ಮೈಕೈ ನೋವು ತುಂಬಾ.. ಯಾಕೆ ಬಂತು? ಏನಿಕ್ಕೆ ಬಂತು ಗೊತ್ತಿಲ್ಲಾ.. ಸಂಪೂರ್ಣ ದೇಹ ಭಾರ.. ಎಲ್ಲಾ ಕೆಲಸಗಳ ಶ್ರದ್ಧೆ ಆಗಿದೆ ಹಗುರ.
ಮೇಲಿನ ಇಂತಹ ಸಮಸ್ಯೆಗಳು ಹೆಚ್ಚು ಕಾಡುವವರು ನಾವು ಈ ಲೇಖನದಲ್ಲಿ ತಿಳಿಸಿರುವ ‘ಸರ್ವಾಂಗಾಸನ’ದ (Sarvangasana)ಬಗ್ಗೆ ತಿಳಿದುಕೊಂಡು. ಕೇವಲ ಒಂದು ವಾರ ಇದನ್ನು ಮಾಡಿ. ನಂತರ ರಿಸಲ್ಟ್ ನೋಡಿ.
ಸರ್ವಾಂಗಾಸನನ ಬಗ್ಗೆ ಇಂದಿನ ಲೇಖನದಲ್ಲಿ ಅದರ ಅನುಕೂಲಗಳು ಮತ್ತು ‘ಸರ್ವಾಂಗಾಸನ’ ಮಾಡುವುದು ಹೇಗೆ? ಎಂಬ ಮಾಹಿತಿಯನ್ನು ಸುಲಭವಾಗಿ ತಿಳಿಸಿಕೊಡುತ್ತೇವೆ. ಆದರೆ ಚಿತ್ರ ನೋಡಿ ಅಷ್ಟೇನಾ ಅಂತ ತಿಳಿದು ಹಾಗೆ ಮಾಡದಿರಿ.
ಸರ್ವಾಂಗಾಸನ ಮಾಡುವುದನ್ನು ತಿಳಿಯುವ ಮೊದಲು ಅದರ ಅನುಕೂಲಗಳು ಏನು? ಎಂಬುದು ಈ ಕೆಳಗಿನಂತಿದೆ. ಓದಿ ತಿಳಿದುಕೊಂಡು ನಂತರ ನಿಮಗೆ ಆಸಕ್ತಿ ಇದ್ದಲ್ಲಿ ಸರ್ವಾಂಗಾಸನ ಆರಂಭಿಸಿ..
ಸರ್ವಾಂಗಾಸನ ಮಾಡುವುದರಿಂದ ಆಗುವ ಅನುಕೂಲಗಳು
– ಮೂರ್ಛೆ ರೋಗ, ರಕ್ತ ಕ್ಷಯ ರೋಗಗಳನ್ನು ನಿವಾರಿಸುತ್ತದೆ.
– ನರಗಳು, ಸ್ನಾಯು ಸೆಳೆತ ನಿವಾರಿಸುತ್ತದೆ.
– ನಿದ್ರೆ ಸಮಸ್ಯೆ ಹೋಗಲಾಡಿಸಲು ಸೂಕ್ತವಾಗಿದೆ.
– ಉಸಿರಾಟ, ಗಂಟಲುಬೇನೆ, ಶ್ವಾಸನಾಳ, ವೇಗವಾದ ಎದೆಬಡಿತ, ಅರ್ಧ ತಲೆನೋವು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
– ಕುತ್ತಿಗೆ, ಗಂಟಲು ಭಾಗಗಳಿಗೆ ಉತ್ತಮವಾದ ವ್ಯಾಯಾಮ ದೊರೆತು ಥೈರಾಯಿಡ್ ಹಾಗೂ ಪ್ಯಾರಾ ಥೈರಾಯಿಡ್ ಗ್ರಂಥಿಗಳ ಸರಿಯಾದ ಕಾರ್ಯ ನಿರ್ವಹಣೆಗೆ ಸಹಾಯಕಾರಿ.
– ಸರಾಗವಾಗಿ ರಕ್ತ ಪರಿಚಲನೆ ಉಂಟಾಗಲು ಸಹಾಯಕಾರಿ ಆಗಿದ್ದು, ಮೆದುಳಿಗೆ ಶುದ್ಧ ರಕ್ತ ಪೂರೈಕೆ ಮಾಡುತ್ತದೆ.
– ಇದರಿಂದ ಮೆಮೊರಿ ಪವರ್ ಅಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ.
– ಮೂತ್ರ ವಿಸರ್ಜನೆ ತೊಂದರೆ ಹಾಗೂ ಮಹಿಲೆಯರ ಮಾಸಿಕ ಸ್ರಾವದ ತೊಂದರೆ, ಹೊಟ್ಟೆ ನೋವು ಸಮಸ್ಯೆ ನಿವಾರಿಸುತ್ತದೆ.
– ಕರುಳುಹುಣ್ಣು ಸಮಸ್ಯೆ, ದೊಡ್ಡ ಕರುಳಿನ ಊತ ನಿವಾರಣೆ, ಕಿಬ್ಬೊಟ್ಟೆಯ ಅಂಗಗಳ ಮೇಲೆ ಪರಿಣಾಮ ಬೀರಿ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಸರ್ವಾಂಗಾಸನ ಮಾಡುವುದು ಹೇಗೆ?
