ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು (Mandya milk federation) 126 ವಿವಿಧ ಶ್ರೇಣಿಯ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ಆದರೆ ಈ ನೇಮಕಾತಿ ಪ್ರಕ್ರಿಯೆಯು ಒಕ್ಕೂಟಕ್ಕೆ ನಿಬಂಧಕರ ಪ್ರತಿನಿಧಿ ನೇಮಿಸಿಕೊಳ್ಳದಿರುವುದರಿಂದ ನೇಮಕಾತಿ ಅಧಿಸೂಚನೆಯನ್ನು ರದ್ದುಗೊಳಿಸಲಾಗಿದೆ.
ಸದರಿ ಷರತ್ತು ಸಂಖ್ಯೆ (4) ಹಾಗೂ ಸಹಕಾರ ಸಂಘಗಳ ನಿಯಮ 1960 ರ ನಿಯಮ 17-ಎ ರೀತ್ಯಾ ನೇಮಕಾತಿ ಸಮಿತಿಗೆ ಸಹಕಾರ ಸಂಘಗಳ ನಿಬಂಧಕರ ಪ್ರತಿನಿಧಿಯನ್ನು ನೇಮಿಸಿಕೊಳ್ಳದೆ, ಉಲ್ಲೇಖ (2)ರ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯು ನಿಯಮ 17-ಎ ಮತ್ತು ಸರ್ಕಾರದ ಉಲ್ಲೇಖ (1) ರ ಆದೇಶದಲ್ಲಿನ ಷರತ್ತಿಗೆ ವ್ಯತಿರಿಕ್ತವಾಗಿರುವುದರಿಂದ ಸಹಕಾರ ಸಂಘಗಳ ನಿಬಂಧಕರಾದ ಎಂ.ಕೆ ಅಯ್ಯಪ್ಪ ರವರು ನೇಮಕಾತಿ ಅಧಿಸೂಚನೆಯನ್ನು ರದ್ದುಗೊಳಿಸಿದ್ದಾರೆ.
ಅಂದಹಾಗೆ ಈ ನೇಮಕಾತಿ ನಡೆದಿದ್ದೇ ಆದಲ್ಲಿ ಒಕ್ಕೂಟವು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಮಸ್ಯೆ ಒಂದು ಕಡೆಯಾದರೆ, ಈಗ ನಿಜವಾಗಿ ಈ ಒಕ್ಕೂಟದಲ್ಲಿ ಉದ್ಯೋಗ ಪಡೆಯಲು ಸಾವಿರಾರು ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಿ ಹಲವು ನಿರುದ್ಯೋಗಿಗಳು ಕಂಗಾಲಾಗಿದ್ದಾರೆ.
ಹೌದು. ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೇಮಕಾತಿಗೆ ಅರ್ಜಿ ಸಲ್ಲಿಸಲು ಒಕ್ಕೂಟವು ಪ್ರಾರಂಭಿಕ ದಿನಾಂಕ 17-09-2018 ಅನ್ನು ಮತ್ತು ಕೊನೆಯ ದಿನಾಂಕ 16-102018 ಅನ್ನು ನಿಗದಿಪಡಿಸಿತ್ತು. ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನಾಂಕ 17-09-2018 ರಿಂದ ಲೆಕ್ಕ ಹಾಕಿದರೆ ನೆನ್ನೆಯವರೆಗೆ(02/10/2018) 16 ದಿನಗಳ ಅಂತರದಲ್ಲಿ ನೂರಕ್ಕು ಹೆಚ್ಚು ನಿರುದ್ಯೋಗಿಗಳು ಸಾವಿರಾರು ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಿ ಅರ್ಜಿ ಸಲ್ಲಿಸಿರುತ್ತಾರೆ. ಇಲ್ಲಿ ನೆನಪಿಡಬೇಕಾದ ಇನ್ನೊಂದು ಅಂಶವೆಂದರೆ ರಾಜ್ಯ ಸಹಕಾರ ಸಂಘಗಳ ನಿಬಂಧಕರಾದ ಎಂ.ಕೆ ಅಯ್ಯಪ್ಪ ರವರು ನೇಮಕಾತಿ ರದ್ದುಗೊಳಿಸಿ ಅಧಿಸೂಚನೆ ಹೊರಡಿಸಿರುವುದು ದಿನಾಂಕ 26-10-2018 ರಂದು. ಆದರೆ ಈ ಮಾಹಿತಿ ಅಕ್ಟೋಬರ್ 2 ರಂದು ಹೊರಬಿದ್ದಿದೆಯಷ್ಟೇ. ಈ ಮಾಹಿತಿಯನ್ನು ತಿಳಿಸಲು ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು 5 ದಿನಗಳು ವಿಳಂಬ ಮಾಡಿರುವುದು ಇನ್ನಷ್ಟು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ನೇಮಕಾತಿಗೆ ಅರ್ಜಿ ಸಲ್ಲಿಸಿರುವವರ ಅರ್ಜಿ ಶುಲ್ಕ ಮರುಪಾವತಿ ಆಗುವುದೇ?
