ಸ್ಮಾರ್ಟ್ಫೋನ್ ಪ್ರಿಯರಿಗೆ ಬಹುದಿನಗಳಿಂದ ಕುತೂಹಲ ಮೂಡಿಸಿರುವ ಮೊಟೊರೊಲಾ, ಜೂನ್ನಲ್ಲಿ ತನ್ನ ಹಲವು ಹೊಸ ಪ್ರಾಡಕ್ಟ್ಗಳ ಬಗ್ಗೆ ಪ್ರಕಟಣೆ ಹೊರಡಿಸುವ ಸಿದ್ಧತೆಯಲ್ಲಿತ್ತು. ಅದರೆ ಅದಕ್ಕೂ ಮುನ್ನ ಈಗ ಲೆನೊವೊ ಬ್ರ್ಯಾಂಡ್ನ ಮಧ್ಯಮ ಬೆಲೆಯ ಹೊಸ ಫೋನ್ ಒಂದನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಹೌದು. ಲೆನೊವೊ ಬ್ರ್ಯಾಂಡ್ನ ಮೊಟೊರೊಲಾ ‘ಮೊಟೊ ಜಡ್3 ಪ್ಲೇ(Moto z3 play) ಸ್ಮಾರ್ಟ್ಫೋನ್ ಅನ್ನು ಮುಂದಿನ ತಿಂಗಳು ಜೂನ್ 6 ರಂದು ಬಿಡುಗಡೆ ಮಾಡುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗಿದೆ. ಮಧ್ಯಮ ಬೆಲೆಯ ಈ ಸ್ಮಾರ್ಟ್ಫೋನ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ, ಭಾರತದಲ್ಲಿ ಅದರ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ
– ‘ಮೊಟೊ ಜಡ್3 ಪ್ಲೇ(Moto z3 play) ಸ್ಮಾರ್ಟ್ಫೋನ್ ಮೊಟೊ ಮೋಡ್ಸ್ ಸಪೋರ್ಟ್ ಮಾಡಲಿದ್ದು, ಸ್ನಾಫ್ಡ್ರಾಗನ್ 636 soc ಪ್ರೊಸೆಸರ್ ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
– ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಫೇಸ್ ಅನ್ಲಾಕ್ ಫೀಚರ್ ಇದೆ.
– 3000mAh ಬ್ಯಾಟರಿ ಸಾಮರ್ಥ್ಯ
– 6-inch 18:9 full-HD+ (1080×2160 ಪಿಕ್ಸೆಲ್) AMOLED ಡಿಸ್ಪ್ಲೇ ಜೊತೆಗೆ 2.5D ಗೊರಿಲ್ಲಾ ಗ್ಲಾಸ್ ಸುರಕ್ಷತೆ
– low-light ಸೆನ್ಸಾರ್ ನ 12mp ಹಿಂಬದಿ ಕ್ಯಾಮೆರಾ ಮತ್ತು 8mp ಸೆಲ್ಫಿ ಕ್ಯಾಮೆರಾ
– ವಿನ್ಯಾಸದಲ್ಲಿ ಗ್ಲಾಸ್ ಪ್ಯಾನೆಲ್, ಥಿನ್ನರ್ ಬೆಜೆಲ್ಸ್ ಮ್ತು ಸರ್ಕ್ಯೂಲರ್ ಕ್ಯಾಮೆರಾ ಹೊಂದಿದೆ
-ಕನೆಕ್ಟರ್ ಡಾಟ್ಗಳನ್ನು ಹ್ಯಾಂಡ್ಸೆಟ್ನ ಕೆಳಭಾಗದಲ್ಲಿ ಹಿಂಬದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
– ಫಿಂಗರ್ಪ್ರಿಂಟ್ ಸೆನ್ಸಾರ್
– ಆಂಡ್ರಾಯ್ಡ್ 8.1.0 ಆಪರೇಟಿಂಗ್ ಸಿಸ್ಟಮ್
ಭಾರತದಲ್ಲಿ ‘ಮೊಟೊ ಜಡ್3 ಪ್ಲೇ(Moto z3 play) ಬೆಲೆ ಎಷ್ಟು?
ಕೆಳದ ವರ್ಷ ಮೊಟೊ ಲಾಂಚ್ ಮಾಡಿದ್ದ ಮೊಟೊ ಜಡ್2 ಬೆಲೆ ರೂ.27,999 ನಿಗದಿಪಡಿಸಿತ್ತು. ಅಂತೆಯೇ ಈಗ ಭಾರತದಲ್ಲಿ ಜೂನ್ 6 ರಂದು ಅನಾವರಣಗೊಳ್ಳಲಿರುವ ‘ಮೊಟೊ ಜಡ್3 ಪ್ಲೇ(Moto z3 play) ಸ್ಮಾರ್ಟ್ಫೋನ್ ಸಹ ಮಧ್ಯಮ ಬೆಲೆಯಾಗಿ 27,999 ರೂಗೆ ಲಭ್ಯವಾಗುವ ಸಾಧ್ಯತೆಗಳಿದೆ ಎನ್ನಲಾಗುತ್ತಿದೆ.
Lenovo branded Motorola expected to launch ‘Moto Z3 Play’ on june 6. Here Smartphone geeks can know its features like Design, specs, price and everything else