ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..
ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..
1 ಆರ್‌ಬಿಐ ಯಾವ ದೇಶದ ಕೇಂದ್ರ ಬ್ಯಾಂಕ್‌ನೊಂದಿಗೆ 75 ಬಿಲಿಯನ್ ಡಾಲರ್ ದ್ವಿಪಕ್ಷೀಯ ಸ್ವಾಪ್ ವ್ಯವಸ್ಥೆಗೆ ಸಹಿಹಾಕಿದೆ?
2 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ 500 ಸಿಕ್ಸರ್‌ಗಳನ್ನು ಬಾರಿಸಿದ ಕ್ರಿಕೆಟಿಗ ಯಾರು?
3 2019 ರ ಶೂನ್ಯ ತಾರತಮ್ಯ ದಿನ(Zero Discrimination Day) ದ ಥೀಮ್ ಏನು?
4 ಟೆಕ್ಸ್‌ಟೈಲ್ ಸಚಿವಾಲಯವು ಇತ್ತೀಚೆಗೆ ಹೆಣೆದ ಉಡುಪುಗಳ ಅಭಿವೃದ್ಧಿ ಕೇತ್ರದಡಿಯಲ್ಲಿ ಉದ್ಘಾಟಿಸಿದ ಕಾರ್ಯಕ್ರಮದ ಹೆಸರೇನು?
5 BCG-IBA ವರದಿ ಪ್ರಕಾರ, ಸುಧಾರಣೆಯ ಕಾರ್ಯಸೂಚಿ ಅನುಷ್ಠಾನದಡಿಯಲ್ಲಿ ಯಾವ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಮೊದಲ ಶ್ರೇಯಾಂಕ ಗಳಿಸಿದೆ?
6 ಲಿಗ್ನೋಸೆಲ್ಯುಲಾಸಿಕ್ ಬಯೋಮಾಸ್(Lignocellulosic Biomass) ಇತ್ತೀಚೆಗೆ ಸುದ್ದಯಾಗಿದ್ದು. ಇದು ಯಾವುದರೊಂದಿಗೆ ಸಂಬಂದಿಸಿದೆ?
7 ಸಮುದ್ರದಾಚೆಗಿನ ರೂಪಾಯಿ ಮಾರುಕಟ್ಟೆಯಲ್ಲಿ ಆರ್‌ಬಿಐ ಟಾಸ್ಕ್ ಫೋರ್ಸ್‌ನ ಮುಖ್ಯಸ್ಥರು ಯಾರು?
8 ವಿಜ್ಞಾನ ಯೋಜನೆಗಳಿಗೆ ಅನುದಾನ ನೀಡಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚವಾಲಯವು ಯಾವ ಯೋಜನೆಯನ್ನು ಜಾರಿಗೆ ತಂದಿದೆ?
9 ಅರಾವಳಿ ಬೆಟ್ಟಗಳಲ್ಲಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಯಾವ ರಾಜ್ಯ ಸರಕಾರವನ್ನು ಎಳೆದಿದೆ?
10 ಇತ್ತೀಚೆಗೆ ಕಠ್ಮಂಡುವಿನಲ್ಲಿ ನಡೆದ ‘ನೇಪಾಳ ಚೀಫ್ ಆಫ್ ಆರ್ಮಿ ಸ್ಟಾಫ್(COAS) ಓಪನ್ ಮ್ಯಾರಥಾನ್’ ಮತ್ತು ‘ರನ್ ಫಾರ್ ಫನ್’ 10 ಕಿಮೀ ರೇಸ್‌ನಲ್ಲಿ ಗೆದ್ದ ಭಾರತೀಯ ಅಥ್ಲೆಟಿಕ್ ಯಾರು?
ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ
1 ಜಪಾನ್
2 ಕ್ರಿಸ್ ಗೇಲ್
3 ತಾರತಮ್ಯವನ್ನು ಉಂಟುಮಾಡುವ ಕಾನೂನುಗಳನ್ನು ಬದಲಾಯಿಸುವುದು
4 ಪವರ್‌ಟೆಕ್ಸ್ ಇಂಡಿಯಾ
5 ಪಿಎನ್‌ಬಿ(ಪಂಜಾಬ್ ನ್ಯಾಷನಲ್ ಬ್ಯಾಂಕ್)
6 ಸೆಲ್ಯುಲೋಸ್, ಹೆಮಿಸೆಲ್ಯುಲೋಸ್, ಲಿಗ್ನಿನ್
7 ಉಷಾ ತಾರೋಟ್
8 STARS
9 ಹರಿಯಾಣ
10 ಶಶಾಂಕ್ ಶೇಖರ್