್ಲಿ ಬಂತು. ಆದರೆ ಇದಕ್ಕೆಲ್ಲಾ ಸ್ವಲ್ಪ ವಿರುದ್ಧ ನಡೆಯು ಇರಲಿ. ಆಗಾಗ ಮುಖದ ಮೇಲೆ ಮನದಿಂದ ಬರುವ ಮಂದಹಾಸವು ಇರಲಿ. ಅದಕ್ಕಾಗಿ ಈ ಲೇಖನದಲ್ಲಿ ಹಲವು ನಗೆಹನಿಗಳನ್ನು ನೀಡಿದ್ದು ಓದಿ ಒಮ್ಮೆ ಮನಃಪೂರ್ವಕವಾಗಿ ನಕ್ಕು ಬಿಡಿ.
ಇದೀಗ ಬಂದ ಸುದ್ದಿ ಯುವತಿ ಕೇವಲ ಐದು ನಿಮಿಷದಲ್ಲೇ ಸೀರೆ ಸೆಲೆಕ್ಟ್ ಮಾಡಿದ್ದನ್ನು ನೋಡಿ ದಿಗಿಲುಗೊಂಡು ಸೀರೆ ತೋರಿಸುತ್ತಿದ್ದ ಹುಡುಗ ಹೃದಯಾಘಾತದಿಂದ ಸ್ಥಳದಲ್ಲೇ ಸಾವು
———————-
ದೆಹಲಿಯ ಲೇಡಿಸ್ ಹಾಸ್ಟೆಲ್ ಮುಂದೆ ತರಕಾರಿ ಮಾರುವವನಿಗೆ ಹುಡುಗಿಯರೆಲ್ಲಾ ಸೇರಿ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ನಡೆದಿದೆ.
ಕಾರಣ:- ತರಕಾರಿ ಮಾರುವವನು “ಕ್ಯಾ ರೇಟ್ ಕ್ಯಾ ರೇಟ್” ಎಂದು ಕೂಗುತ್ತಿದ್ದನಂತೆ!
——————–
ತಿಮ್ಮ : ಅಲ್ಲೋ ಕಾಲಿಗೆ ಹಾವು ಕಚ್ಚಿ
ಇನ್ನೂ ಐದು ನಿಮಿಷ ಆಗಲಿಲ್ಲ.
ಅಷ್ಟರಾಗ ಹೆಂಗ ಸತ್ತ..?
ಗುಂಡ : ತಲೀಗೆ ವಿಷ ಏರತ್ತೋ
ಏನೋ ಅಂತ….
ಕುತ್ತಿಗೀಗೆ ಜೋರಾಗಿ ಹಗ್ಗ ಬಿಗಿದಿದ್ವಿ..!
ಟೀಚರ್:- ಆನೆ ದೊಡ್ಡದಾ? ಇರುವೆ ದೊಡ್ಡದಾ???
ಸರ್ದಾರ್ ನ ಮಗ:- ಹಾಗೆಲ್ಲಾ ಸುಮ್ ಸುಮ್ನೆ ಹೇಳಕ್ಕಾಗಲ್ಲಾ.. DATE OF BIRTH ಬೇಕು,,,
—————–
ಬಾಸ್ : ನೆನ್ನೆ ಯಾಕ್ರಿ ಕೆಲ್ಸಕ್ಕೆ ಬರ್ಲಿಲ್ಲ?
ನಾನು : ಕ್ಯಾಲೆಂಡರಲ್ಲಿ ರೆಡ್ ನಂ. ತೋರಿಸ್ತಿತ್ತು ಅಂತ ರಜ ಹಾಕ್ದೆ.
ಸಂಜೆ ಗೊತ್ತಾಯ್ತು ಹೊಸ ಕ್ಯಾಲೆಂಡರ್ ಪೂಜೆಗೆ ನಮ್ಮಜ್ಜಿ ಕುಂಕುಮ ಹಚ್ಚಿದ್ರು ಅಂತ!
————————-
ಡಾಕ್ಟರ್ – ಹುಂ.. ಏನ್ ತಿಂಡಿ ತಿಂದಿದ್ಯವ್ವಾ?
ಹುಡ್ಗಿ- ಐ ಈಟ್ ಹಂಬರ್ಗರ್, ಫ್ರೆಂಚ್ ಫ್ರೈಸ್, ಕೋಕ್ and ಕಾರ್ನ್ ಪಿಜ್ಜಾ..
ಡಾಕ್ಟರ್- ಇದು ಫೇಸ್‘ಬುಕ್ ಅಲ್ಲವ್ವಾ.. ಖರೇ ಹೇಳ್ ಏನ್ ತಿಂದಿ?
ಹುಡ್ಗಿ- ರೊಟ್ಟಿ ಜೊತಿ ಬದ್ನೀಕಾಯಿ ಪಲ್ಯಾರೀ..
———————-
ಹಾಸ್ಯ
ಡಾಕ್ಟರ್ : ನಮ್ಮ ಆಸ್ಪತ್ರೆಯ ಪ್ರಚಾರಕ್ಕಾಗಿ ಒಂದು ಒಳ್ಳೆಯ ಪಂಚ್ ಡೈಲಾಗ್ ಹೇಳಿ..
