ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..
ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..
1 ಮರಯೂರ್ ಜಾಗ್ಗೆರಿ ಇತ್ತೀಚೆಗೆ ಜಿಐ ಟ್ಯಾಕ್ ಅನ್ನು ಪಡೆಯಿತು. ಇದು ಯಾವ ರಾಜ್ಯಕ್ಕೆ ಸಂಬಂಧಿಸಿದೆ?
2 ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಭಾರತೀಯ ಯಾರನ್ನು ಪ್ರಧಾನ ವಿಜ್ಞಾನಿ ಆಗಿ ನೇಮಿಸಲಾಗಿದೆ?
3 ಭಾರತೀಯ ಯಾವ ರಕ್ಷಣಾ ಪಡೆಯು ‘ಕಾಂಬ್ಯಾಟ್ ಡ್ರಗ್’ ಅನ್ನು ಪುಲ್ವಾಮಾ ದಂತಹ ದಾಳಿ ವೇಳೆ ಜೀವಿತವಧಿಯನ್ನು ಹೆಚ್ಚಿಸಲು ಅಭಿವೃದ್ಧಿಪಡಿಸಿದೆ?
4 ಕೆವಿಂದರ್ ಸಿಂಗ್ ಬಿಶ್ತ್ ಯಾವ ಕ್ರೇಡೆಗೆ ಸಂಬಂಧಿಸಿದ್ದಾರೆ?
5 ಪ್ಯಾಲೆಸ್ತೇನ್ನ ಪ್ರಧಾನ ಮಂತ್ರಿಯಾಗಿ ಯಾರು ನೇಮಕಗೊಂಡರು?
6 2019 ರ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ನಲ್ಲಿ ನಕಲಿ ನೋಟುಗಳ ಪತ್ತೆಗಾಗಿ ಯಾವ ಐಐಟಿಯು ಪರಿಹಾರ ಸೂಚಿಸಿದೆ?
7 2019 ರ ಅಂತರರಾಷ್ಟ್ರೀಯ ಗೋಲ್ಡೆನ್ ಸಿಟಿ ಗೇಟ್ ಟೂರಿಸಂ ಅವಾರ್ಡ್ಸ್ ನ ಯಾವ ವಿಭಾಗದಲ್ಲಿ ಭಾರತ ಮೊದಲ ಬಹುಮಾನ ಗಳಿಸಿದೆ?
8 2019 ರ ಪ್ರಿಟ್ಜ್ಕರ್ ಆರ್ಕಿಟೆಕ್ಚರ್ ಪ್ರಶಸ್ತಿ ಸ್ವೀಕರಿಸಿದವರು ಯಾರು?
9 ಇತ್ತೀಚೆಗೆ ಸುದ್ದಿಯಲ್ಲಿದ್ದ ‘Large Hadron Collider-LHC’ ಯಾವ ಸಂಸ್ಥೆಗೆ ಸಂಬಂಧಿಸಿದ್ದು?
10 ‘ಟೈಗರ್ ವೂಮನ್ (Tiger Woman)’ ಪುಸ್ತಕದ ಲೇಖಕರು ಯಾರು?
ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ
1 ಕೇರಳ
2 ಸೌಮ್ಯ ಸ್ವಾಮಿನಾಥನ್
3 INMAS, Delhi
4 ಬಾಕ್ಸಿಂಗ್
5 ಮೊಹಮ್ಮದ್ ಶ್ತಯ್ಯೇ(Mohammad Shtayyeh)
6 ಐಐಟಿ ಖರಗ್ಪುರ್
7 ಟಿವಿ ಸಿನೆಮಾ ಸ್ಫೋರ್ಟ್ಸ್
8 ಅರಟ ಐಸೋಝಾಕಿ
9 CERN – The European Organisation for Nuclear Research
10 ಸಿರ್ಶೋ ಬಂಡೋಪಧ್ಯಾಯ್
Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.