ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..
ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..
1 ಗಿನ್ನೆಸ್ ವರ್ಲ್ಡ್ ರೆಕಾರ್ಡ್ನಲ್ಲಿ ವಿಶ್ವದಲ್ಲಿ ಅತಿಹೆಚ್ಚು ವರ್ಷ ಜೀವಿಸಿದ ವ್ಯಕ್ತಿ ಎಂದು ಅಧಿಕೃತವಾಗಿ ಹೆಸರಿಸಲ್ಪಟ್ಟವರು ಯಾರು?
2 ವಕೀಲರಿಗಾಗಿ ವಿಮೆಯನ್ನು ರೂಪಿಸುವ ಸಮಿತಿಯ ಮುಖ್ಯಸ್ಥರು ಯಾರು?
3 ನವದೆಹಲಿಯಲ್ಲಿ ನಡೆದ ಮೊಟ್ಟ ಮೊದಲ ಭಾರತ-ಜಪಾನ್ ಬಾಹ್ಯಾಕಾಶ ಮಾತುಕತೆಯಲ್ಲಿ ಭಾರತೀಯ ನಿಯೋಗವನ್ನು ಮುನ್ನಡೆಸಿದವರು ಯಾರು?
4 ಪಾಕಿಸ್ತಾನದ ಸೆನೆಟ್ಗೆ ಚುನಾಯಿತರಾದ ಮೊಟ್ಟ ಮೊದಲ ತರಿ ಹಿಂದು ಮಹಿಳೆ ಯಾರು?
5 ‘The Centre of Excellence for European Union Studies in India(CEEUSI)’ ಇತ್ತೀಚೆಗೆ ಯಾವ ವಿಶ್ವವಿದ್ಯಾಲಯದಲ್ಲಿ ಉದ್ಘಾಟನೆಗೊಂಡಿತು?
6 ಭಾರತದ ನೂತನ ಹಣಕಾಸು ಕಾರ್ಯದರ್ಶಿಯಾಗಿ ನೇಮಕಗೊಂಡವರು ಯಾರು?
7 ನ್ಯಾಶನಲ್ ಕಂಪೆನಿ ಲಾ ಟ್ರಿಬ್ಯೂನಲ್ನ ಪ್ರಧಾನ ನ್ಯಾಯಪೀಠ ಯಾವ ನಗರದಲ್ಲಿದೆ?
8 ಇತ್ತೀಚೆಗೆ ಯಾವ ಸ್ಪೋರ್ಟ್ಸ್ ಫೆಡರೇಷನ್ ಭಾರತದ ರಾಷ್ಟ್ರೀಯ ಕ್ರೀಡಾ ಒಕ್ಕೂಟ ಎಂದು ಗುರುತಿಸಲಾಗಿದೆ?
9 ಮುಖ್ಯಮಂತ್ರಿ ಅಂಚಲ್ ಅಮ್ರಿತ್ ಯೋಜನೆ ಅನ್ನು ಯಾವ ರಾಜ್ಯ ಸರ್ಕಾರ ಆರಂಭಿಸಿದೆ?
ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ
1 ಕನೆ ತನಕ (Kane Tanaka)
2 ಅಲೋಕ್ ಶ್ರೀವತ್ಸ
3 ಇಂದ್ರ ಮಣಿ ಪಾಂಡೆ
4 ಕೃಷ್ಣ ಕುಮಾರಿ ಕೊಹ್ಲಿ
5 ಜೆಎನ್ಯು
6 ಸುಭಾಷ್ ಚಂದ್ರ ಗರ್ಘ್
7 ನವ ದೆಹಲಿ
8 Carrom
9 ಉತ್ತರಖಂಡ
Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.