– ಮೊದಲಿಗೆ ಯೋಗ ಮಾಡಲು ನಿಮಗೆ ಹಿತಕರವಾದ ವಾತಾವರಣ ಇರುವಂತೆ ನೋಡಿಕೊಳ್ಳಿ.
– ಮೊದಲಿಗೆ ಕಾಲುಗಳನ್ನು ಚಾಚಿ ಬೆನ್ನು ಕೆಳಗೆ ಮಾಡಿ ತಲೆ ಮೇಲ್ಮುಖವಾಗಿ ಮಾಡಿ ಮಲಗಿ. ಎರಡು ಕೈಗಳು ಎರಡು ಬದಿಯ ತೊಡೆಯ ಪಕ್ಕ ಇರಲಿ.
– ಹಾಗೂ ಈ ಸಮಯದಲ್ಲಿಮಂಡಿಗಳನ್ನು ಕೂಡಿಸಿ, ಪಾದಗಳನ್ನು ಜೋಡಿಸಿ ಹಾಗೂ ನಂತರ ನಿಧಾನವಾಗಿ ಉಸಿರನ್ನು ಬಿಡುತ್ತಾ ಕಾಲುಗಳನ್ನು ನಿಧಾನವಾಗಿ ಮೇಲಕ್ಕೆ ಎತ್ತಿರಿ.
– ಕಾಲುಗಳನ್ನು ನೆಲದಿಂದ 30 ಡಿಗ್ರಿ ಕೋನದಲ್ಲಿ ಸ್ವಲ್ಪ ಸಮಯ ಅಂದ್ರೆ 10 ಸೆಕೆಂಡುಗಳ ಕಾಲ, ನಂತರ 60 ಡಿಗ್ರಿ ಕೋನದಲ್ಲಿ ಸ್ವಲ್ಪ ಸಮಯ ನಿಲ್ಲಿಸಿ, ನಂತರ 90 ಡಿಗ್ರಿ ಕೋನದಲ್ಲಿ ಸ್ವಲ್ಪ ಸಮಯ ಮೇಲಕ್ಕೆ ಎತ್ತಿದಂತೆ ನಿಲ್ಲಿಸಿರಿ.
– ನಂತರ ಸೊಂಟದ ಭಾಗವನ್ನು ಮೇಲೆತ್ತಿ ಕಾಲುಗಳನ್ನು ತಲೆಯ ದಿಕ್ಕಿನಂತ ಬಾಗಿಸಿ ಕೈಗಳನ್ನು ಸೊಂಟಕ್ಕೆ ಸಪೋರ್ಟ್ ಆಗಿ ಕೊಡಿ. ನಂತರ ಮತ್ತೆ ಕಾಲುಗಳನ್ನು ನೇರವಾಗಿ ಮೇಲೆತ್ತಿ ನಿಲ್ಲಿಸಿ.
– ತಲೆಯೊಂದನ್ನು ಬಿಟ್ಟು, ಮುಂಡಭಾಗ, ತೊಡೆ, ಪಾದಗಳು ಒಂದೇ ನೇರಕ್ಕೆ ಇರುವಂತೆ ಸಮತೋಲನ ವಾಗಿ ಕಾಪಾಡಿ. ಪಾದದ ಹೆಬ್ಬೆರಳನ್ನು ನೋಡುತ್ತಾ ಗಮನ ಕೇಂದ್ರಿಕರಿಸಿ.
– ಅಂತಿಮವಾಗಿ ಐದು ನಿಮಿಷದವರೆಗೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದೇಹವನ್ನು ಅದೇ ಸ್ಥಿತಿಯಲ್ಲಿ ಇಡಿ. ಉಸಿರಾಟ ಅತಿಯಾದ ದೀರ್ಘವಾಗಿರದೆ ಸರಳವಾಗಿರಲಿ.
– ಈಗ ಮೊದಲು ಈ ಸರ್ವಾಂಗಾಸನ ಹೇಗೆ ಪ್ರಾರಂಭಿಸಿದಿರೋ ಹಾಗೆ ನಿಧಾನವಾಗಿ ಅದೇ ವಿಧಾನದಲ್ಲಿ ಹಿಮ್ಮೂಖವಾಗಿ ಆಸನ ಅಂತಿಮಗೊಳಿಸಿ. ನಂತರ ದೀರ್ಘ ಉಸಿರಾಟವನ್ನು ಐದು ನಿಮಿಷಗಳ ವರೆಗೆ ಮಾಡಿ ನಂತರ ಮೇಲೇಳಬಹುದು.
ಈ ವಿಧಾನಗಳ ಮೂಲಕ ಸರ್ವಾಂಗಾಸನ ಮಾಡಿದವರು ನಿಮ್ಮ ರಿಸಲ್ಟ್ ಅನ್ನು ಕನ್ನಡ ಅಡ್ವೈಜರ್ ನ ಕಮೆಂಟ್ ಬಾಕ್ಸ್ ನಲ್ಲಿ ಟೈಪ್ ಮಾಡಿ.
Many deseases have been reversed from the Sarvangasana. Here we listed lot of health benefits of Sarvangasana. Read more here..