ಇಲ್ಲಿಯವರೆಗೆ ಅರ್ಜಿ ಸಲ್ಲಿಸಿರುವ ನಿರುದ್ಯೋಗಿಗಳ ಸಾವಿರಾರು ರೂಪಾಯಿ ಅರ್ಜಿ ಶುಲ್ಕ ಮರುಪಾವತಿ ಆಗುವುದೇ? ಆದರೂ ಹೇಗೆ? ಎಂದು ಕನ್ನಡ ಅಡ್ವೈಜರ್ ಮೂಲಗಳನ್ನು ವಿಚಾರಿಸಿದಾಗ ಸಿಕ್ಕ ಉತ್ತರ ಈ ಕೆಳಗಿನಂತಿದೆ.
– ನೇಮಕಾತಿ ಪ್ರಕಟಣೆಯಲ್ಲಿ “ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂತಿರುಗಿಸಲಾಗುವುದಿಲ್ಲ” ಎಂದಿದೆ. ನಿನ್ನೆಯಷ್ಟೇ ಅಧಿಕೃತವಾಗಿ ಹೊರಬಿದ್ದಿರುವ ಪತ್ರಿಕಾ ಪ್ರಕಟಣೆಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿ ಶುಲ್ಕವನ್ನು ಪಾವತಿಸಿರುವವರ ಹಣ ಮರುಪಾವತಿ ಆಗುವ ಬಗ್ಗೆ ಮಾತ್ರ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
– ಆದರೆ ಮೂಲಗಳ ಪ್ರಕಾರ ಅರ್ಜಿ ಸಲ್ಲಿಸಿರುವವರು ಪೋಸ್ಟ್ ಆಫೀಸ್ ನಲ್ಲಿ ಡಿಡಿ ಕಟ್ಟಿದ್ದು, ಅಭ್ಯರ್ಥಿ ಡಿಡಿ ಪ್ರತಿಯನ್ನು ತೋರಿಸಿದರೆ ಹಣ ಮರುಪಾವತಿ ಮಾಡಲಾಗುವುದು ಎನ್ನಲಾಗಿದೆ. ಈ ಹಿಂದೆಯೂ ಒಮ್ಮೆ ನೇಮಕಾತಿ ರದ್ದಾದಾಗ ಅಭ್ಯರ್ಥಿಯೊಬ್ಬರು ಡಿಡಿ ತೋರಿಸಿದ್ದಕ್ಕೆ ಶುಲ್ಕ ವಾಪಸ್ಸು ನೀಡಲಾಗಿತ್ತಂತೆ.
ಉನ್ನತ ಮೂಲಗಳ ಪ್ರಕಾರ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ರದ್ದಾದ ನೇರ ನೇಮಕಾತಿಯನ್ನು, ಹೇಗಾದರೂ ಮುಂದುವರೆಸಬೇಕೆಂಬ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ತಿಳಿದಿದೆ. ಆದರೆ ಈ ನೇಮಕಾತಿ ಕಡ್ಡಾಯವಾಗಿ ರದ್ದಾಗುವುದೋ ಅಥವಾ ಮುಂದುವರೆಯುವುದೋ ಕಾದುನೋಡಬೇಕಿದೆ.
ಒಕ್ಕೂಟವು ನಿಗದಿಪಡಿಸಿದ್ದ ಅರ್ಜಿ ಶುಲ್ಕ ಹೀಗಿತ್ತು
– ಸಾಮಾನ್ಯ ವರ್ಗದ ಹಾಗೂ ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ – ರೂ.1000 + ಅಂಚೆ ಕಚೇರಿ ಶುಲ್ಕ ರೂ.30 + GST
– ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ -ರೂ.500 + ಅಂಚೆ ಕಚೇರಿ ಶುಲ್ಕ ರೂ.30 + GST
ಈ ಬಗ್ಗೆ ನಿಮ್ಮ ಕನ್ನಡ ಅಡ್ವೈಜರ್ ಅಪ್ಡೇಟ್ ಮಾಹಿತಿಯನ್ನು ನೀಡುತ್ತಿರುತ್ತದೆ. ಮಾಹಿತಿ ತಿಳಿಯಲು www.kannadaadvisor.com ಗೆ ಭೇಟಿ ನೀಡುತ್ತಿರಿ.
Mandya milk federation recruitment canceled, is candidates fee will returned?, how federation will return fee. Know more full details here in kannada.