ಗುಂಡ : ” ಕರ್ಕೊಂಡ್ ಬನ್ನಿ,
ಹೊತ್ಕಂಡ್ ಹೋಗಿ,
ಹಣ ನಮಗೆ,
ಹೆಣ ನಿಮಗೆ ”
—————
ಮಾಸ್ತರ: ರಾಮ್ಯಾ, ಹೇಳಲೇ ತತ್ತಿ ಮೊದಲ ಬಂತೋ ಏನ್ ಕೋಳಿ ಮೊದಲ ಬಂತೋ..?
ರಾಮ್ಯಾ: ಸರ್ ತತ್ತಿ ಬಂತ್ರಿ..
ಮಂಜ್ಯಾ: ಸರ ಅವಂಗ ಗೊತ್ತಿಲ್ಲರೀ, ಅಂವಾ ಅಭ್ಯಾಸ ಮಾಡಿಲ್ಲರಿ, ನಾ ಹೇಳಲೆನ್ರಿ..?
ಮಾಸ್ತರ: ಹೇಳಪಾ, ನೀನ ಹೇಳ.
ಮಂಜ್ಯಾ: ಸರ ಮೊದಲ ಬೀರ್ ಬಂತರಿ,
ಆಮೇಲೆ ಶೇಂಗಾ ಬಂತರಿ, ಆಮೇಲೆ ತತ್ತಿ ಬಂತರಿ,
ಆಮೇಲೆ ಕೋಳಿ ಬಂತರಿ
ಲಾಸ್ಟಗೆ 850/- ಬಿಲ್ಲ್ ಬಂತರಿ ಸರಾ..
——————-
ಟೀಚೆರ್ : ಗುಂಡ ” ಗಂಡ ಬೇರುಂಡ ” ಎಂದರೆ ಏನು ? ವಿವರಿಸು ?
ಗುಂಡ : ಅದು ತುಂಬಾ ಸುಲುಭ ಮೇಡಂ . ಹೆಂಡತಿ ಯಿಂದ ದೂರ ಕುಳಿತು ಒಬ್ಬನೇ ಊಟ ಮಾಡುವ ಗಂಡ.
” ಗಂಡ” “ಬೇರೆ” “ಉಂಡ ”
—————
-ನ್ಯಾಯಾಲಯದಲ್ಲಿ-
ಜಡ್ಜ್ – ಈ ಗುಂಡನ ಎರಡೂ ಕಿವಿ ಕಟ್ ಮಾಡಿ
ಗುಂಡ – ಬ್ಯಾಡಾ ಸ್ವಾಮಿ ಕಿವಿ ಏನಾರ ಕಟ್ ಮಾಡಿದ್ರ ನಾ ಕುರುಡ ಆಗ್ತೀನಿ..
ಜಡ್ಜ್ – ಲೇ ಹುಚ್ಚಾ ಕಿವಿ ಕತ್ತರಿಸಿದ್ರ ಕುರುಡ ಹೆಂಗ ಆಗ್ತೀ ಲೇ..⁉
ಗುಂಡ – ಚಷ್ಮಾದ ಕಡ್ಡಿ ಏನ್ ನಿನ್ನ ಕಿವ್ಯಾಗ ಇಡ್ಲ್ಯಾ..
——————–
ಹುಡುಗ: ಮಸ್ತ ಡ್ರೆಸ್ ಹಾಕಿ ಅಲಾ
ಹುಡುಗಿ: ಥ್ಯಾಂಕ್ಸ್
ಹುಡುಗ: ಲಿಫ್ಟಿಕ್ ಅಂತೂ ಬಾರಿ ಐತಿ
ಹುಡುಗಿ: ಥ್ಯಾಂಕ್ಸ್
ಹುಡುಗ: ಮೇಕಪ್ ಅಂತು ಖತರನಾಕ
ಹುಡುಗಿ: ಥ್ಯಾಂಕ್ಸ್ ಅಣ್ಣಾ
ಹುಡುಗ: ಆದರೂ ಎನ್ ಬಿಡವಾ ಚಂದ ಕಾಣವಲ್ಲಿ.
————————-
ಭಿಕ್ಷುಕ : ಮಗ ತಿನ್ನಲಿಕ್ಕೆ ಏನಾದರೂ ಕೊಡು,
ಗುಂಡ : ನಿನಗೆ ಕೊಟ್ಟ್ರೆ ನನಗೆ ಏನು ಸಿಗುತ್ತೆ
ಭಿಕ್ಷುಕ : ನಿನಗೆ ಸ್ವರ್ಗ ಸಿಗುತ್ತೆ,
ಗುಂಡ : ನಿಂಗೆ ಬೆಂಗಳೂರು ಕೊಡುತ್ತಿನಿ,
ಭಿಕ್ಷುಕ : ಬೆಂಗಳೂರು ಏನು ನಿಂದಾ,
ಗುಂಡ : ಮತ್ತೆ ಸ್ವರ್ಗ ಏನು ನಿಮ್ಮಪ್ಪಂದಾ,
In this article Kannadaadvisor giving number of jokes for people to relief their mind, and take to calm. After read these jokes laugh just ones with Heartly.