ಈ ಲೇಖನದಲ್ಲಿ ಮುದ್ರಾ ಲೋನ್ ಅನ್ನು ಯಾವ ಎಲ್ಲಾ ಕ್ಷೇತ್ರಗಳಲ್ಲಿ ಸ್ವಂತ ಉದ್ಯಮ ಆರಂಭಿಸಲು ನೀಡಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ನಿಮ್ಮ ಕನ್ನಡ ಅಡ್ವೈಜರ್ ನೀಡುತ್ತಿದೆ. ಮುಂದೆ ಓದಿರಿ..
ಸಾರಿಗೆ ವಾಹನಗಳು
ಗೂಡ್ಸ್ ಮತ್ತು ವೈಯಕ್ತಿಕ ಸಾರಿಗೆ, ಆಟೋ ರಿಕ್ಷಾ, ಸಣ್ಣ ಗೂಡ್ಸ್ ವಾಹನಗಳು, ತ್ರಿಚಕ್ರವಾಹನಗಳು, ಇ-ರಿಕ್ಷಾಗಳು, ಪ್ಯಾಸೆಂಜರ್ ಕಾರುಗಳು, ಟ್ಯಾಕ್ಸಿ ಮತ್ತು ಇತರೆ.
ಸಮುದಾಯ, ಸಾಮಾಜಿಕ ಮತ್ತು ವೈಯಕ್ತಿಕ ಸೇವಾ ಚಟುವಟಿಕೆಗಳು
ಸಲೂನ್ ಪಾರ್ಲರ್ಗಳು, ಬ್ಯೂಟಿ ಪಾರ್ಲರ್ಗಳು, ಜಿಮ್ನಾಷಿಯಂ, ಟೈಲರಿಂಗ್ ಶಾಪ್ಗಳು, ಡ್ರೈ ಕ್ಲೀನಿಂಗ್, ಸೈಕಲ್ ಮತ್ತು ಮೋಟಾರು ಸೈಕಲ್ ರಿಪೇರಿ ಅಂಗಡಿಗಳು, ಡಿಟಿಪಿ ಮತ್ತು ಫೋಟೋಕಾಪಿಯಿಂಗ್ ಸೌಲಭ್ಯಗಳು, ಮೆಡಿಷನ್ ಶಾಪ್ಗಳು, ಕೊರಿಯರ್ ಏಜೆಂಟ್ಸ್ ಇತ್ಯಾದಿಗಳು.
ಆಹಾರ ಉತ್ಪನ್ನ ಕ್ಷೇತ್ರಗಳು
ಗ್ರಾಮೀಣ ಮಟ್ಟದಲ್ಲಿ ಕೃಷಿ ಉತ್ತನ್ನ ಸಂರಕ್ಷಣೆ, ಸಿಹಿ ಪದಾರ್ಥಗಳ ಅಂಗಡಿಗಳು, ಸಣ್ಣ ಮಟ್ಟದ ಫುಡ್ ಸ್ಟಾಲ್ಗಳು, ಕ್ಯಾಟೆರಿಂಗ್ ಸರ್ವಿಸ್, ಕ್ಯಾಂಟೀನ್ ಸರ್ವೀಸ್, ಕೋಲ್ಡ್ ವಾಹನಗಳು, ಕೋಲ್ಡ್ ಸಂಗ್ರಹ ಮಳಿಗೆಗಳು, ಐಸ್ ತಯಾರಿಕಾ ಘಟಕಗಳು, ಐಸ್ ಕ್ರೀಮ್ ತಯಾರಿಕಾ ಘಟಕಗಳು, ಬಿಸ್ಕೆಟ್ ಮತ್ತು ಬ್ರೆಡ್ ತಯಾರಿಕಾ ಘಟಕಗಳ ನಿರ್ಮಾಣಕ್ಕೂ ಮುದ್ರಾ ಲೋನ್ ನೀಡಲಾಗುತ್ತದೆ.
ಜವಳಿ ಉತ್ಪನ್ನ ವಲಯಗಳು
ಜವಳಿ ಉತ್ಪನ್ನ ವಲಯಗಳಲ್ಲಿ ಸಿದ್ಧ ಉಡುಪು ಮತ್ತು ಬಟ್ಟೆ ತಯಾರಿಕೆಯ ಎಲ್ಲಾ ವಿಧದ ಚಟುವಟಿಕೆಗಳಿಗಾಗಿ ಲೋನ್ ದೊರೆಯುತ್ತದೆ.
ಶಾಪ್ಕೀಪರ್ ಮತ್ತು ವ್ಯಾಪಾರಿಗಳಿಗೆ ಬ್ಯುಸಿನೆಸ್ ಲೋನ್
ಉದ್ಯಮಿಗಳಿಗೆ, ಕೃಷಿಯೇತರ ಆದಾಯ ಚಟುವಟಿಕೆಗಳನ್ನು ನಡೆಸಲು ರೂ 10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.
ಸಣ್ಣ ಘಟಕಗಳಿಗಾಗಿ ಮುದ್ರಾ ಲೋನ್
ಯಂತ್ರೋಪಕರಣಗಳ ಸಣ್ಣ ಎಂಟರ್ಪ್ರೈಸಸ್ ಸ್ತಾಪನೆಗಾಗಿ ರೂ.10 ಲಕ್ಷದವರೆಗೆ ಲೋನ್ ನೀಡಲಾಗುತ್ತದೆ.
ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳು
ಮೀನುಗಾರಿಕೆ, ಜೇನು ಸಾಗಾಣಿಕೆ, ಕೋಳಿ ಸಾಗಾಣಿಕೆ, ಜಾನುವಾರು ಸಾಕಣೆ, ಕೃಷಿ ಕೈಗಾರಿಕೆಗಳು, ಡೈರಿ, ಕೃಷಿ ಉದ್ಯಮ ಕೇಂದ್ರಗಳು, ಆಹಾರ ಮತ್ತು ಕೃಷಿ ಪ್ರಕ್ರಿಯೆ ಸಂಬಂಧಿ ಚಟುವಟಿಕೆಗಳು, ಬೆಳೆ ಸಾಲಗಳು, ಕಾಲುವೆ ಮತ್ತು ಬಾವಿ ಅಭಿವೃದ್ದಿ ಮತ್ತು ಇತರೆ ಆದಾಯ ತರುವಂತಹ ಚಟುವಟಿಕಗೆಗಳಿಗೆ ಸಾಲ ದೊರೆಯುತ್ತದೆ.
In this article readers can know complete details about Mudra Loan offring fields.
ಚಿತ್ರ ಕೃಪೆ:www.mudra.org.in