ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..
ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..
1 ರೋಮ್ ಸ್ಟಾಟ್ಯೂಟ್. ಇತ್ತೀಚೆಗೆ ಪ್ರಚಲಿತದಲ್ಲಿತ್ತು. ಇದು ಯಾವ ಸಂಸ್ಥೆಗೆ ಸಂಬಂಧಿಸಿದೆ?
2 ಯಾವ ಬಾಹ್ಯಾಕಾಶ ಏಜೆನ್ಸಿಯು ಕೇವಲ ಮಹಿಳಾ ಬಾಹ್ಯಾಕಾಶ ಗಗನಯಾನಿಗಳನ್ನು ಮಾತ್ರ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯಲಿದೆ?
3 ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವಂಚನೆ ತಡೆಯಲು IRDAI ಮತ್ತು NHA ರೂಪಿಸಿರುವ ಜಂಟಿ ಕಾರ್ಯಾಚರಣೆಯ ಮುಖ್ಯಸ್ಥರು ಯಾರು?
4 UNDP Goodwill ರಾಯಭಾರಿಯಾಗಿ ಯಾವ ಭಾರತೀಯ ಮೂಲದ ಅಮೆರಿಕ ಪ್ರಜೆಯನ್ನು ನೇಮಿಸಲಾಗಿದೆ?
5 2019ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಥೀಮ್ ಏನು?
6 ಇತ್ತೀಚೆಗೆ ಸುದ್ದಿಯಲ್ಲಿದ್ದ, ‘ಕಿರು ಹೈಡ್ರೋ ಎಲೆಕ್ಟ್ರಿಕ್ ಯೋಜನೆ’ಯು ಯಾವ ನದಿಗೆ ಕೈಗೊಳ್ಳಲಾಗಿದೆ?
7 ಯಾರು ಬಾಬಾ ಅಣು ಸಂಶೋಧನಾ ಕೇಂದ್ರದ(BARC) ನೂತನ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ?
8 ಟ್ರ್ಯಾನ್ಸ್ಫಾರ್ಮೇಟಿವ್ ಮೊಬಿಲಿಟಿ ಮತ್ತು ಬ್ಯಾಟರಿ ಸ್ಟೋರೇಜ್ ರಾಷ್ಟ್ರೀಯ ನಿಯೋಗದ ಅಧ್ಯಕ್ಷ ಯಾರು?
9 ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶ ಕಾರ್ಯಕ್ರಮಗಳಿಗಾಗಿ ಕೇಂದ್ರ ಮತ್ತು ಈಶಾನ್ಯ ರಾಜ್ಯಗಳ ನಡುವಿನ ಅನುದಾನ ವಿಧಾನ ಯಾವುದು?
10 ಇತ್ತೀಚೆಗೆ ನಿಧನರಾದ ಭೌತವಿಜ್ಞಾನಿ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ Dr.Zhores Alferov ರವರು ಯಾವ ದೇಶದವರು?
ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ.
1 ಅಂತರಾಷ್ಟ್ರೀಯ ಅಪರಾಧ ನ್ಯಾಯಾಲಯ
2 ನಾಸಾ
3 ದಿನೇಶ್ ಅರೋರಾ
4 ಪದ್ಮ ಲಕ್ಷ್ಮಿ
5 ಥಿಂಕ್ ಈಕ್ವಲ್, ಬಿಲ್ಡ್ ಸ್ಮಾರ್ಟ್, ಇನೋವೇಟ್ ಫಾರ್ ಚೇಂಜ್
6 ಚಿನಾಬ್
7 ಅಜಿತ್ ಕುಮಾರ್ ಮೊಹಂತಿ
8 ಅಮಿತಾಬ್ ಕಾಂತ್
9 70:30
10 ರಷ್ಯಾ
Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.